ಚಿಂಚೋಳಿ ತಾಲೂಕಿನಲ್ಲಿ ಮುಂಗಾರಿನ ಬಿತ್ತನೆ ಕಾರ್ಯದಲ್ಲಿ ತೊಡಗಿದ ರೈತರು

| Published : Jun 11 2024, 01:35 AM IST

ಚಿಂಚೋಳಿ ತಾಲೂಕಿನಲ್ಲಿ ಮುಂಗಾರಿನ ಬಿತ್ತನೆ ಕಾರ್ಯದಲ್ಲಿ ತೊಡಗಿದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದೆರಡು ದಿನಗಳಿಂದ ಅಬ್ಬರದ ಮತ್ತು ಬಿರುಸಿನಿಂದ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಭಾರಿ ಮಳೆ ಆಗಿರುವುದರಿಂದ ಅನೇಕ ಗ್ರಾಮಗಳಲ್ಲಿ ರೈತರು ಮುಂಗಾರು ಬಿತ್ತನೆ ಕಾರ್ಯವನ್ನುಪ್ರಾರಂಭಿಸಿರುವುದರಿಂದ ಕೃಷಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಅಬ್ಬರದ ಮತ್ತು ಬಿರುಸಿನಿಂದ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಭಾರಿ ಮಳೆ ಆಗಿರುವುದರಿಂದ ಅನೇಕ ಗ್ರಾಮಗಳಲ್ಲಿ ರೈತರು ಮುಂಗಾರು ಬಿತ್ತನೆ ಕಾರ್ಯವನ್ನುಪ್ರಾರಂಭಿಸಿರುವುದರಿಂದ ಕೃಷಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ.

ತಾಲೂಕಿನಲ್ಲಿ ಜೂನ್ ಮೊದಲ ವಾರದಲ್ಲಿ ಗ್ರಾಮ/ತಾಂಡಾಗಳಲ್ಲಿ ಸಾಧಾರಣದಿಂದ ಮಳೆ ಆಗಿದೆ.ಆದರೆ ಕಳೆದ ಎರಡು ದಿನಗಳ ಕಾಲ ತಾಲೂಕಿನ ಹಲವೆಡೆ ಭಾರಿ ಮಳೆ ಆಗಿರುವುದರಿಂದ ರೈತರು ಮುಂಗಾರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಮುಂಗಾರಿ ಹಂಗಾಮಿನಲ್ಲಿ ಹೆಸರು, ಉದ್ದು, ತೊಗರಿ, ಸೋಯಾಬಿನ್, ಸಜ್ಜೆ, ನವಣಿ, ಸೂರ್ಯಕಾಂತ ಬಿತ್ತನೆ ಬೀಜಗಳನ್ನು ರೈತರು ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದಾರೆ.

ಕಳೆದ ವರ್ಷ ರೈತರು ಜೂನ್ ಮೊದಲ ವಾರದಲ್ಲಿಯೇ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದರು ಜುಲೈ ಮೊದಲ ವಾರದಲ್ಲಿಯೇ ಬೆಳೆಗಳಲ್ಲಿ ಕಳೆ ಕೀಳುವ ಕಾರ್ಯವನ್ನು ಪ್ರಾರಂಭಿಸಿದ್ದರು.ಈ ವರ್ಷವು ಸಹಾ ಮುಂಗಾರು ಬೇಗನೆ ಪ್ರಾರಂಭಿಸಲಾಗಿದೆ ರೈತರ ಮೊಗದಲ್ಲಿ ಸಂತಸವನ್ನು ಕಾಣುವಂತಾಗಿದೆ.

ತಾಲೂಕು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಸಂಗ್ರಹಣೆ ಮಾಡಲಾಗಿದ್ದು ಯಾವುದೇ ಬೀಜಗಳ ಕೊರತೆ ಇರುವುದರಿಂದ ರೈತರು ಕೂಪನ ಪಡೆದುಕೊಂಡು ತಮಗೆ ಬೇಕಾದ ಬೀಜಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.ರೈತರು ತಮ್ಮಹೊಲಗಳಲ್ಲಿ ಮುಂಗಾರು ಬಿತ್ತನೆ ಮಾಡುವ ಸಂದರ್ಭದಲ್ಲಿ ಕೃಷಿ ಇಲಾಖೆ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.