ತೋಟಗಾರಿಕೆಯ ೭ ಸಾವಿರ ಎಕರೆ ಮತ್ತು ಕೃಷಿ ಇಲಾಖೆಯ ₹ ೪೦ ಸಾವಿರ ಎಕರೆ ಕೃಷಿ ಭೂಮಿಯ ರೈತರಿಗೆ ಬರ ಪರಿಹಾರ ಹಣ ನೀಡಬೇಕಿದ್ದ ರಾಜ್ಯ ಸರ್ಕಾರ ಇಲ್ಲಿಯ ತನಕ ಪರಿಹಾರದ ಹಣ ನೀಡಿಲ್ಲ. ರೈತರಿಗೆ ಬರ ಪರಿಹಾರ ಹಣ ವಿತರಿಸಲು ತಾರತಮ್ಯ ತೋರುತ್ತಿರುವ ರಾಜ್ಯ ಸರ್ಕಾರವೂ ರೈತರಿಗೆ ನ್ಯಾಯಸಮ್ಮತವಾಗಿ ಕೊಡಬೇಕಿರುವ ಪರಿಹಾರದ ಹಣವನ್ನು ಹೋರಾಟ ಮಾಡಿಯಾದರೂ ಕೊಡಿಸಬೇಕಾಗುತ್ತದೆ ಎಂದರು. ಮಳೆ ಇಲ್ಲದೇ ಕೆರೆಕಟ್ಟಗಳು ಒಣಗಿದ್ದು. ಜಾನುವಾರುಗಳಿಗೆ ನೀರು ಕುಡಿಸಲಾಗದೇ ರೈತರು ಪರಿತಪಿಸುತ್ತಿದ್ದು, ಇಂತಹ ಸನ್ನವೇಶದಲ್ಲಿ ಕೆರೆಕಟ್ಟೆಗಳಿಗೆ ನೀರ ಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರನಮ್ಮ ತಾಲೂಕಿನಲ್ಲಿ ಕೃಷಿ ಭೂಮಿ ಹೊಂದಿರುವ ೩೪,೮೫೦ ರೈತರಿಗೆ ಇಲ್ಲಿಯ ತನಕ ಬರ ಪರಿಹಾರದ ಐದು ಸಾವಿರ ರು. ಹಣ ಒಬ್ಬರಿಗೂ ಬಂದಿಲ್ಲ. ಒಟ್ಟು ೧೭,೪೨,೫೦,೦೦೦ ರು. ಹಣ ಪರಿಹಾರ ನೀಡಬೇಕಿದ್ದು, ಹಣವೂ ಇನ್ನೂ ಬರುತ್ತಲೇ ಇದೆ ಎಂದು ಶಾಸಕ ಎಚ್. ಡಿ. ರೇವಣ್ಣ ರಾಜ್ಯಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತೋಟಗಾರಿಕೆಯ ೭ ಸಾವಿರ ಎಕರೆ ಮತ್ತು ಕೃಷಿ ಇಲಾಖೆಯ ₹ ೪೦ ಸಾವಿರ ಎಕರೆ ಕೃಷಿ ಭೂಮಿಯ ರೈತರಿಗೆ ಬರ ಪರಿಹಾರ ಹಣ ನೀಡಬೇಕಿದ್ದ ರಾಜ್ಯ ಸರ್ಕಾರ ಇಲ್ಲಿಯ ತನಕ ಪರಿಹಾರದ ಹಣ ನೀಡಿಲ್ಲ. ರೈತರಿಗೆ ಬರ ಪರಿಹಾರ ಹಣ ವಿತರಿಸಲು ತಾರತಮ್ಯ ತೋರುತ್ತಿರುವ ರಾಜ್ಯ ಸರ್ಕಾರವೂ ರೈತರಿಗೆ ನ್ಯಾಯಸಮ್ಮತವಾಗಿ ಕೊಡಬೇಕಿರುವ ಪರಿಹಾರದ ಹಣವನ್ನು ಹೋರಾಟ ಮಾಡಿಯಾದರೂ ಕೊಡಿಸಬೇಕಾಗುತ್ತದೆ ಎಂದರು. ಮಳೆ ಇಲ್ಲದೇ ಕೆರೆಕಟ್ಟಗಳು ಒಣಗಿದ್ದು. ಜಾನುವಾರುಗಳಿಗೆ ನೀರು ಕುಡಿಸಲಾಗದೇ ರೈತರು ಪರಿತಪಿಸುತ್ತಿದ್ದು, ಇಂತಹ ಸನ್ನವೇಶದಲ್ಲಿ ಕೆರೆಕಟ್ಟೆಗಳಿಗೆ ನೀರ ಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.