ಸಾರಾಂಶ
ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಣೆ ಮತ್ತು ತುಂಗಭದ್ರಾ ಆಲಮಟ್ಟಿ ಜಲಾಶದಲ್ಲಿರುವ ಹೂಳು ತೆರವಿಗೆ ಒತ್ತಾಯಿಸಿ ಅಂಜನಾದ್ರಿಯಿಂದ ಹೊಸ ದೆಹಲಿ ಸಂಸತ್ ಭವನದವರೆಗೆ ನಡೆಯುವ ರೈತರ ಪಾದಯಾತ್ರೆಗೆ ಬುಧವಾರ ಚಾಲನೆ ದೊರೆಯಿತು. ಯಲಬುರ್ಗಾ ತಾಲೂಕಿನ ಯಲಬೆಂಚಿ ಗ್ರಾಮದ ನಬಿಸಾಬ ಎಂ. ಹುಲಗೇರಿ ನೇತೃತ್ವದಲ್ಲಿ ಬುಧವಾರ ಅಂಜನಾದ್ರಿಯ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಕೈಗೊಂಡರು.
ಕನ್ನಡಪ್ರಭ ವಾರ್ತೆ ಗಂಗಾವತಿ
ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಣೆ ಮತ್ತು ತುಂಗಭದ್ರಾ ಆಲಮಟ್ಟಿ ಜಲಾಶದಲ್ಲಿರುವ ಹೂಳು ತೆರವಿಗೆ ಒತ್ತಾಯಿಸಿ ಅಂಜನಾದ್ರಿಯಿಂದ ಹೊಸ ದೆಹಲಿ ಸಂಸತ್ ಭವನದವರೆಗೆ ನಡೆಯುವ ರೈತರ ಪಾದಯಾತ್ರೆಗೆ ಬುಧವಾರ ಚಾಲನೆ ದೊರೆಯಿತು.ಯಲಬುರ್ಗಾ ತಾಲೂಕಿನ ಯಲಬೆಂಚಿ ಗ್ರಾಮದ ನಬಿಸಾಬ ಎಂ. ಹುಲಗೇರಿ ನೇತೃತ್ವದಲ್ಲಿ ಬುಧವಾರ ಅಂಜನಾದ್ರಿಯ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಕೈಗೊಂಡರು.ಈ ಸಂದರ್ಭದಲ್ಲಿ ಪಾದಯಾತ್ರೆಯ ನೇತೃತ್ವ ವಹಿಸಿದ್ದ ನಬಿಸಾಬ ಮಾತನಾಡಿ, ನೀರಿಗಾಗಿ ರೈತರ ನ್ಯಾಯಯುತ ಪಾದಯಾತ್ರೆ ಇದಾಗಿದೆ. ಮುಖ್ಯವಾಗಿ ಉತ್ತರ ಭಾರತ ನದಿಗಳನ್ನು ದಕ್ಷಿಣ ಭಾರತದ ನದಿಗಳಿಗೆ ಜೋಡಣೆ ಮತ್ತು ತುಂಗಭದ್ರಾ, ಆಲಮಟ್ಟಿ ಜಲಾಶಯದಲ್ಲಿರುವ ಹೂಳನ್ನು ಎತ್ತುವುದಕ್ಕಾಗಿ ಪ್ರಧಾನಮಂತ್ರಿಯವರನ್ನು ಒತ್ತಾಯಿಸಲಾಗುವುದು ಎಂದರು.ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಗದಗ ಜಿಲ್ಲೆಯ ಗಜೇಂದ್ರಗಡ, ರೋಣ , ಬಾಗಲಕೋಟೆಯ ಇಲಕಲ್ ತಾಲೂಕುಗಳಲ್ಲಿರುವ ಜಮೀನುಗಳಿಗೆ ನೀರಾವರಿ ಯೋಜನೆ ತರಬೇಕೆಂದು ಒತ್ತಾಯಿಸಲಾಗುವುದು ಎಂದರು.10 ರೈತರ ತಂಡವು ಪಾದಯಾತ್ರೆ ಕೈಗೊಂಡಿದ್ದು, ಎರಡು ತಿಂಗಳ ಕಾಲ ಪಾದಯಾತ್ರೆ ನಡೆಯಲಿದೆ. ದಿನಕ್ಕೆ 30 ಕಿ.ಮೀ. ಪಾದಯಾತ್ರೆ ಕೈಗೊಳ್ಳಲಾಗುತ್ತದೆ. ಪಾದಯಾತ್ರೆಗೆ ಸಂಸದರು, ಸಚಿವರು, ಶಾಸಕರು, ಸ್ಥಳೀಯ ಸಂಘ-ಸಂಸ್ಥೆಯವರು ಸಹಕಾರ ನೀಡುತ್ತಿದ್ದಾರೆ ಎಂದರು.ಪಾದಯಾತ್ರೆಯಲ್ಲಿ ಯಮನೂರ, ಶಿವಾನಂದ, ಬಸವರಾಜ್, ಮುಕ್ತುಂಸಾಬ, ಮುರ್ತುಜಾಸಾಬ, ಅಲ್ಲಾಸಾಬ ಸೇರಿದಂತೆ ಇತರರು ಪಾಲ್ಗೊಂಡಿದ್ದಾರೆ.