ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮುಂಗಾರು ಮಳೆ ಕೈ ಕೊಟ್ಟಿದ್ದು, ಬಿತ್ತನೆ ಮಾಡಿ ಮುಗಿಲಿನತ್ತ ನೋಡುತ್ತಿರುವ ರೈತರು ಇದೀಗ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಮುಂಗಾರು ಮಳೆ ಉತ್ತಮವಾಗಿರಲಿ ಎಂದು ಪ್ರಾರ್ಥಿಸಿ ರೈತರು ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಆರಾಧ್ಯದೈವ ಮೂಲನಂದೀಶ್ವರನಿಗೆ ಹಾಗೂ ಸಂಗಮನಾಥ ದೇವರಿಗೆ ಮುಂಗಾರು ಮಳೆಗಾಗಿ ಪ್ರಾರ್ಥಿಸಿ ಸೋಮವಾರ ವಿಶೇಷ ಪೂಜೆ ಪುನಸ್ಕಾರ ನಡೆಸಿದರು.ಪಟ್ಟಣದ ಹಿರಿಯರು-ಯುವಕರು ಆಲಮಟ್ಟಿಯಲ್ಲಿರುವ ಕೃಷ್ಣಾ ನದಿಯಿಂದ ನೀರು ತಂದು ಇಡೀ ದೇವಾಲಯವನ್ನು ತೊಳೆದು ನಂತರ ದೇವಸ್ಥಾನದಲ್ಲಿರುವ ಸಂಗಮನಾಥ ದೇವರಿಗೆ ಹಾಗೂ ಮೂಲನಂದೀಶ್ವರ ದೇವರಿಗೆ ರುದ್ರಾಭಿಷೇಕ, ಜಲಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ದೇವರುಗಳಿಗೆ ಕೃಷ್ಣಾ ನದಿಯಿಂದ ತಂದ ನದಿ ನೀರಿನಿಂದ ದೇವರಿಗೆ ಅಭಿಷೇಕ ಮಾಡಲಾಯಿತು. ಮೂಲನಂದೀಶ್ವರ ದೇವರ ಹಾಗೂ ಸಂಗಮನಾಥ ದೇವರ ರುದ್ರಾಭಿಷೇಕ ಪೂಜೆಯನ್ನು ಗುರಯ್ಯ ಸಾರಂಗಮಠ, ಗೌರೀಶ ಚರಂತಿಮಠ ನೆರವೇರಿಸಿದರು.
ಮಳೆ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದು, ಉತ್ತಮವಾಗಿ ಮಳೆಯಾಗಲಿ ನದಿಗಳು ತುಂಬಿ ಉತ್ತಮ ಬೆಳೆಗಳು ಬೆಳೆಯಲಿ ಎಂದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಿವಾನಂದ ಈರಕಾರಮುತ್ಯಾ, ನಿಂಗಪ್ಪ ಜೈನಾಪುರ, ಚಂದ್ರಶೇಖರ ಮುರಾಳ, ಸಂಗಪ್ಪ ಡಂಬಳ, ಬಸವಂತ ಅಡಗಿಮನಿ, ಶರಣಪ್ಪ ನಾಡಗೌಡ, ಸಂಗಪ್ಪ ಕೋಣಿನ, ಗಿರೀಶ ಹಾರಿವಾಳ, ಸುರೇಶ ಹಾರಿವಾಳ, ಮಲ್ಲಪ್ಪ ಅಡಗಿಮನಿ, ಶ್ರೀಕಾಂತ ಬಾಡಗಿ, ಶಿವಪ್ಪ ಶೀಕಳವಾಡಿ, ಶಿವಪ್ಪ ಹೂಗಾರ, ಕಾಂತು ರೆಡ್ಡರ, ಪಾವಡೆಪ್ಪ ಕೊಂಡಗುಳಿ, ಮಲ್ಲಯ್ಯ ನರಸಲಗಿಮಠ, ಸಂತು ವಾಡೇದ, ಬೀರಪ್ಪ ಪೂಜಾರಿ, ಶರಣಪ್ಪ ಗುಡ್ಡದ, ಸಂತೋಷ ಕೂಡಗಿ, ಪುಟ್ಟು ಮದರಿ, ಜಗದೀಶ ನಿಕ್ಕಂ, ರೈತ ಕುಟುಂಬದ ಮಹಿಳೆಯರು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.