ಅನಿಯಮಿತ ವಿದ್ಯುತ್‌: ರೈತರ ಆಕ್ರೋಶ

| Published : Feb 14 2024, 02:16 AM IST

ಸಾರಾಂಶ

ಗ್ರಾಮೀಣ ಪ್ರದೇಶಗಳಿಗೆ ನಿರಂತರ 7 ತಾಸು ವಿದ್ಯುತ್ ಪೂರೈಕೆಯ ಭರವಸೆಯ ಹೊರತಾಗಿಯೂ ರೈತರಿಗೆ ದಿನದ ಎರಡು ಗಂಟೆಯು ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಎಚ್.ಕೃಷ್ಣಮೂರ್ತಿ ದಾಸನ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಆನಂದಪುರ ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಕೊಳವೆಬಾವಿ ಮತ್ತು ತೆರೆದ ಬಾವಿಗಳನ್ನು ಅವಲಂಬಿಸಿರುವ ರೈತರು ಸಮರ್ಪಕವಾಗಿ ಬಳಸಿ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಎಚ್.ಕೃಷ್ಣಮೂರ್ತಿ ದಾಸನ್ ತಿಳಿಸಿದರು.

ಅಸಮರ್ಪಕ ವಿದ್ಯುತ್ ವಿರೋಧಿಸಿ. ಈ ಭಾಗದ ರೈತರು ಆನಂದಪುರ ಮೆಸ್ಕಾಂ ಕಚೇರಿಯ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ನಿರಂತರ 7 ತಾಸು ವಿದ್ಯುತ್ ಪೂರೈಕೆಯ ಭರವಸೆಯ ಹೊರತಾಗಿಯು ರೈತರಿಗೆ ದಿನದ ಎರಡು ಗಂಟೆಯು ವಿದ್ಯುತ್ ಪೂರೈಕೆ ಆಗುತ್ತಿಲ್ಲ ಆದ್ದರಿಂದ ಗೌತಮಪುರ, ಜಂಬೂರಮನೆ, ಚನ್ನಶೆಟ್ಟಿ ಕೊಪ್ಪ ಭಾಗದಲ್ಲಿನ ರೈತರು ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಬಾರಿ ಮಳೆ ಇಲ್ಲದೆ ರೈತರು ಸಂಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಡಿಕೆ, ತೆಂಗು, ಬಾಳೆ, ಶುಂಠಿ, ಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ನಷ್ಟ ಅನುಭವಿ ಸುವ ಸ್ಥಿತಿ ನಿರ್ಮಾಣವಾಗಿದೆ. ಮೆಸ್ಕಾಂ ಅಧಿಕಾರಿಗಳು ಗೌತಮಪುರ, ಜಂಬೂರ್ ಮನೆ, ಚನ್ನಶೆಟ್ಟಿ ಕೊಪ್ಪ ಗ್ರಾಮದ ರೈತರಿಗೆ ಪ್ರತಿದಿನ 7 ತಾಸು 3 ಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಜೂನಿಯರ್ ಎಂಜಿನಿಯರ್ ಯೋಗೇಂದ್ರಪ್ಪ ಇದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಕಾಶ್ ಹುಗಳಿಮಕ್ಕಿ, ಕಾರ್ಯದರ್ಶಿ ಸಂತೋಷ್, ವಾಸು, ಸುರೇಶ್ ಟಾಕಪ್ಪ, ಮಂಜಪ್ಪ, ಹೊಳೆಯಪ್ಪ ಮತ್ತಿತರರು ಇದ್ದರು.ಆನಂದಪುರ ಮೆಸ್ಕಾಂ ಕಚೇರಿಯ ಎದುರು ಮಂಗಳವಾರ ಸರ್ಕಾರ ನೀಡುತ್ತಿರುವ ಅಸಮರ್ಪಕ ವಿದ್ಯುತ್ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.