ಎಫ್‌ಐಸಿ ನಿರ್ಮಾಣಕ್ಕೆ ಒತ್ತಾಯಿಸಿ ರೈತರ ಧರಣಿ

| Published : Jul 13 2025, 01:18 AM IST

ಎಫ್‌ಐಸಿ ನಿರ್ಮಾಣಕ್ಕೆ ಒತ್ತಾಯಿಸಿ ರೈತರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಬೂದಿಹಾಳ ಪೀರಾಪೂರ ಏತ ನೀರಾವರಿಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತರು ಶನಿವಾರ ನಾವದಗಿ ಕ್ರಾಸ್‌ದಿಂದ ಕೊಡಗಾನೂರ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಹೋರಾತ್ರಿ ಧರಣಿ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಬೂದಿಹಾಳ ಪೀರಾಪೂರ ಏತ ನೀರಾವರಿಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತರು ಶನಿವಾರ ನಾವದಗಿ ಕ್ರಾಸ್‌ದಿಂದ ಕೊಡಗಾನೂರ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಹೋರಾತ್ರಿ ಧರಣಿ ಆರಂಭಿಸಿದರು.ಈ ವೇಳೆ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಈಗಾಗಲೇ ₹ ೭೨೮ ಕೋಟಿ ವೆಚ್ಚದಲ್ಲಿ ಮುಖ್ಯ ಪೈಪ್‌ಲೈನ್‌ ಹಿಡಿದು ಉಳಿದ ಎಲ್ಲ ಕಾಮಗಾರಿಯೂ ಮುಕ್ತಾಯಗೊಂಡಿದೆ. ಆದರೆ ಕೊನೆಯ ಹಂತದ ಹೊಲ ಗಾಲುವೆ ಕಾಮಗಾರಿ ಪೂರ್ಣಗೊಂಡು ನೀರು ಹರಿಯಬೇಕಿತ್ತು. ಆದರೆ ಸರ್ಕಾರದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಕಾಮಗಾರಿಯೂ ಅಪೂರ್ಣಗೊಂಡಿದೆ. ಇದೇ ರೀತಿ ಮುಂದುವರೆದರೆ ಖರ್ಚು ವೆಚ್ಚ ಮಾಡಿದ ಹಣ ಎಲ್ಲವೂ ಹಾಳಾಗಿ ಹೋಗಲಿದೆ. ಈ ಯೋಜನೆಯು ಪೂರ್ಣಗೊಂಡರೆ ತಾಳಿಕೋಟೆ ತಾಲೂಕಿನ ೩೮ ಗ್ರಾಮಗಳ ರೈತರಿಗೆ ಅನೂಕೂಲವಾಗಲಿದೆ. ಅಲ್ಲದೇ ತಾಲೂಕಿನ ೫೧ ಸಾವಿರ ಏಕರೆ ಪ್ರದೇಶ ನೀರಾವರಿಗೊಳಪಡಲಿದೆ. ಇದಕ್ಕೆ ಅಗತ್ಯವಿರುವ ೧೭೦ ಕೋಟಿ ಅನುದಾನವನ್ನು ಸರ್ಕಾರವು ಶೀಘ್ರವೇ ಬಿಡುಗಡೆಗೊಳಿಸಿ ಮುಂದುವರೆದ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ರೈತ ಮುಖಂಡರಾದ ಪ್ರಭುಗೌಡ ಬಿರಾದಾರ(ಅಸ್ಕಿ), ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಎಂ.ಎಂ.ಪಾಟೀಲ(ಸಾಲವಾಡಗಿ), ರಾಜುಗೌಡ ಕೊಳೂರ, ಹಣಮಂತ್ರಾಯ ಕೊಣ್ಯಾಳ, ಶರಣುಧನಿ ದೇಶಮುಖ, ವಿರೇಶ ಹಿರೇಮಠ, ರಾಜು ಸಾಹುಕಾರ ಇಬ್ರಾಹಿಂಪೂರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮಗಳ ರೈತರು ಇದ್ದರು.---------

ಬಾಕ್ಸ್‌

ಮನವೊಲಿಕೆಗೆ ಒಪ್ಪದ ರೈತರುಧರಣಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಕಾರ್ಯನಿರ್ವಾಹಕ ಅಭಿಯಂತರ ಮುಂಡಾಸ್ ಹಾಗೂ ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಆಗಮಿಸಿ ಧರಣಿ ನಿರತರ ಮನವೊಲಿಕೆಗೆ ಪ್ರಯತ್ನಿಸಿದರು. ಧರಣಿ ನಿರತರ ಜೊತೆಗೆ ಚರ್ಚೆ ನಡೆಸಿದ ಇಇ ಮುಂಡಾಸ್, ಈಗಾಗಲೇ ಯೋಜನೆ ಪೂರ್ಣಗೊಳಿಸಲು ತಾಂತ್ರಿಕ ವಿಭಾಗದಲ್ಲಿ ನಿಂತಿದೆ. ೨೦೧೩-೧೪ನೇ ಸಾಲಿನ ಏಷ್ಟಿಮೇಟ್‌ ಮತ್ತು ಈಗಿನ ಏಷ್ಟಿಮೇಟ್‌ ವ್ಯತ್ಯಾಸವಿರುವುದರಿಂದ ಸರಿಪಡಿಸಿ ಬೋರ್ಡ್‌ ಹಂತಕ್ಕೆ ಹೋಗಲಿದೆ. ಈಗಾಗಲೇ ಶಾಸಕ ರಾಜುಗೌಡ ಪಾಟೀಲ ಅವರು ಉಪಮುಖ್ಯಮಂತ್ರಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಕಾಮಗಾರಿಗೆ ಒತ್ತಾಯಿಸಿದ್ದಾರೆ. ಆ ಪತ್ರಕ್ಕೆ ಉಪ ಮುಖ್ಯಮಂತ್ರಿಗಳು ಡಿಪಿಆರ್ ತಯಾರಿಸಿ ಸಭೆ ಮುಂದೆ ಮಂಡಿಸಲು ಕೆಬಿಜೆಎನ್‌ಎಲ್ ಎಂ.ಡಿ. ಅವರಿಗೂ ಸೂಚಿಸಿದ್ದಾರೆ. ಈ ಕಾಮಗಾರಿಗೆ ಯಾವುದೇ ತೊಂದರೆಗಳಿಲ್ಲ ಎಂದು ಪ್ರತಿಭಟನಾನಿರತರ ಮನವೊಲಿಕೆಗೆ ಯತ್ನಿಸಿದರು.

ಅಲ್ಲದೇ, ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಧರಣಿಯಿಂದ ಪ್ರಯೋಜನೆವಿಲ್ಲ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಸೋಮವಾರ ಇಂಡಿ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಆಗ ಮನವಿ ಸಲ್ಲಿಸುವ ಎಲ್ಲ ಅವಕಾಶವನ್ನು ನಾವು ಮಾಡಿಕೊಡುತ್ತೇವೆ. ದಯಮಾಡಿ ಧರಣಿಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು. ಆದರೆ, ಧರಣಿ ನಿರತ ರೈತರು ತಹಸೀಲ್ದಾರ್‌ ಹಾಗೂ ಕೆಬಿಜೆಎನ್‌ಎಲ್ ಇಂಜನಿಯರ್‌ ಮುಂಡಾಸ್‌ ಮಾತಿಗೆ ಒಪ್ಪದೆ ಧರಣಿ ಮುಂದುವರಿಸಿದರು.ಕೋಟ್‌ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಗೆ ಎಫ್‌ಐಸಿ ಕಾಲುವೆ ನಿರ್ಮಾಣ ಮಾಡಿ ತಾಳಿಕೋಟೆ ತಾಲೂಕಿನ ೩೮ ಹಳ್ಳಿಗಳಿಗೆ ರೈತರ ಜಮೀನುಗಳಿಗೆ ನೀರಿನ ಅನುಕೂಲತೆ ಕಲ್ಪಿಸಬೇಕೆಂಬ ಬೇಡಿಕೆಗೆ ನನ್ನ ಬೆಂಬಲಿವಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರ ಜೊತೆಗೆ ಚರ್ಚಿಸಿ ಶೀಘ್ರ ಮುಂದುವರಿದ ಕಾಮಗಾರಿಯ ಅನುದಾನ ಬಿಡುಗಡೆಗೊಳಿಸಲು ಮತ್ತು ಕಾಮಗಾರಿ ಪ್ರಾರಂಭಕ್ಕೆ ಅನುಮೋದನೆ ಕೊಡಿಸಲು ಪ್ರಯತ್ನಿಸುತ್ತೇನೆ.ಡಾ.ಪ್ರಭುಗೌಡ ಲಿಂಗದಳ್ಳಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ