ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರ ಪ್ರತಿಭಟನೆ

| Published : Nov 13 2025, 12:05 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಿ ಸುಮಾರು 1,10,000 ಎಕರೆ ಪ್ರದೇಶದಲ್ಲಿ ಮೆಕ್ಕೇ ಜೋಳ ಮತ್ತು ಪಾಪ್ ರ್ಕಾನ್ ಜೋಳ ಬೆಳೆಯುತ್ತಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಂ.ಎಸ್.ಪಿ ಬೆಲೆ ಕ್ವಿಂಟಲ್ ಗೆ 2,400 ರು. ಆಗಿರುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ಬುಧವಾರ ನಡೆಯಿತು.

ನಗರದ ಬಿಬಿ ರಸ್ತೆಯ ವಾಪಸಂದ್ರದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಕಚೇರಿ ಬಳಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭಿಸಿ ಅಂಬೇಡ್ಕರ್ ವೃತ್ತದ ಮೂಲಕ ನಗರ ಹೊರವಲಯದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಸೊಪ್ಪು, ತರಕಾರಿ, ಹಣ್ಣು, ಜೋಳ, ಹಿಪ್ಪುನೇರಳೆ ಸೊಪ್ಪು ಮತ್ತಿತರ ಉತ್ಪನ್ನಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಿ ಸುಮಾರು 1,10,000 ಎಕರೆ ಪ್ರದೇಶದಲ್ಲಿ ಮೆಕ್ಕೇ ಜೋಳ ಮತ್ತು ಪಾಪ್ ರ್ಕಾನ್ ಜೋಳ ಬೆಳೆಯುತ್ತಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಂ.ಎಸ್.ಪಿ ಬೆಲೆ ಕ್ವಿಂಟಲ್ ಗೆ 2,400 ರು. ಆಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರವು ಇಲ್ಲದ ಕಾರಣ ಸ್ಥಳಿಯ ಸಣ್ಣವ್ಯಾಪಾರಸ್ಥರು ಕ್ವಿಂಟಲ್ ಗೆ 1,600 ರು.ಗಳಿಂದ 2,000 ರು.ಗಳಿಗೆ ರೈತರಿಂದ ಖರೀದಿ ಮಾಡಿ ಹೊರ ರಾಜ್ಯಕ್ಕೆ ರಪ್ತು ಮಾಡುತ್ತಿದ್ದರು. ಆದರೆ ಇಲ್ಲಿನ ಪೆರೇಸಂದ್ರ ಮೂಲದ ವ್ಯಾಪಾರಿ ರಾಮಕೃಷ್ಣಪ್ಪ ಬಿನ್ ನರಸಿಂಹಪ್ಪ ಅವರಿಗೆ ಸರಿಸುಮಾರು ರು. 1,81,00,000, ತೆಲಂಗಾಣ ರಾಜ್ಯದ ಹೈದರಾಬಾದ್ ಮೂಲದ ದರೋಡೆಕೋರ ಜೋಳದ ವ್ಯಾಪಾರಿಗಳಾದ ನಾಸಿರ್ ಅಹಮದ್, ಸಯದ್ ಅಬ್ದುಲ್ ರಜಾಕ್ ಮತ್ತು ಸಯದ್ ಅಬ್ದುಲ್ ಅಕ್ಟರ್ ಪಾಷ ಎಂಬ 3 ಜನ ವಂಚನೆ ಮಾಡಿರುವ ಕೃತ್ಯಕ್ಕೆ ಪೆರೇಸಂದ್ರ ಮೂಲದ ವ್ಯಾಪಾರಿ ಆದ ರಾಮಕೃಷ್ಣಪ್ಪ ಬಿನ್ ನರಸಿಂಹಪ್ಪ ನವರು ರೈತರಿಗೆ ನೀಡಬೇಕದ ಹಣ ಒದಗಿಸಲಾಗದೆ ಕುಟುಂಬ ಸಮೇತರಾಗಿ ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಯಾವುದೇ ವ್ಯಪಾರಸ್ಥರು ಜೋಳ ಖರೀದಿ ಮಾಡಲು ಮುಂದಾಗದಿರುವ ಕಾರಣ ರೈತರು ಸಹ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಮಾರುಕಟೆ ಇಲ್ಲದೆ ಇರುವ ಕಾರಣ ರೈತರು ಕಂಗಾಲಾಗಿದ್ದಾರೆ. ಆದ ಕಾರಣ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿ, ರೈತರಿಗೆ ಆಗುತ್ತಿರುವ ವಂಚನೆಯನ್ನು ತಡೆಯಬೇಕು. ರಾಮಕೃಷ್ಣಪ್ಪ ಅವರಿಗೆ ನ್ಯಾಯ ಒದಗಿಸಿ ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಮೆಕ್ಕೆ ಜೋಳದ ಬೆಲೆ ಕುಸಿತವಾಗಿದ್ದು ಸರ್ಕಾರ ಬೆಂಬಲ ಬೆಲೆ ನೀಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೋಳದ ಖರೀದಿ ಮಾರುಕಟ್ಟೆಯನ್ನು ಮಾರುಕಟ್ಟೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಶಿಡ್ಲಘಟ್ಟತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರಭೂಮಿಯನ್ನು ಕೈಗಾರಿಕೆಗಳಿಂದ ಮೊದಲ ಅಧಿಸೂಚನೆ 2823 ಎಕರೆ ಭೂಮಿಯನ್ನು ಕೈಬಿಡುವಂತೆ ಓತ್ತಾಯಿಸಿದರು. ಸಮಸ್ಯೆ ಬಗೆಹರಿಯದಿದ್ದರೆ ರೈತರು (ಧನ,ಕರು, ಕುರಿ, ಕೋಳಿ, ಮೇಕೆ) ಕುಟ್ಟುಂಬ ಸಮೇತರಾಗಿ ವಿಧಾನ ಸೌಧದ ಒಳಗೆ ವಾಸಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷ ಎಚ್.ಪಿ. ರಾಮನಾಥರೆಡ್ಡಿ ಇದ್ದರು.

ಸಿಕೆಬಿ-2 ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಿದರು.

ಸಿಕೆಬಿ-2 ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಿದರು.