ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

| Published : Apr 04 2024, 01:04 AM IST

ಸಾರಾಂಶ

ಘಟಪ್ರಭ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್‌ ನೀರು ಹರಿಸಬೇಕು.

ಮುಧೋಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ತಾಲೂಕು ಘಟಕದ ವತಿಯಿಂದ ಬುಧವಾರ ಮಧ್ಯಾಹ್ನ ಸ್ಥ‍ಳೀಯ ಸಂಗೊಳ್ಳಿ ರಾಯಣ್ಣ ಸರ್ಕಲಿನಲ್ಲಿ ಕೆಲಹೊತ್ತು ರಸ್ತೆತಡೆದು ಪ್ರತಿಭಟನೆ ನೆಡೆಸಿದರು. ಘಟಪ್ರಭ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್‌ ನೀರು ಹರಿಸಬೇಕು. ಚಿಮ್ಮಡ್ ಗೇಟ್‌ನಿಂದ 800 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು. ಈಗಾಗಲೇ ಘಟಪ್ರಭ ನದಿಗೆ ಬಿಟ್ಟಿರುವ ನೀರನ್ನು ಯಾವುದೇ ಕಾರ್ಖಾನೆಯವರು ಬಳಸಬಾರದು. ಸಚಿವ ಶಿವಾನಂದ ಪಾಟೀಲರು ಮುಧೋಳದ ರೈತರ ಜೊತೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಕೇಳಿಲ್ಲ. ಆದ್ದರಿಂದ ಅವರು ಮುಧೋಳಕ್ಕೆ ಬರಲು ರೈತರ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಇದ್ದರು.