ಸಾರಾಂಶ
Farmers protest: minister Govind karjol visit
ಕನ್ನಡಪ್ರಭ ವಾರ್ತೆ, ಹಿರಿಯೂರು
ಜೆಜಿಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಸಂಸದ ಗೋವಿಂದ ಕಾರಜೋಳ ಶುಕ್ರವಾರ ಭೇಟಿ ನೀಡಿದರು.ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮದು ನ್ಯಾಯಯುತ ಬೇಡಿಕೆಯಾಗಿದೆ. ನಾನು ಕೂಡಲೇ ಮುಖ್ಯಮಂತ್ರಿಗಳಿಗೆ, ನೀರಾವರಿ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತೇನೆ. ಶೀಘ್ರದಲ್ಲೇ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ರೈತರೊಂದಿಗೆ ಸಭೆ ನಡೆಸಲಾಗುವುದು. ಕೇಂದ್ರ ಸರ್ಕಾರದಿಂದ ಶೇ 50 ಮತ್ತು ರಾಜ್ಯ ಸರ್ಕಾರದಿಂದ ಶೇ 50 ರಷ್ಟು ಅನುದಾನ ಬಳಸಿ ಈ ಭಾಗಕ್ಕೆ ನೀರು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ, ಈ ಭಾಗದ ಕೆರೆಗಳ ಮಾಹಿತಿ ಪಡೆದು ನೀರಿನ ಪ್ರಮಾಣ ಎಷ್ಟು ಬೇಕಾಗಬಹುದು ಎಂಬ ನಿಖರ ಮಾಹಿತಿ ಪಡೆದು ಮುಂದುವರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಜಯಣ್ಣ,ಡಿ. ಯಶೋಧರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಾಪಣ್ಣ, ಮಂಜುನಾಥ್, ರಂಗೇನಹಳ್ಳಿ ಶಂಕರಮೂರ್ತಿ, ಜಯರಾಮಪ್ಪ, ಜಗದಾಂಬಿಕ, ವಿಶ್ವನಾಥ್,ಎಂ ಆರ್ ಈರಣ್ಣ, ನಟರಾಜ್,ಈರಣ್ಣ,ಕನ್ಯಪ್ಪ,ಚಿತ್ರ ಲಿಂಗಪ್ಪ ಮುಂತಾದವರು ಹಾಜರಿದ್ದರು.------
ಫೋಟೊ: 1,2 ತಾಲೂಕಿನ ಜೆಜಿ ಹಳ್ಳಿಯಲ್ಲಿ ನೀರಿಗಾಗಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಸಂಸದ ಗೋವಿಂದ ಕಾರಜೋಳ ಭೇಟಿ ನೀಡಿ ಭರವಸೆ ನೀಡಿದರು.