ರಸಗೊಬ್ಬರ ಮಾರಾಟಗಾರರು ರೈತರಿಗೆ ನಿಗಧಿತ ಬೆಲೆಯಲ್ಲಿ ಗೊಬ್ಬರ ನೀಡದೆ, ಪ್ರತಿ ಮೂಟೆಗೆ ₹೨೧೦೦ರಿಂದ ೨,೫೦೦ವರೆಗೆ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ. ಹಿಂದೆ ೨೦೦ರಿಂದ ೩೦೦ ರುಪಾಯಿಗೆ ಸಿಗುತ್ತಿದ್ದ ರಸಗೊಬ್ಬರ ಚೀಲದ ಬೆಲೆ ಇಂದು ೨,೫೦೦ಗಿಂತ ಹೆಚ್ಚಾಗಿದ್ದು, ಸರ್ಕಾರ ನೀಡುವ ಸಬ್ಸಿಡಿ ಸೌಲಭ್ಯಗಳು ಸಾಮಾನ್ಯ ರೈತನಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಪ್ರತಿ ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ಕಡ್ಡಾಯವಾಗಿ ಎಂಆರ್‌ಪಿ ದರ ಪಟ್ಟಿಯನ್ನು ಪ್ರಕಟಿಸಬೇಕು. ಧ್ವನಿ ಎತ್ತುವ ರೈತರಿಗೆ ಒಂದು ಬೆಲೆ, ವಿಧಿಸಿ ಸುಲಿಗೆ ಮಾಡುವುದನ್ನು ತಕ್ಷಣ ಅಮಾಯಕ ರೈತರಿಗೆ ಮತ್ತೊಂದು ಬೆಲೆ ತಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಸಗೊಬ್ಬರ ಬೆಲೆ ಏರಿಕೆ, ಖಾಸಗಿ ಮಾರಾಟಗಾರರು ಅಕ್ರಮವಾಗಿ ಹೆಚ್ಚಿನ ಬೆಲೆ ವಸೂಲಿ ಹಾಗೂ ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಮೀಸೆ ಮಂಜಣ್ಣ ನೇತೃತ್ವದಲ್ಲಿ ತಾಲೂಕಿನ ಶ್ರವಣಬೆಳಗೊಳದಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಅರುಣ್ ಕುಮಾರ್‌ ಮಾತನಾಡಿ, ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಹಾಗೂ ದರ ಏರಿಕೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಸಗೊಬ್ಬರ ಮಾರಾಟಗಾರರು ರೈತರಿಗೆ ನಿಗಧಿತ ಬೆಲೆಯಲ್ಲಿ ಗೊಬ್ಬರ ನೀಡದೆ, ಪ್ರತಿ ಮೂಟೆಗೆ ₹೨೧೦೦ರಿಂದ ೨,೫೦೦ವರೆಗೆ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ. ಹಿಂದೆ ೨೦೦ರಿಂದ ೩೦೦ ರುಪಾಯಿಗೆ ಸಿಗುತ್ತಿದ್ದ ರಸಗೊಬ್ಬರ ಚೀಲದ ಬೆಲೆ ಇಂದು ೨,೫೦೦ಗಿಂತ ಹೆಚ್ಚಾಗಿದ್ದು, ಸರ್ಕಾರ ನೀಡುವ ಸಬ್ಸಿಡಿ ಸೌಲಭ್ಯಗಳು ಸಾಮಾನ್ಯ ರೈತನಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಪ್ರತಿ ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ಕಡ್ಡಾಯವಾಗಿ ಎಂಆರ್‌ಪಿ ದರ ಪಟ್ಟಿಯನ್ನು ಪ್ರಕಟಿಸಬೇಕು. ಧ್ವನಿ ಎತ್ತುವ ರೈತರಿಗೆ ಒಂದು ಬೆಲೆ, ವಿಧಿಸಿ ಸುಲಿಗೆ ಮಾಡುವುದನ್ನು ತಕ್ಷಣ ಅಮಾಯಕ ರೈತರಿಗೆ ಮತ್ತೊಂದು ಬೆಲೆ ತಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಚಾಲಕ ಮೀಸೆ ಮಂಜಣ್ಣ ಮಾತನಾಡಿ, ಪ್ರಸ್ತುತ ರೈತರಿಗೆ ಒಂದು ಟನ್ ಕಬ್ಬಿಗೆ ಕೇವಲ ೩,೨೦೦ ನೀಡಲಾಗುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ರೈತರ ಹಿತದೃಷ್ಟಿಯಿಂದ ಕಬ್ಬಿನ ದರವನ್ನು ಪ್ರತಿ ಟನ್‌ಗೆ ೨೫, ೦೦೦೦೦ ೬,೫೦೦ ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಪಟ್ಟಣದ ಮಾರುತಿ ಸರ್ಕಲ್ ನಿಂದ ನಾಡಕಚೇರಿ ಪ್ರತಿಭಟನೆ ಮೆರವಣಿ ನಡೆಸಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಹೋಬಳಿ ಅಧ್ಯಕ್ಷರಾದ ಚನ್ನೇಗೌಡ, ಮುಖಂಡರಾದ ಕೃಷ್ಣೇಗೌಡ, ಸಾಗರ್ ಗೌಡ, ಪರಮ ಜಯರಾಮ್, ಪ್ರೇಮಮ್ಮ ಪದಾಧಿಕಾರಿಗಳು, ಮಹಿಳಾ ಮುಖಂಡರು ಮತ್ತು ನೂರಾರು ತಾಲೂಕು ಹಾಗೂ ಜಿಲ್ಲಾ ಮಟ್ಟದ ಸೇರಿದಂತೆ ಸಂಘಟನೆಯ ವಿವಿಧ ರೈತರು ಭಾಗವಹಿಸಿದ್ದರು.