ಸಾರಾಂಶ
ಭತ್ತ ಬೇಸಾಯದಲ್ಲಿ ಖರ್ಚು ಮಾಡಿದಷ್ಟು ಆದಾಯ ಬರುತ್ತಿಲ್ಲ. ಜೊತೆಗೆ ಕೂಲಿಯಾಳುಗಳ ಕೊರತೆ ಇದೆ. ರೈತರು ಭತ್ತ ಕೃಷಿಯಿಂದ ವಿಮುಖರಾಗಿ ಭತ್ತದ ಗದ್ದೆಗಳು ತೋಟಗಳಾಗಿ ಪರಿವರ್ತನೆ ಆಗುತ್ತಿವೆ. ಪ್ರತಿಯೊಬ್ಬ ಸಹ ಹೊಸದಾಗಿ ಬಂದಿರುವ ನಾಟಿ ಯಂತ್ರ ಬಳಸಿಕೊಂಡು ಭತ್ತ ಬೇಸಾಯ ಮಾಡಿದರೆ ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಮಾಡಲು ಸಾಧ್ಯವಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಸ್ತುತ ಭತ್ತ ಬೇಸಾಯದಲ್ಲಿ ಕೂಲಿಯಾಳುಗಳ ಕೊರತೆ ಇದ್ದು, ರೈತರು ಯಾಂತ್ರಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಹೇಳಿದರು.ತಾಲೂಕಿನ ಪಾಲಹಳ್ಳಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೈತ ಸತೀಶ್ ಜಮೀನಿನಲ್ಲಿ ನಡೆದ ಯಾಂತ್ರಿಕ ಕೃಷಿ ಭತ್ತದ ಬೇಸಾಯ ವಿಧಾನಗಳು ಮತ್ತು ನಾಟಿ ಯಂತ್ರ ಪ್ರಾತ್ಯಕ್ಷಿಕೆಯಲ್ಲಿ ಯಂತ್ರಕ್ಕೆ ಸಸಿ ಮಡಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭತ್ತ ಬೇಸಾಯದಲ್ಲಿ ಖರ್ಚು ಮಾಡಿದಷ್ಟು ಆದಾಯ ಬರುತ್ತಿಲ್ಲ. ಜೊತೆಗೆ ಕೂಲಿಯಾಳುಗಳ ಕೊರತೆ ಇದೆ. ರೈತರು ಭತ್ತ ಕೃಷಿಯಿಂದ ವಿಮುಖರಾಗಿ ಭತ್ತದ ಗದ್ದೆಗಳು ತೋಟಗಳಾಗಿ ಪರಿವರ್ತನೆ ಆಗುತ್ತಿವೆ. ಪ್ರತಿಯೊಬ್ಬ ಸಹ ಹೊಸದಾಗಿ ಬಂದಿರುವ ನಾಟಿ ಯಂತ್ರ ಬಳಸಿಕೊಂಡು ಭತ್ತ ಬೇಸಾಯ ಮಾಡಿದರೆ ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಮಾಡಲು ಸಾಧ್ಯವಿದೆ ಮತ್ತು ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸಬಹುದು ಎಂದರು.ಈ ವೇಳೆ ವಲಯ ಮೇಲ್ವಿಚಾರಕಿ ಅಶ್ವಿನಿ, ಕೃಷಿ ಮೇಲ್ವಿಚಾರಕ ಕಾರ್ತಿಕ್ ಸೇರಿದಂತೆ ಭತ್ತ ಬೇಸಾಯ ಮಾಡುತ್ತಿರುವ ಇತರ ರೈತ ಕೃಷಿಕರು ಉಪಸ್ಥಿತರಿದ್ದರು.
ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಮಂಡ್ಯ: ತಾಲೂಕಿನ ಕೋಡಿಕೊಪ್ಪಲು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪುಸ್ತಕವನ್ನು ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಮಕ್ಕಳಿಗೆ ವಿತರಿಸಲಾಯಿತು.
ನಂತರ ಮಾತನಾಡಿದ ಶಾಸಕರು ಸರ್ಕಾರಿ ಶಾಲೆಯಲ್ಲಿ ಓದಿದ ಸಮಾಜಸೇವಕ ನಾಗೇಶ್ ಅವರು ತಾವು ಓದಿದ ಶಾಲೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ಸಮವಸ್ತ್ರ ಮತ್ತು ಪುಸ್ತಕಗಳನ್ನು ಮಕ್ಕಳಿಗೆ ನೀಡುತ್ತಿರುವುದು ಮೆಚ್ಚುವಂಥದ್ದು ಎಂದರು.ಕಾರ್ಯಕ್ರಮದಲ್ಲಿ ಸಮಾಜ ಸೇವಕ ನಾಗೇಶ್, ಮುಖಂಡರಾದ ಮಂಜೇಗೌಡ, ಶಂಕರೇಗೌಡ, ಜವರಯ್ಯ, ಪ್ರದೀಪ್ ಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಇದ್ದರು.