ರೈತರು ಈ ದೇಶದ ಬೆನ್ನೆಲುಬು ಎಂದು ಹಲವಾರು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೇವೆ. ಆದರೆ ಇಂದಿಗೂ ರೈತರ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದ್ದು ಸಮೃದ್ಧಿ ಜೀವನವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ರೈತರ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲವರು ತಳಕು ಬಳುಕಿಗೆ ಮಾರು ಹೋಗಿ ಪಟ್ಟಣ ಪ್ರದೇಶಕ್ಕೆ ತೆರಳುತ್ತಿದ್ದಾರೆ. ರೈತರು ಧೃತಿಗೆಡದೆ ಕೃಷಿ ಭೂಮಿಯನ್ನೇ ನಂಬಿ ಜೀವನ ಸಾಗಿಸಿದರೆ ಭವಿಷ್ಯದಲ್ಲಿ ಜೀವನ ಉತ್ತಮವಾಗಲಿದೆ. ರೈತನಿಂದ ಮಾತ್ರ ಈ ದೇಶ ನಡೆಯಲು ಸಾಧ್ಯ ಎಂಬುದು ಇಂದಿಗೂ ಸತ್ಯ ಎಂದು ಎಂದು ಶಾಸಕ ಸುರೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರು
ರೈತರು ಎದ್ದು ನಿಂತು ಜಾಗೃತರಾದಾಗ ಮಾತ್ರ ಅಧಿಕಾರಿ ವರ್ಗ ಎಚ್ಚೆತ್ತು ಸಲಹೆ, ಸಹಕಾರ, ಮಾಹಿತಿ ನೀಡಲು ಮುಂದಾಗುತ್ತಾರೆ ಎಂದು ಶಾಸಕ ಸುರೇಶ್ ಹೇಳಿದರು.ವಿಧಾನಸಭಾ ಕ್ಷೇತ್ರದ ಗಂಗೂರು ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ - ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ವಾಟರ್ ಶೆಡ್ ಮಹೋತ್ಸವ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾನ್ಯವಾಗಿ ರೈತ ದಿನಾಚರಣೆ ಪಠಣ ಪ್ರದೇಶದಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುವುದು ವಾಡಿಕೆಯಾಗಿದೆ. ಆದರೆ ಇಂದು ವಿಶೇಷವಾಗಿ ರೈತರಿರುವ ಗ್ರಾಮಕ್ಕೆ ತೆರಳಿ ಶೇಕಡ ನೂರರಷ್ಟು ಕೃಷಿ ಅವಲಂಬಿತ ಮಂಗಳೂರು ಗ್ರಾಮದಲ್ಲಿ ರೈತ ದಿನಾಚರಣೆ ಆಚರಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿರುವ ರೈತರ ಬಳಿಗೆ ಬಂದು ಅಗತ್ಯ ಮಾಹಿತಿಗಳನ್ನು ನೀಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಖುಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಜೊತೆಗೆ ರೇಷ್ಮೆ ಇಲಾಖೆ ಪಶುಪಾಲನೆ ತೋಟಗಾರಿಕೆ ಮೀನುಗಾರಿಕೆ ಇಲಾಖೆಗಳಿಂದ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದ್ದು ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.ರೈತರು ಈ ದೇಶದ ಬೆನ್ನೆಲುಬು ಎಂದು ಹಲವಾರು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೇವೆ. ಆದರೆ ಇಂದಿಗೂ ರೈತರ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದ್ದು ಸಮೃದ್ಧಿ ಜೀವನವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ರೈತರ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲವರು ತಳಕು ಬಳುಕಿಗೆ ಮಾರು ಹೋಗಿ ಪಟ್ಟಣ ಪ್ರದೇಶಕ್ಕೆ ತೆರಳುತ್ತಿದ್ದಾರೆ. ರೈತರು ಧೃತಿಗೆಡದೆ ಕೃಷಿ ಭೂಮಿಯನ್ನೇ ನಂಬಿ ಜೀವನ ಸಾಗಿಸಿದರೆ ಭವಿಷ್ಯದಲ್ಲಿ ಜೀವನ ಉತ್ತಮವಾಗಲಿದೆ. ರೈತನಿಂದ ಮಾತ್ರ ಈ ದೇಶ ನಡೆಯಲು ಸಾಧ್ಯ ಎಂಬ ಇಂದಿಗೂ ಸತ್ಯ ಎಂದರು.ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ ಮಾಜಿ ಪ್ರಧಾನಿ ಚರಣ್ ಸಿಂಗ್ ಜಯಂತಿಯನ್ನು ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇವರು ತಮ್ಮ ಆಡಳಿತದ ಅವದಿಯಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಜನರಿಗೆ ಭೂಮಿ ಕೊಡಿಸಿದರು. ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದವರು. ಅಲ್ಲದೆ ಪ್ರಮುಖವಾಗಿ ದೇಶದ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ರೈತರ ಕೊಡುಗೆ ಅಪಾರವಾಗಿದೆ. ಇದರಿಂದಾಗಿ ಸರ್ಕಾರಗಳು ಕೃಷಿಗೆ ಹೆಚ್ಚು ಒತ್ತು ಕೊಡುತ್ತಿದೆ. ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಮ್ಮ ರೈತರು ಸದೂಪಯೋಗ ಪಡಿಸಿ ಕೊಂಡು ಉತ್ತಮ ಜೀವನ ನಡೆಸಲು ಮುಂದಾಗಲಿದ್ದೇನೆ. ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.ಕೃಷಿ ಸಹಾಯಕ ನಿರ್ದೇಶಕ ಕಾಂತರಾಜು, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಗಂಗೂರು ಗ್ರಾಪಂ ಅಧ್ಯಕ್ಷೆ ಶಾಂತಕುಮಾರಿ, ಕೃಷಿಕ ಸಮಾಜದ ಅಧ್ಯಕ್ಷ ಜಯರಾಂ, ಪ್ರತಿನಿಧಿ ದೊಡ್ಡವೀರೇಗೌಡ, ತಾಪಂ ಮಾಜಿ ಅಧ್ಯಕ್ಷ ರಂಗೇಗೌಡ, ಮುಖಂಡರಾದ ಸಿದ್ದೇಶ್, ಬಾಲಚಂದ್ರ, ಸಣ್ಣೇಗೌಡ, ಪರಮೇಶ್, ಕುಮಾರ್, ಬಸವರಾಜು, ಶಿವಪ್ಪ, ಸುರೇಶ್ ಸೇರಿದಂತೆ ಇತರರಿದ್ದರು.