ರೈತರು ತಮ್ಮ ಕೃಷಿ ಹಾಗೂ ಉಪಕಸಬುಗಳನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ರೈತೊದ್ಯಮಿಗಳಾಗಬೇಕು. ಅದಕ್ಕೆ ಬೇಕಾದ ಜ್ಞಾನ, ತಾಂತ್ರಿಕ ನೆರವು ಮೂಲ ಸೌಕರ್ಯಗಳನ್ನು ಕೃಷಿಕ ಸ್ವಾವಲಂಬಿ ಸಂಘ ನೀಡಲಿದೆ. ಭವಿಷ್ಯದ ದಿನಗಳಲ್ಲಿ ಕೃಷಿಗೆ ಮಹತ್ವ ಬರಲಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕೃಷಿಕರು ಪರವಲಂಬನೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯುತ್ ರಾಜ್ ವಿಶ್ವವಿದ್ಯಾಲಯ ಗದಗ ನಿವೃತ್ತ ಉಪಕುಲಪತಿ ಡಾ.ವಿಷ್ಣುಕಾಂತ್ ಚಟ್ಪಲ್ಲಿ ಸಲಹೆ ನೀಡಿದರು.ತಾಲೂಕಿನ ಸೋಮನಹಳ್ಳಿ ಎಜುಕೇಷನ್ ಸೊಸೈಟಿ ಅವರಣದಲ್ಲಿ ಕೃಷಿಕ ಸ್ವಾವಲಂಬಿ ಸಂಘ ಏರ್ಪಡಿಸಿದ್ದ ಕೃಷಿ ಪ್ರೇರಣಾ ಶೀರ್ಷಿಕೆಯಡಿ ರೈತೊದ್ಯಮ ಕುರಿತ ಎರಡು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ರೈತರು ತಮ್ಮ ಕೃಷಿ ಹಾಗೂ ಉಪಕಸಬುಗಳನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ರೈತೊದ್ಯಮಿಗಳಾಗಬೇಕು. ಅದಕ್ಕೆ ಬೇಕಾದ ಜ್ಞಾನ, ತಾಂತ್ರಿಕ ನೆರವು ಮೂಲ ಸೌಕರ್ಯಗಳನ್ನು ಕೃಷಿಕ ಸ್ವಾವಲಂಬಿ ಸಂಘ ನೀಡಲಿದೆ ಎಂದರು.
ಶೃತ್ ಅಂಡ್ ಸ್ಮಿತ್ ಫೌಂಡೇಷನ್ ನ ಕರಣ್ ಕುಮಾರ್ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಕೃಷಿಗೆ ಮಹತ್ವ ಬರಲಿದೆ. ಯುವಜನರು ಕೃಷಿ ಕಡೆ ಒಲವು ಬೆಳೆಸಿಕೊಂಡು ರೈತೊದ್ಯಮಿಗಳಾಬೇಕು. ಆ ಮೂಲಕ ಕೃಷಿಕರು ಸ್ವಾವಲಂಬಿ ಜೀವನ ನಡೆಸಬೇಕು. ಕೃಷಿಕ ಸ್ವಾವಲಂಬಿ ಸಂಘ ಇದಕ್ಕೆ ಬೇಕಾದ ಮಾರ್ಗದರ್ಶನ ಮಾಡಲಿದೆ ಎಂದರು.ಪೇಟೆಗಳಲ್ಲಿ ಹಾಗೂ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುತ್ತಿರುವ ರೈತಾಪಿ ಜನರು ಕೃಷಿಕಡೆ ಕರೆತರುವ ಆಶಯದೊಂದಿಗೆ ಕೃಷಿಕ ಸ್ವಾವಲಂಬಿ ಸಂಘ ಕಾರ್ಯನಿರ್ವಹಿಸುತ್ತಿದೆ. ರೈತರು, ಯುವಜನರು ಕೃಷಿ ಹಾಗೂ ಮಾರುಕಟ್ಟೆ ಕ್ಷೇತ್ರದಲ್ಲಿ ತೊಡಗಿಸಿಕ್ಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಅರ್ಥಶಾಸ್ತ್ರ ಪ್ರಾಧ್ಯಾಪಕ ಕೆ.ಸಿ.ಬಸವರಾಜು ಮಾತನಾಡಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಾದ ಸರ್ಕಾರಗಳು ತಮ್ಮ ಕರ್ತವ್ಯ ಮರೆತು ತೊರಿಕೆಗಾಗಿ ರೈತಪರ ಕಾಳಜಿ ತೊರುತ್ತಿವೆ. ಕೃಷಿಕ ಸ್ವಾವಲಂಬಿ ಸಂಘ ಕೃಷಿ ಹಾಗೂ ಕೃಷಿಕ ಸಂಕಷ್ಟ ಸಮಯದಲ್ಲಿ ಇರುವ ಕಾಲಮಾನದಲ್ಲಿ ಕೃಷಿಕರ ನೆರವಿಗೆ ನಿಂತಿರುವುದು ಕೃಷಿಕರಲ್ಲಿ ಭರವಸೆ ತುಂಬಲಿದೆ ಎಂದರು.ಸಂಘದ ಅಧ್ಯಕ್ಷ ಸಿ.ಪುಟ್ಟಸ್ವಾಮಿ ಕೃಷಿಕ ಸ್ವಾವಲಂಬಿ ಸಂಘದ ಸಂಪರ್ಕಕ್ಕೆ ರೈತರು ಬಂದು ಅಗತ್ಯ ತರಬೇತಿ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಗಿರೀಶ್, ದೀಕ್ಷಿತ್ ಮತ್ತಿತರು ಇದ್ದರು.