ರೈತರು ಸಾವಯವ ಕೃಷಿಗೆ ಒತ್ತು ನೀಡಲಿ

| Published : Sep 17 2024, 12:49 AM IST

ಸಾರಾಂಶ

ಕ್ರಿಮಿನಾಶಕಗಳನ್ನು ಬಳಸಿಕೊಂಡು ಮುಂದಿನ ಪೀಳಿಗೆಗೆ ವಿಷವನ್ನಿಡುತ್ತಿದ್ದೇವೆ. ರೈತರು ಸಂಕಷ್ಟದಲ್ಲಿದ್ದು ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಮಧ್ಯವರ್ತಿಗಳು ಸುಭಿಕ್ಷೆಯಿಂದ ಇದ್ದಾರೆ. ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಮಣ್ಣಿಗೆ ಸಾಕಷ್ಟು ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದರ ಮೂಲಕ ಮಣ್ಣನ ಫಲವತ್ತತೆಯು ಕ್ಷೀಣಿಸುತ್ತಿದ್ದು ಅದರಲ್ಲಿ ಬೆಳೆಯುವ ಬೆಳೆಗಳು ವಿಷಪೂರಿತ ಆಹಾರವಾಗಿ ಮಾರ್ಪಟ್ಟಿದೆಯೆಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ರಾಜ್ಯ ಉಪಾಧ್ಯಕ್ಷ ನಾರಾಯಣರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಶಿಂಗರೇನಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆದ ಶ್ರೀ ಬಲರಾಮ ಜಯಂತಿಯಲ್ಲಿ ಮಾತನಾಡಿ ರೈತರು ಸಾವಯವ ಕೃಷಿಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಮುಂದಿನ ಪೀಳಿಗೆಯ ಜನಾಂಗಕ್ಕೆ ಪೌಷ್ಟಿಕಾಂಶ, ಸತ್ವ ಆಹಾರ ಪೂರೈಕೆ ಮಾಡುವುದರ ಮೂಲಕ ಆರೋಗ್ಯವಂತರನ್ನಾಗಿಸಬೇಕೆಂದರು.

ಕಿಸಾನ್‌ ಸಂಘಕ್ಕೆ ಸದಸ್ಯರಾಗಿ

ಗ್ರಾಮೀಣ ಭಾಗದಿಂದಲೇ ರೈತರನ್ನು ಭಾರತೀಯ ಕಿಸಾನ್ ಸಂಘಕ್ಕೆ ಸದಸ್ಯರನ್ನಾಗಿಸುವುದು ಸಂಘವು ಮಣ್ಣಿನ, ರೈತರ, ಗೋವುಗಳ ಸಂರಕ್ಷಣೆ ಒತ್ತು ನೀಡುತ್ತದೆ ಹಾಗೂ ಸಾವಯವ ಕೃಷಿಗೆ ಒತ್ತು ನೀಡುತ್ತಿದೆಯೆಂದರು. ಸಂಘಟನೆ ಬಲ ಮುಖ್ಯವಾದುದು ಅದನ್ನು ಭಾರತೀಯ ಕಿಸಾನ್ ಸಂಘದ ಮೂಲಕ ಸಾಧ್ಯವಾಗಿದೆಯೆಂದರು. ರೈತನ್ನು ಅನ್ನದಾತನಾಗಿ ಉಳಿದಿದ್ದು ಯಾವುದೇ ಸಮಸ್ಯೆಗಳನ್ನು ಸಂಘಟನೆಯ ಮೂಲಕ ಪರಿಹರಿಸಬಹುದಾಗಿದೆಯೆಂದರು.

ಸಂಘಟನೆಯ ಶಿವರಾಜ್ ಮಾತನಾಡಿ ಕ್ರಿಮಿನಾಶಕಗಳನ್ನು ಬಳಸಿಕೊಂಡು ಮುಂದಿನ ಪೀಳಿಗೆಗೆ ವಿಷವನ್ನಿಡುತ್ತಿದ್ದೇವೆಂದರು. ರೈತರು ಸಂಕಷ್ಟದಲ್ಲಿದ್ದು ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಮಧ್ಯವರ್ತಿಗಳು ಸುಭೀಕ್ಷರಾಗಿದ್ದಾರೆ. ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯಬೇಕೆಂದರು.

ಜಯರಾಮಪ್ಪಗೆ ಸನ್ಮಾನ

ಸಂಘಟನೆಯ ಪ್ರಮುಖರಾದ ವೆಂಕಟರೆಡ್ಡಿ, ಕೃಷಿ ಮಿತ್ರ ವಾನಪ್ರಸ್ಥಿ ಗೌರವಾಧ್ಯಕ್ಷ ರಂಗನರಸಿಂಹಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಆರ್‌ಎಂಜೆ ರೈಸ್ ಮಿಲ್ ಮಾಲೀಕ ಆರ್.ಎಂ.ಜಯರಾಮಪ್ಪ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು. ಸಂಘಟನೆ ವತಿಯಿಂದ ಜಯರಾಮಪ್ಪರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಪೆರುಮಾಚನಹಳ್ಳಿ ಕೃಷ್ಣಪ್ಪ, ಗೌರವಾಧ್ಯಕ್ಷ ಶ್ರೀರಾಮಪ್ಪ, ಜಿಲ್ಲಾ ಸದಸ್ಯರಾದ ಶೆಟ್ಟಿಹಳ್ಳಿ ವೆಂಕಟರೆಡ್ಡಿ, ಕೆ.ಆರ್. ಆನಂದ, ರಾಮಪ್ಪ ನಾಯುಡು, ವಕೀಲ ಸುಬ್ರಮಣಿ, ಜಿಲ್ಲಾಕಾರ್ಯದರ್ಶಿ ರಾಮಾಂಜೀನಪ್ಪ, ಕೋಶಾಧ್ಯಕ್ಷ ವೆಂಕಟರೆಡ್ಡಿ ಇದ್ದರು.