ಸಾರಾಂಶ
ರೈತರು ಉತ್ತಮ ಬೆಳೆಯ ನಿರೀಕ್ಷೆಯೊಂದಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತು ನೀರಾವರಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಇವುಗಳಿಗಿಂತಲೂ ಪ್ರಮುಖವಾದದ್ದು ಮೊದಲು ಭೂಮಿಯ ಮಣ್ಣು ಪರೀಕ್ಷೆ ಮಾಡಿಸುವುದು ಎಂದು ತಿಪಟೂರು ಕೆ.ವಿ.ಕೆ ಕೃಷಿ ವಿಜ್ಞಾನಿ ತಸ್ಮಿಯಾ ಕೌಸರ್ ರೈತರಿಗೆ ಸಲಹೆ ನೀಡಿದರು. ಮಣ್ಣಿನಲ್ಲಿ ಸ್ವಾಭಾವಿಕವಾಗಿ ಇರುವ ಪೋಷಕಾಂಶಗಳು, ಕೃತಕವಾಗಿ ಪೂರೈಸಬೇಕಾದ ಪೋಷಕಾಂಶಗಳು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷಿಸುವುದರಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಮಣ್ಣು ಸಂಗ್ರಹಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿ ರೈತರಿಗೆ ತಿಳಿಸಿದರು. ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರು ಗೊಬ್ಬರ ಬಳಕೆ ಹಾಗೂ ನೀರಿನ ಗುಣಮಟ್ಟ ಪರಿಶೀಲನೆಯ ಅಗತ್ಯತೆಯನ್ನು ವಿವರಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರೈತರು ಉತ್ತಮ ಬೆಳೆಯ ನಿರೀಕ್ಷೆಯೊಂದಿಗೆ ಬಿತ್ತನೆ ಬೀಜ, ಗೊಬ್ಬರ ಮತ್ತು ನೀರಾವರಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಇವುಗಳಿಗಿಂತಲೂ ಪ್ರಮುಖವಾದದ್ದು ಮೊದಲು ಭೂಮಿಯ ಮಣ್ಣು ಪರೀಕ್ಷೆ ಮಾಡಿಸುವುದು ಎಂದು ತಿಪಟೂರು ಕೆ.ವಿ.ಕೆ ಕೃಷಿ ವಿಜ್ಞಾನಿ ತಸ್ಮಿಯಾ ಕೌಸರ್ ರೈತರಿಗೆ ಸಲಹೆ ನೀಡಿದರು.ತಾಲೂಕಿನ ಗಂಡಸಿ ಹೋಬಳಿಯ ಕರಿಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣಿನ ಪರೀಕ್ಷೆಯ ಅಗತ್ಯತೆ ಹಾಗೂ ಅದರ ಪ್ರಯೋಜನಗಳನ್ನು ವಿವರಿಸಿದರು.ಮಣ್ಣಿನಲ್ಲಿ ಸ್ವಾಭಾವಿಕವಾಗಿ ಇರುವ ಪೋಷಕಾಂಶಗಳು, ಕೃತಕವಾಗಿ ಪೂರೈಸಬೇಕಾದ ಪೋಷಕಾಂಶಗಳು, ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷಿಸುವುದರಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಮಣ್ಣು ಸಂಗ್ರಹಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿ ರೈತರಿಗೆ ತಿಳಿಸಿದರು. ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರು ಗೊಬ್ಬರ ಬಳಕೆ ಹಾಗೂ ನೀರಿನ ಗುಣಮಟ್ಟ ಪರಿಶೀಲನೆಯ ಅಗತ್ಯತೆಯನ್ನು ವಿವರಿಸಿದರು.ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕ ಸುರೇಶ್ ಮೈಲಿ ಉದ್ಘಾಟಿಸಿ ಮಾತನಾಡಿ, ಪ್ರಾಚೀನ ಮತ್ತು ಆಧುನಿಕ ಕೃಷಿಯ ಗುಣ-ದೋಷಗಳನ್ನು ವಿವರಿಸಿದರು. ಜೊತೆಗೆ ಯೋಜನೆಯಡಿಯಲ್ಲಿ ರೈತರಿಗೆ ಲಭ್ಯವಾಗುವ ಅನೇಕ ಜನಪರ ಕಾರ್ಯಕ್ರಮಗಳು ಹಾಗೂ ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯ್ತಿ ಸದಸ್ಯ ನಟರಾಜ್ ಯೋಜನೆಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಮಾತನಾಡಿದರು.
ಅರಸೀಕೆರೆ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡರು.