ರೈತ ದಿನಾಚರಣೆಯು ಅನ್ನದಾತರಿಗೆ ಗೌರವ ಸಲ್ಲಿಸುವ ಮಹತ್ವದ ದಿನವಾಗಿದ್ದು, ಮುಂದಿನ ದಿನಗಳಲ್ಲಿ ಆಹಾರ ಭದ್ರತೆ ಹಾಗೂ ಸ್ಥಿರ ಕೃಷಿಯ ದೃಷ್ಟಿಯಿಂದ ರೈತರು ಭೂಮಿಯ ಮಾಲೀಕತ್ವವನ್ನು ಕಾಪಾಡಿಕೊಳ್ಳುವ ಅಗತ್ಯತೆ ಇದೆ ಎಂದು ಕೃಷಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಲೋಹಿತ್ ಅಶ್ವತ್ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ತಿಪಟೂರು

ರೈತ ದಿನಾಚರಣೆಯು ಅನ್ನದಾತರಿಗೆ ಗೌರವ ಸಲ್ಲಿಸುವ ಮಹತ್ವದ ದಿನವಾಗಿದ್ದು, ಮುಂದಿನ ದಿನಗಳಲ್ಲಿ ಆಹಾರ ಭದ್ರತೆ ಹಾಗೂ ಸ್ಥಿರ ಕೃಷಿಯ ದೃಷ್ಟಿಯಿಂದ ರೈತರು ಭೂಮಿಯ ಮಾಲೀಕತ್ವವನ್ನು ಕಾಪಾಡಿಕೊಳ್ಳುವ ಅಗತ್ಯತೆ ಇದೆ ಎಂದು ಕೃಷಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಲೋಹಿತ್ ಅಶ್ವತ್ ತಿಳಿಸಿದರು.

ತಾಲೂಕಿನ ಕೊನೇಹಳ್ಳಿಯ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಹಾಗೂ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ವ್ಯಾಪ್ತಿಯ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಯೋಜನೆಯಡಿಯಲ್ಲಿ ಮಾದಿಹಳ್ಳಿಯ ಚೇತನ್ ತೋಟದಲ್ಲಿ ತೊಗರಿ ಬೆಳೆ ಸಹಯೋಗದಲ್ಲಿ ರೈತ ದಿನಾಚರಣೆ ಅಂಗವಾಗಿ ತೊಗರಿ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರುಬೆಂಗಳೂರು ಜಿಕೆವಿಕೆಯ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಅತೀಕ್‌ ಉರ್‌ ರೆಹಮಾನ್ ಮಾತನಾಡಿ ಹವಾಮಾನ ವೈಪರಿತ್ಯವನ್ನು ಎದುರಿಸಲು ಹೊಂದಿಕೊಳ್ಳುವ ಕ್ರಮಗಳು ಹಾಗೂ ತೊಗರಿ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸುವ ವಿಧಾನಗಳನ್ನು ವಿವರಿಸಿದರು. ಡಾ. ಮಂಜುನಾಥ ತೊಗರಿ ಬೆಳೆಯಲ್ಲಿನ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕೀಟ ಮತ್ತು ರೋಗ ನಿರ್ವಹಣೆಯ ಮಹತ್ವವನ್ನು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕೆವಿಕೆ ಮುಖ್ಯಸ್ಥ ಡಾ.ಎಂ.ಎಚ್. ಶಂಕರ್ ಮಾತನಾಡಿ, ವಿಕಸಿತ ಜಿ-ರಾಂ-ಜಿ (ಕೃಷಿಯ ಮೂಲಕ ವಿಕಸಿತ ಗ್ರಾಮ) ಪರಿಕಲ್ಪನೆಯನ್ನು ವಿವರಿಸಿ, ವಿಜ್ಞಾನಾಧಾರಿತ ಕೃಷಿ, ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ ರೈತರ ಸಕ್ರಿಯ ಭಾಗವಹಿಸುವಿಕೆಯಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.ಕ್ಷೇತ್ರೋತ್ಸವದ ಅಂಗವಾಗಿ ಬೀಜೋಪಚಾರ, ಯಾಂತ್ರೀಕೃತ ನಿಪ್ಪಿಂಗ್ ಯಂತ್ರದ ಪ್ರದರ್ಶನ, ಹಾಗೂ ಮೋಹಕ ಬಲೆಗಳ ಅಳವಡಿಕೆ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಜೊತೆಗೆ ತೊಗರಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣಾ ಕ್ರಮಗಳು ಕುರಿತ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸುಧಾರಿತ ತಳಿಗಳು, ಪೋಷಕಾಂಶ ನಿರ್ವಹಣೆ, ಕೀಟ ನಿಯಂತ್ರಣ ಹಾಗೂ ಹವಾಮಾನ ಸಹನಶೀಲ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಿ ರೈತ-ವಿಜ್ಞಾನಿ ಸಂವಾದವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆವಿಕೆಯ ಡಾ. ತಸ್ಮಿಯಾ, ಡಾ.ದರ್ಶನ್, ರೆಹಮಾನ್, ಲೋಹಿತ್, ಮಾದಿಹಳ್ಳಿಯ ಚೇತನ್, ದಯಾನಂದ್, ರವಿಕುಮಾರ್.ಎಂ.ಪಿ. ಜಗದೀಶ್ ತೀಮ್ಮಾಲಾಪುರ, ಮಂಜುನಾಥ್, ಲೋಕೇಶ್, ರೈತರು ಭಾಗವಹಿಸಿದ್ದರು.