ರೈತರು ಮಣ್ಣಿನ ಆರೋಗ್ಯ ಕಾಪಾಡಿ, ಬೆಳೆ ಬೆಳೆಯಬೇಕು: ರೇವಣಸಿದ್ಧಪ್ಪ

| Published : Feb 18 2025, 12:35 AM IST

ರೈತರು ಮಣ್ಣಿನ ಆರೋಗ್ಯ ಕಾಪಾಡಿ, ಬೆಳೆ ಬೆಳೆಯಬೇಕು: ರೇವಣಸಿದ್ಧಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣು ಸ್ವಾಭಾವಿಕ ವಸ್ತುವಾಗಿರುವುದಿಂದ ಇದರಲ್ಲಿ ವಿವಿಧ ರೀತಿಯ ಖನಿಜಾಂಶವುಳ್ಳ ಪದರುಗಳಿವೆ. ಅವುಗಳನ್ನು ಅರಿಯಲು ರೈತರು ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಉತ್ತಮ ಬೆಳೆಯಬೇಕೆಂದು ಉಪ ಕೃಷಿ ನಿರ್ದೇಶಕ ರೇವಣಸಿದ್ಧಪ್ಪ ಹೇಳಿದ್ದಾರೆ.

ನ್ಯಾಮತಿ: ಮಣ್ಣು ಸ್ವಾಭಾವಿಕ ವಸ್ತುವಾಗಿರುವುದಿಂದ ಇದರಲ್ಲಿ ವಿವಿಧ ರೀತಿಯ ಖನಿಜಾಂಶವುಳ್ಳ ಪದರುಗಳಿವೆ. ಅವುಗಳನ್ನು ಅರಿಯಲು ರೈತರು ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಉತ್ತಮ ಬೆಳೆಯಬೇಕೆಂದು ಉಪ ಕೃಷಿ ನಿರ್ದೇಶಕ ರೇವಣಸಿದ್ಧಪ್ಪ ಹೇಳಿದರು.

ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ನಡೆದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಮಣ್ಣಿನ ಫಲವತ್ತತೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಣ್ಣಿನ ಮೂಲ ಮೇಲ್ಮೈಯಲ್ಲಿ ಭೌತಿಕ, ರಾಸಾಯನಿಕವಾಗಿ ಮತ್ತು ಖನಿಜಾಂಶ ಇರುವುದರಲ್ಲಿ ವ್ಯತ್ಯಾಸ ಕಂಡುಬರುತ್ತದೆ. ರೈತರು ಹೊಲಗಳಲ್ಲಿ ಮಣ್ಣಿನ ಪರೀಕ್ಷೆಗೊಳಪಡಿಸುದರಿಂದ ಕೃಷಿ ಸಮೃದ್ಧಿ ಯೋಜನೆಯಡಿ ಕೃಷಿ ಕೈಗೊಂಡರೆ ಉತ್ತಮ ಬೆಳೆ ಬೆಳೆಯಬಹುದು ಎಂದು ಸಲಹೆ ನೀಡಿದರು.

ಸಹಾಯಕ ಕೃಷಿ ಅಧಿಕಾರಿ ಎಂ.ಎಸ್‌. ಪ್ರತಿಮಾ ಮಾತನಾಡಿ, ಮಣ್ಣಿನ ಸವಕಳಿ ತಡೆಗಟ್ಟಲು ರೈತ ಸಮೃದ್ಧಿ ಯೋಜನೆಯಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಹಾಗೂ ತುಂತುರು ನೀರಾವರಿ ಯೋಜನೆಗಳ ಸೌಲಭ್ಯಗಳಿಗೆ ಸಂಬಂಧಿಸಿದ ಬಗ್ಗೆ ಮಾಹಿತಿ ನೀಡಿದರು.

ನ್ಯಾಮತಿ ಕೃಷಿ ಇಲಾಖೆ ಅಧಿಕಾರಿ ಡಿ.ಕೆ.ಮಂಜುನಾಥ ಕಾರ್ಯಕ್ರಮ ಆಯೋಜಿಸಿದ್ದರು. ಉಪ ಕೃಷಿ ನಿರ್ದೇಶಕ ರೇವಣಸಿದ್ಧಪ್ಪ, ಸಹಾಯಕ ಕೃಷಿ ಅಧಿಕಾರಿ ಎಂ.ಎಸ್‌. ಪ್ರತಿಮಾ ಅಧ್ಯಕ್ಷತೆ ವಹಿಸಿದ್ದರು.

ಸುರಹೊನ್ನೆ ಗ್ರಾ.ಪಂ. ಅಧ್ಯಕ್ಷರಾದ ಜಯಶೀಲಾ, ಉಪಾಧ್ಯಕ್ಷೆ ಮಲ್ಲಮ್ಮ ಹಾಗೂ ಸದಸ್ಯ ಮಧುಸೂದನ್‌, ಹಾಲುಯುತ್ಪಾದಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಮತ್ತಿತರರಿದ್ದರು.

- - - (-ಫೋಟೋ:)