ರೈತರೇ ಸಹಾಯಧನ ಸದುಪಯೋಗ ಪಡೆದುಕೊಳ್ಳಿ: ಶಾಸಕ ಕೆ.ಎಂ.ಉದಯ್

| Published : Sep 12 2024, 01:47 AM IST

ರೈತರೇ ಸಹಾಯಧನ ಸದುಪಯೋಗ ಪಡೆದುಕೊಳ್ಳಿ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಹೊಂಡ ನಿರ್ಮಾಣಕ್ಕೆ ಕಡ್ಡಾಯವಾಗಿ ಐದು ಪಟ್ಟುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಬದುಗಳ ನಿರ್ಮಾಣ ಹಾಗೂ ಭೂಮಿಯಿಂದ ನೀರು ಹಿಂಗುವುದನ್ನು ತಡೆಗಟ್ಟಲು ಪಾಲಿಥಿನ್ ಹೊದಿಕೆ ಅಳವಡಿಸಿಕೊಳ್ಳಬೇಕು. ಮನುಷ್ಯರು ಮತ್ತು ಕಾಡುಪ್ರಾಣಿಗಳು ಪ್ರವೇಶ ಮಾಡಿ ಸಾವು-ನೋವುಗಳು ಉಂಟಾಗದಂತೆ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಸರ್ಕಾರ ಕೃಷಿ ಇಲಾಖೆ ಮೂಲಕ ಕೃಷಿ ಹೊಂಡ ನಿರ್ಮಾಣಕ್ಕೆ ನೀಡುತ್ತಿರುವ ಶೇ. 80ರಷ್ಟು ಸಹಾಯಧನವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.

ತಾಲೂಕಿನ ಬೋರಾಪುರ ಗ್ರಾಮದ ಬಸವರಾಜು ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿ ನಿರ್ಮಿಸಿರುವ ಕೃಷಿ ಹೊಂಡ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಆಧಾರದ ಮೇಲೆ ಕೃಷಿ ಹೊಂಡ ನಿರ್ಮಿಸಿಕೊಳ್ಳಬೇಕು ಎಂದರು.

ಕೃಷಿ ಹೊಂಡ ನಿರ್ಮಾಣಕ್ಕೆ ಮುನ್ ಕೃಷಿ ಇಲಾಖೆಯ ಸಲಹೆಯಂತೆ ಕಡ್ಡಾಯವಾಗಿ ಐದು ಪಟ್ಟುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಬದುಗಳ ನಿರ್ಮಾಣ ಹಾಗೂ ಭೂಮಿಯಿಂದ ನೀರು ಹಿಂಗುವುದನ್ನು ತಡೆಗಟ್ಟಲು ಪಾಲಿಥಿನ್ ಹೊದಿಕೆ ಅಳವಡಿಸಿಕೊಳ್ಳಬೇಕು ಎಂದರು.

ಕೃಷಿ ಹೊಂಡ ನಿರ್ಮಾಣಕ್ಕೆ ಕಡ್ಡಾಯವಾಗಿ ಐದು ಪಟ್ಟುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಬದುಗಳ ನಿರ್ಮಾಣ ಹಾಗೂ ಭೂಮಿಯಿಂದ ನೀರು ಹಿಂಗುವುದನ್ನು ತಡೆಗಟ್ಟಲು ಪಾಲಿಥಿನ್ ಹೊದಿಕೆ ಅಳವಡಿಸಿಕೊಳ್ಳಬೇಕು. ಮನುಷ್ಯರು ಮತ್ತು ಕಾಡುಪ್ರಾಣಿಗಳು ಪ್ರವೇಶ ಮಾಡಿ ಸಾವು-ನೋವುಗಳು ಉಂಟಾಗದಂತೆ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಬೇಕು ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಮುನಿಗೌಡ ಮಾತನಾಡಿ, ರೈತರು ತಾಂತ್ರಿಕ ಭತ್ತ ನಾಟಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಇದರಿಂದ ಕೂಲಿ ಅಳುಗಳ ವೆಚ್ಚ ತಗ್ಗುವ ಜೊತೆಗೆ ಸಮಯ ಮತ್ತು ಹಣದ ಉಳಿತಾಯ ಸಾಧ್ಯವಾಗುತ್ತದೆ ಎಂದರು.

ಭತ್ತದ ಬೆಳೆಗೆ ಕಾಡುತ್ತಿರುವ ಕೀಟಗಳ ಹಾವಳಿ ಹತೋಟಿಗೆ ಬರುತ್ತದೆ. ಅಲ್ಲದೇ, ಕಳೆ ನಿರ್ವಹಣೆ ಯಾಂತ್ರಿಕ ನಾಟಿ ಪದ್ಧತಿಯಿಂದ ಸುಲಭವಾಗಿ ಮಾಡಬಹುದು. ರೈತರು ಸರ್ಕಾರ ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಳಿಸಿರುವ ಕೃಷಿ ಯಾಂತ್ರಿಕ ಯೋಜನೆ ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.

ಈ ವೇಳೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಎಚ್‌.ಜಿ.ಪ್ರತಿಭಾ, ಕೃಷಿ ಅಧಿಕಾರಿಗಳಾದ ಎನ್.ರೂಪಶ್ರೀ, ಕೆ.ಎನ್. ಕರುಣ, ತಾಂತ್ರಿಕ ವ್ಯವಸ್ಥಾಪಕ ಗವಾಸ್ಕರ್, ಕುಸುಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವ್ಯವಸ್ಥಾಪಕ ನಾರಾಯಣ, ಸಾದೊಳಲು ಗ್ರಾಪಂ ಅಧ್ಯಕ್ಷೆ ವಿ.ಕೆ.ಪದ್ಮ, ಪಿಡಿಒ ಹೇಮಾ, ಚನ್ನೇಗೌಡನ ದೊಡ್ಡಿ ಸಿದ್ದರಾಮು, ಅವಿನಾಶ್ ಮತ್ತು ಗ್ರಾಮದ ಮುಖಂಡರು ಇದ್ದರು.