ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ₹೬ ಸಾವಿರ, ಫಸಲ್ ಭೀಮಾ ಯೋಜನೆ, ಬೆಳೆ ಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆ, ಬ್ಯಾಂಕ್ ಸಾಲ ಪಡೆಯಲು ಕೃಷಿ ಮತ್ತು ಇತರೆ ಇಲಾಖೆಗಳ ವಿವಿಧ ಯೋಜನೆಗಳಲ್ಲಿ ಹಾಲಿ ಒದಗಿಸುತ್ತಿರುವ ಮತ್ತು ಭವಿಷ್ಯದಲ್ಲಿ ಒದಗಿಸಲಾಗುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ಮನವಿ ಮಾಡಿದ್ದಾರೆ.ಈಗಾಗಲೇ ಲಭ್ಯವಿರುವ ಹಾಗೂ ಕಂದಾಯ ಇಲಾಖೆಯ ಪಹಣಿಗಳಲ್ಲಿ ಇಂದೀಕರಿಸಿರುವ ರೈತರ ಭೂ ಹಿಡುವಳಿ ವಿವರಗಳನ್ನು ಕಡ್ಡಾಯವಾಗಿ ರಾಜ್ಯ ಮಟ್ಟದಲ್ಲಿ ಫ್ರೂಸ್ಸ್ ಮತ್ತು ರಾಷ್ಟ್ರ ಮಟ್ಟದಲ್ಲಿ ಅಗ್ರಿಸ್ಟಾಕ್ ರೂಪದಲ್ಲಿ ರಚಿಸಲಾಗುತ್ತಿರುವ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆಯಲ್ಲಿ ಸೃಜಿಸಿಕೊಂಡು ಇಂದೀಕರಿಸಿ ನವೀಕರಿಸಲು ಅವಶ್ಯವಾಗಿರುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸೌಲಭ್ಯವನ್ನು ಮುಂದುವರಿಸಲು ತಾಲೂಕಿನ ೮೧೪೨ ರೈತರ ಮಾಹಿತಿ ನೋಂದಣಿ ಮಾಡಿಸಿ ಇಂದೀಕರಿಸಿ ನವೀಕರಿಸಿಕೊಳ್ಳಲು ಬಾಕಿಯಿದೆ.ಫೆ.೨೬ರೊಳಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ ಅಥವಾ ಗ್ರಾಮ ಓನ್ ಕೇಂದ್ರಗಳಲ್ಲಿ ತಮ್ಮ ಆಧಾರ್ ಕಾರ್ಡ್, ಜೋಡಣೆಯಾಗಿರುವ ಮೊಬೈಲ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣ ಪತ್ರ ಹಾಗೂ ಹೊಂದಿರುವ ಎಲ್ಲ ಪಹಣಿಗಳ ಜೋಡಣೆಯನ್ನು ಮಾಡಿಸಿ ರೈತರು ವಿದ್ಯುತ್ ಮೂಲಕ ಕಡ್ಡಾಯವಾಗಿ ಸಹಮತಿ ನೀಡಿ ಇ-ಕೆವೈಸಿ ಮಾಡಿಸಿಕೊಂಡು ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ರೈತರು ಮಾಡಬೇಕಾಗಿದ್ದೇನು?
ಫೆ.೨೬ರೊಳಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ ಅಥವಾ ಗ್ರಾಮ ಓನ್ ಕೇಂದ್ರಗಳಲ್ಲಿ ತಮ್ಮ ಆಧಾರ್ ಕಾರ್ಡ್, ಜೋಡಣೆಯಾಗಿರುವ ಮೊಬೈಲ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣ ಪತ್ರ ಹಾಗೂ ಹೊಂದಿರುವ ಎಲ್ಲ ಪಹಣಿಗಳ ಜೋಡಣೆಯನ್ನು ಮಾಡಿಸಿ ರೈತರು ವಿದ್ಯುತ್ ಮೂಲಕ ಕಡ್ಡಾಯವಾಗಿ ಸಹಮತಿ ನೀಡಿ ಇ-ಕೆವೈಸಿ ಮಾಡಿಸಿಕೊಂಡು ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದೆ
