ರೈತರು ಸಾಲವನ್ನ ಸಕಾಲದಲ್ಲಿ ಮರು ಪಾವತಿ ಮಾಡಿ

| Published : Sep 26 2024, 09:52 AM IST

ಸಾರಾಂಶ

ಶಿಡ್ಲಘಟ್ಟ: ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ ಪರಿಣಾಮ ತಾಲೂಕಿನ ರೈತರಿಗೆ ಸುಮಾರು 1.82 ಕೋಟಿ ಸಾಲ ಮನ್ನಾ ಆಗಿದ್ದು, ಇದರಿಂದ ರೈತರು ಉಳಿದ ಸಾಲ ಕಟ್ಟಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ಶಾಸಕ ರವಿಕುಮಾರ್ ಶ್ಲಾಘಿಸಿದರು.

ಶಿಡ್ಲಘಟ್ಟ: ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ ಪರಿಣಾಮ ತಾಲೂಕಿನ ರೈತರಿಗೆ ಸುಮಾರು 1.82 ಕೋಟಿ ಸಾಲ ಮನ್ನಾ ಆಗಿದ್ದು, ಇದರಿಂದ ರೈತರು ಉಳಿದ ಸಾಲ ಕಟ್ಟಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ಶಾಸಕ ರವಿಕುಮಾರ್ ಶ್ಲಾಘಿಸಿದರು.

ನಗರದ ರೇಷ್ಮೆಗೂಡು ಮಾರುಕಟ್ಟೆ ಬಳಿಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ 86 ನೇ ವರ್ಷದ ಸರ್ವಸದಸ್ಯರ ಮಹಾಸಭೆ ಮತ್ತು ನೂತನ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರದ ಬಡ್ಡಿ ಮನ್ನಾದಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ರೈತರು ಪಿಎಲ್ಡಿ ಬ್ಯಾಂಕಿನಿಂದ ಅನೇಕ ಸೌಲಭ್ಯಗಳನ್ನು ಪಡೆಯಬಹುದು, ಆದರೆ ಸಾಲದ ಹಣ ಸಕಾಲದಲ್ಲಿ ಮರುಪಾವತಿಯಾದರೆ ಬ್ಯಾಂಕು ಮತ್ತಷ್ಟು ಯೋಜನೆಗಳನ್ನು ಅಳವಡಿಸಲು ಸಹಾಯಕಾರಿಯಾಗುತ್ತದೆ ಎಂದು ಶಾಸಕ ರವಿಕುಮಾರ್ ಹೇಳಿದರು.

ಕೋಚಿಮೂಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿ, ರೈತರಿಗೆ ವ್ಯವಸಾಯ ಮಾಡಲು ಸಾಲ ಬೇಕಾಗಿತ್ತು. ಆಗ ಅಂದಿನ ಸರ್ಕಾರಿ ಬ್ಯಾಂಕ್ ಗಳು ಹೆಚ್ಚು ಸಾಲ ನೀಡುತ್ತಿರಲಿಲ್ಲ. ಆದ್ದರಿಂದ ರೈತರಿಗಾಗಿಯೇ ಈ ಬ್ಯಾಂಕ್ ಸ್ಥಾಪಿಸಲಾಯಿತು. ಸಹಕಾರಿ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ಮಾಡದೇ ಪ್ರತಿಯೊಬ್ಬ ರೈತರಿಗೂ ಸಮಾನವಾದ ಸೇವೆ ನೀಡಬೇಕು ಎಂದರು.

ನಿವೃತ್ತ ವ್ಯವಸ್ಥಾಪಕ ಸಿ.ಎನ್ ಕೃಷ್ಣನ್ ವಾರ್ಷಿಕ ಮಹಾಸಭೆಯ ನಡವಳಿ ಮಂಡಿಸಿದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಡಿ.ಸಿ ರಾಮಚಂದ್ರ, ಉಪಾಧ್ಯಕ್ಷ ನಾರಾಯಣಪ್ಪ, ಕೆ.ಎಂ ಭೀಮೇಶ್, ರಾಯಪ್ಪನಹಳ್ಳಿ ಅಶ್ವತ್ಥ ನಾರಾಯಣರೆಡ್ಡಿ, ಡಾ.ಧನಂಜಯ್ ರೆಡ್ಡಿ, ವಕೀಲ ಸಂಘದ ಅಧ್ಯಕ್ಷ ಎ ನಾರಾಯಣಸ್ವಾಮಿ, ನಿರ್ದೇಶಕರಾದ ಡಿ.ಬಿ ವೆಂಕಟೇಶ್, ಯಲವಾಲ ಸೊಣ್ಣೇಗೌಡ, ಕೆ ಎಂ ಬೈರೇಗೌಡ, ನಗರಸಭೆ ಅಧ್ಯಕ್ಷ ವೆಂಕಸ್ವಾಮಿ , ಉಪಾಧ್ಯಕ್ಷೆ ರೂಪಾ ನವೀನ್, ಸೀಕಲ್ ಆನಂದ್ ಗೌಡ, ಜಗದೀಶ್, ಎ.ನಾಗರಾಜು, ಎಸ್ ಎಂ ರಮೇಶ್, ಎಸ್ ಎಂ ಮಂಜುನಾಥ್, ನಾರಾಯಣಸ್ವಾಮಿ ,ರಾಘವೇಂದ್ರ, ಪದ್ಮಿನಿ ಕಿಶನ್, ಅನಿಲ್ ಕುಮಾರ್ , ವಸಂತ್, ಬಾಲಕೃಷ್ಣ,ಆಂಜನೇಯರೆಡ್ಡಿ,ಎಂ.ಪಿ ರವಿ, ನಾರಾಯಣ್ವಾಮಿ, ಮುರಳಿ, ಅನಸೂಯಮ್ಮ, ಸುನಂದಮ್ಮ, ಬ್ಯಾಂಕ್ ಸಿಬ್ಬಂದಿ ಇದ್ದರು.