ನರಸಿಂಹರಾಜಪುರಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳುವ ಅರ್ಹ ರೈತರಿಗೆ ಸಹಾಯದ ಧನ ಲಭ್ಯವಿದೆ ಎಂದು ಸಹಾಯಕ ತೋಟಗಾರಿಕ ನಿರ್ದೇಶಕ ರೋಹಿತ್ ತಿಳಿಸಿದರು.
- ಧ.ಗ್ರಾ.ಯೋಜನೆಯಿಂದ ಹೊಸಕೆರೆ ಸಮುದಾಯ ಭವನದಲ್ಲಿ ರೈತ ಕ್ಷೇತ್ರ ಪಾಠ ಶಾಲೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳುವ ಅರ್ಹ ರೈತರಿಗೆ ಸಹಾಯದ ಧನ ಲಭ್ಯವಿದೆ ಎಂದು ಸಹಾಯಕ ತೋಟಗಾರಿಕ ನಿರ್ದೇಶಕ ರೋಹಿತ್ ತಿಳಿಸಿದರು.
ಶುಕ್ರವಾರ ಹೊಸಕೆರೆ ಸಮುದಾಯ ಭವನದಲ್ಲಿ ಧ.ಗ್ರಾ.ಯೋಜನೆಯ ಸಿಂಸೆ ಕಾರ್ಯ ಕ್ಷೇತ್ರದ ಆಶ್ರಯದಲ್ಲಿ ನಡೆದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ರೈತರು ತೋಟಗಾರಿಕೆ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯ ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಧ.ಗ್ರಾ.ಯೋಜನೆಯ ಕೃಷಿ ಮೇಲ್ವೀಚಾರಕ ಹನುಮಂತಪ್ಪ ಮಾಹಿತಿ ನೀಡಿ, ಧ.ಗ್ರಾ.ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮ ಎಂಬ ಯೋಜನೆ ಇದ್ದು ಇದನ್ನು ರೈತರು ಉಪಯೋಗಿಸಬೇಕು. ಕೃಷಿ ಚಟುವಟಿಕೆಗಳಿಗೆ ಧ.ಗ್ರಾ. ಯೋಜನೆಯಿಂದ ಹಲವು ಸೌಲಭ್ಯಗಳಿವೆ ಎಂದರು. ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ರಂಜಿತ ಮಾತನಾಡಿ, ಪ್ರತಿ ಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದರ ಫಲಿತಾಂಶದ ಆಧಾರದ ಮೇಲೆ ಗೊಬ್ಬರ ನೀಡಬೇಕು. ರೈತರು ಸಾಧ್ಯ ವಾದಷ್ಟು ಸಾವಯವ ಗೊಬ್ಬರ ನೀಡಬೇಕು ಎಂದರು.
ಧ.ಗ್ರಾ.ಯೋಜನೆ ವಲಯ ಮೇಲ್ವೀಚಾರಕಿ ಸುಸೀಲ ಮಾತನಾಡಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಹಲವಾರು ಸೌಲಭ್ಯ ಸಿಗುತ್ತಿದ್ದು ರೈತರು ಉಪಯೋಗಿಸಿಕೊಳ್ಳಬೇಕು. ರೈತ ಕ್ಷೇತ್ರ ಪಾಠ ಶಾಲೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಅಧಿಕಾರಿಗಳು ನೀಡಿದ ಮಾಹಿತಿ ಉಪಯೋಗಿಸಿ ಕೃಷಿ ಮಾಡಿದರೆ ರೈತರು ಹೆಚ್ಚು ಇಳುವರಿ ಪಡೆಯ ಬಹುದು ಎಂದರು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ರಾಜೇಶ್, ಸೇವಾ ಪ್ರತಿನಿಧಿ ವೀಣಾ, ಸುನೀತ, ಮಂಜುಳಾ ಹಾಗೂ ಒಕ್ಕೂಟದ ಸದಸ್ಯರು ಇದ್ದರು.