ಕುಂತೂರು ಕಾರ್ಖಾನೆ ರೈತರ ಬಾಕಿ ಪಾವತಿಸುವಂತೆ ರೈತರು ಸಕ್ಕರೆ ಕಾರ್ಖಾನೆ ಮುಂದೆ ಧರಣಿ

| Published : Aug 10 2024, 01:30 AM IST

ಕುಂತೂರು ಕಾರ್ಖಾನೆ ರೈತರ ಬಾಕಿ ಪಾವತಿಸುವಂತೆ ರೈತರು ಸಕ್ಕರೆ ಕಾರ್ಖಾನೆ ಮುಂದೆ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಕುಂತೂರು ಮಹದೇಶ್ವರ ಸಕ್ಕರೆ ಕಾರ್ಖಾನೆ ಮುಂದೆ ರೈತರು ಜಮಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಕುಂತೂರು ಮಹದೇಶ್ವರ ಸಕ್ಕರೆ ಕಾರ್ಖಾನೆ ಮುಂದೆ ರೈತರು ಜಮಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರೈತ ಸಂಘಟನೆಗಳ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ತಾಲೂಕಿನ ಕುಂತೂರು ಗ್ರಾಮದ ಶ್ರೀ ಮಲೆಮಹದೇಶ್ವರ ಸಕ್ಕರೆ ಕಾರ್ಖಾನೆ ರೈತರಿಗೆ ನಿರಂತರ ಅನ್ಯಾಯ ಮಾಡಲಾಗುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚದಲ್ಲಿ ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಹೆಚ್ಚು ಹಣ ರೈತರ ಕಬ್ಬಿನ ಹಣದಿಂದ ಕಡಿತ ಮಾಡಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ರೈತರಿಗೆ ನೀಡಬೇಕಾದ ಬಾಕಿ ಹಣ ಪಾವತಿಸಿ ಕಾರ್ಖಾನೆ ಆರಂಭಿಸಲಿ, ಸರ್ಕಾರ ಈ ಸಂಬಂಧ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.

ಅನೇಕ ಸಮಸ್ಯೆಗಳ ಬಗ್ಗೆ ಕಾರ್ಖಾನೆ ಮುಂದೆ ಕಳೆದ ತಿಂಗಳು ರೈತರು ಜಾಗೃತ ಸಮಾವೇಶ ಮಾಡಿ ಕಾರ್ಖಾನೆ ಅವರಿಗೆ ಎಚ್ಚರಿಕೆ ನೀಡಿಲಾಗಿದೆ. ಹಿಗಿದ್ದರೂ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿ ಮುಂದಾಗಿದೆ. ರೈತರ ಒತ್ತಾಯಗಳಿಗೆ ಸಕ್ಕರೆ ಕಾರ್ಖಾನೆಯವರು ಯಾವುದೇ ಉತ್ತರ ನೀಡದೆ ಕಾರ್ಖಾನೆ ಆರಂಭಿಸಿ ಕಬ್ಬು ಕಟಾವು ಸಾಗಾಣಿಕೆ ಮಾಡಲು ರೈತರಿಗೆ ಸೂಚನೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಈ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರ ರೈತರು ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ.

ಕಬ್ಬಿನ ಬಾಕಿ ಹಣ ಟನ್‌ಗೆ 150 ರು. ಪಾವತಿಸಬೇಕು ಪ್ರಸಕ್ತ ಸಾಲಿಗೆ ಹೆಚ್ಚುವರಿ ಕಬ್ಬಿನ ದರ ನಿಗದಿಪಡಿಸಬೇಕು ನಂತರ ಕಾರ್ಖಾನೆ ಆರಂಭಿಸಬೇಕು. ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.ಮಹದೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 21- 22 ನೇ ಸಾಲಿನ ರಾಜ್ಯ ಸರ್ಕಾರ ನಿಗದಿ ಮಾಡಿ ಆದೇಶ ಹೊರಡಿಸಿದ ಟನ್ ಗೆ ಬಾಕಿ ಹಣ 150 ರು. ಪಾವತಿ ಮಾಡಿಲ್ಲ. 2022-23ನೇ ಸಾಲಿನಲ್ಲಿ ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿಲ್ಲ ಸಕ್ಕರೆ ಇಳುವರಿ ಕಡಿಮೆ ತೋರಿಸಿ ಉಪ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೆವೆಂದು ತಪ್ಪು ಲೆಕ್ಕ ತೋರಿಸಿ ರೈತರನ್ನು ವಂಚಿಸುತ್ತಿದ್ದಾರೆ, ಇದರಿಂದ ರಾಜ್ಯದಲ್ಲಿಯೇ ಅತಿ ಕಡಿಮೆ ಕಬ್ಬುದರ ರೈತರಿಗೆ ನೀಡುತ್ತಿದ್ದು ರೈತರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ತನ್ಗೆ 3400 ನಿಗದಿ ಮಾಡಿದೆ ಆದರೆ ಕಾರ್ಖಾನೆಯವರು 3151 ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದು ಕೂಡ ರೈತರಿಗೆ ಅನ್ಯಾಯ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಈಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ ಸ್ಥಳಕ್ಕೆ ಆಗಮಿಸಿದ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮತ್ತು ಕುಮಾರ್ ಹಾಗೂ ಕಬ್ಬು ಅಭಿವೃದ್ಧಿ ಅಧಿಕಾರಿ ಮಾದೇವಪ್ಪ ಅವರು ಸಮರ್ಪಕ ಉತ್ತರ ನೀಡದೆ ಇದ್ದ ಕಾರಣ ಸಮಸ್ಯೆ ಬಗ್ಗೆ ಹರಿಯುವ ತನಕ ರೈತರ ಜೊತೆ ಧರಣಿಯಲ್ಲಿ ಕೂರುವಂತೆ ಆಗ್ರಹಿಸಿ ಧರಣಿಗೆ ಕೂರಿಸಿಕೊಳ್ಳಲಾಯಿತು.

ಈಗಲೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ಚಾಮರಾಜನಗರದಲ್ಲಿ ಮುಖ್ಯಮಂತ್ರಿಗೆ ಹಳ್ಳಿ ಹಳ್ಳಿಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ನಿರ್ಧರಿಸಲಾಗುವುದು ಎಂದು ಇದೆ ವೇಳೆ ಪ್ರತಿಟನಾಕಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಹತ್ತಳ್ಳಿ ದೇವರಾಜ್, ಮೂಕಹಳ್ಳಿ ಮಹದೇವಸ್ವಾಮಿ, ರೇವಣ್ಣ, ಪಿ ಸೂಮಶೇಖರ್.ಕೆ ಜಿ ಗುರುಸ್ವಾಮಿ. ಕಿರಗಸೂರುಶಂಕರ, ವಿಜೇಯಂದ್ರ.ಸತೀಶ, ಪ್ರಸಾದನಾಯಕ, ಪ್ರದೀಪ್, ಬನ್ನೂರ ಸೂರಿ, ಅಂಬಳೆ ಮಂಜುನಾಥ, ಕಿನಕಳ್ಳಿಬಸವಣ, ಷಡಕ್ಷರಿ, ಗೌರಿಶಂಕರ್, ಉಮೇಶ್, ಲಿಂಗರಾಜು, ಶಿವಸ್ವಾಮಿ ಇನ್ನಿತರಿದ್ದರು.

ಡೀಸಿ ಸೂಚನೆ ಮೇರೆಗೆ ಆಹಾರ ಉಪ ನಿರ್ದೇಶಕ ಯೋಗಾನಂದ ಧರಣಿ ಸ್ಥಳಕೆ ಬಂದು ಹೋರಾಟ ನಿರತರ ಸಮಸ್ಯೆಗಳನ್ನು ಆಲಿಸಿ ಈಗಾಗಲೇ ಡೀಸಿ ಸಕ್ಕರೆ ಅಭಿವೃದ್ಧಿ ಆಯುಕ್ತರ ಜೊತೆ ಮಾತುಕತೆ ನಡೆಸಿದ್ದಾರೆ. ಒಂದು ವಾರದಲ್ಲಿ ಚಾಮರಾಜನಗರದಲ್ಲಿ ಸಭೆ ನಡೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ತಾವು ಚಳವಳಿ ಕೈಬಿಡಬೇಕು ಎಂದು ಮನವಿ ಮಾಡಿದ ಹಿನ್ನೆಲೆ ತಾತ್ಕಾಲಿಕವಾಗಿ ಚಳವಳಿ ಕೈ ಬಿಡಲಾಯಿತು. ನಾಳೆ ಸಿಎಂ ಕಪ್ಪು ಬಾವುಟ ಪ್ರದರ್ಶನ ಕೈ ಬಿಡಲಾಯಿತು.- ಕುರುಬುರ್ ಶಾಂತಕುಮಾರ್, ರೈತ ಸಂಘಟನೆಗಳ ರಾಜ್ಯಾಧ್ಯಕ್ಷ