Farmers' Union protest near Bhadra Dam today
-ಮೇಲ್ದಂಡೆಗೆ ಮತ್ತೆ 1 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಲು ತಾಕೀತು
-----ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ 1 ಟಿಎಂಸಿ ನೀರು ಬಿಡುಗಡೆಗೆ ಹೊರಡಿಸಿದ ಆದೇಶವನ್ನು ತಕ್ಷಣ ಹಿಂಪಡೆಯುವಂತೆ, ತುಂಗಾಭದ್ರಾ ಡ್ಯಾಂಗೆ ಸ್ಟ್ಯಾಂಡಿಂಗ್ ಕ್ರಾಫ್ಗೆ 5 ಟಿಎಂಸಿ ನೀರು ಹರಿಸಲು ಚಿಂತನೆ ನಡೆಸಿದ್ದನ್ನು ವಿರೋಧಿಸಿ ಇಂದು ಲಕ್ಕವಳ್ಳಿಯ ಭದ್ರಾ ಡ್ಯಾಂ ಬಳಿ ಭಾರತೀಯ ರೈತ ಒಕ್ಕೂಟದಿಂದ ಗೌರವಾಧ್ಯಕ್ಷ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.ಆಹಾರ ಧಾನ್ಯ ಬೆಳೆಯಲೆಂದು ಭದ್ರಾ ಡ್ಯಾಂ ನಿರ್ಮಾಣ ಮಾಡಿದ್ದು, ಅಂತಹ ಭದ್ರಾ ಡ್ಯಾಂ ನೀರನ್ನು ವಿವಿಧ ರೀತಿಯಲ್ಲಿ ಮಾರಾಟ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಭಾರತೀಯ ರೈತ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಚ್ಚುಕಟ್ಟು ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವಾಹನದಲ್ಲಿ ಬುತ್ತಿ ತೆಗೆದುಕೊಂಡು ಬರುವಂತೆ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರು ಇದೇ ರೀತಿ ಸುಮ್ಮನಿದ್ದರೆ ಬೇಸಿಗೆ ಬೆಳೆಗೆ ನೀರಿಲ್ಲದಂತೆ ಭದ್ರಾ ಡ್ಯಾಂನ್ನೇ ಖಾಲಿ ಮಾಡುತ್ತಾರೆ. ಹಾಗಾಗಿ ಜಿಲ್ಲೆಯ ರೈತರು ಎಚ್ಚೆತ್ತುಕೊಂಡು, ನಮ್ಮಗಳ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಬೇಸಿಗೆ ಬೆಳೆಗೆ ನೀರನ್ನು ಪಡೆಯುವ ಹೋರಾಟಕ್ಕೆ ಆಗಮಿಸಬೇಕು. ಸ್ವಯಂ ಪ್ರೇರಿತವಾಗಿ ಅಚ್ಚುಕಟ್ಟು ರೈತರು ಹೋರಾಟದಲ್ಲಿ ಭಾಗವಹಿಸುವಂತೆ ಒಕ್ಕೂಟದ ಕಾರ್ಯದರ್ಶಿ ಉಜ್ಜಣ್ಣ, ಮುಖಂಡರಾದ ಕೊಂಡಜ್ಜಿ ಶಾನುಬೋಗರ ನಾಗರಾಜರಾವ್, ಕುಂದುವಾಡ ಹನುಮಂತಪ್ಪ, ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಮಹೇಶ, ಪುನೀತ್, ಅಣ್ಣಪ್ಪ, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ಕರಿಬಸಪ್ಪ, ಶಿವಪ್ಪ, ಎ.ಅಣ್ಣಪ್ಪ, ದೇವರಾಜ, ಎ.ಎಂ.ಮಂಜುನಾಥ ಮನವಿ ಮಾಡಿದ್ದಾರೆ.ಪೋಟೊ
ತುಂಗಾಭದ್ರಾ ಡ್ಯಾಂಗೆ ಸ್ಟ್ಯಾಂಡಿಂಗ್ ಕ್ರಾಫ್ಗೆ 5 ಟಿಎಂಸಿ ನೀರು ಹರಿಸಲು ಚಿಂತನೆ ನಡೆಸಿದ್ದನ್ನು ವಿರೋಧಿಸಿ ನ.2ರಂದು ಲಕ್ಕವಳ್ಳಿಯ ಭದ್ರಾ ಡ್ಯಾಂ ಬಳಿ ಭಾರತೀಯ ರೈತ ಒಕ್ಕೂಟದಿಂದ ಗೌರವಾಧ್ಯಕ್ಷ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ