ಸಾರಾಂಶ
ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ವಿರುದ್ಧ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ತಾಲೂಕು ಘಟಕದಿಂದ ಜಗಳೂರಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ಖಲೀಂ ಉಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಜಗಳೂರು
ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮರುಪಾವತಿಸುವಂತೆ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ತಾಲೂಕು ಘಟಕದಿಂದ ಪ್ರತಿಭಟಿಸಿ ತಹಸೀಲ್ದಾರ್ ಸೈಯದ್ ಖಲೀಂ ಉಲ್ಲಾ ಅವರಿಗೆ ಪತ್ರ ಸಲ್ಲಿಸಲಾಯಿತು.ತಾಲೂಕಿನ ರೈತರು ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಬೆಳೆ ಸಾಲ ಪಡೆದಿದ್ದಾರೆ. ಆದರೆ ಸಕಾಲಕ್ಕೆ ಬೆಳೆ ಆಗದೇ ತಾಲೂಕು ಪರಪೀಡಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ. ಇಷ್ಟಿದ್ದರೂ ಸಹಾ ಮಹಿಂದ್ರಾ ಟ್ರಾಕ್ಟರ್ ಫೈನಾನ್ಸ , ಎಲ್.& ಟಿ ಹಾಗೂ ಸ್ಥಳೀಯ ಇನ್ನಿತರ ಖಾಸಗಿ ಹಣಕಾಸು ಸಂಸ್ಥೆಗಳವರು ಕೆಲ ರೈತರನ್ನು ಅರೆಸ್ಟ್ ವಾರೆಂಟ್ ಮೂಲಕ ಬಂಧಿಸಲು ಕಾನೂನು ಕ್ರಮ ಕೈಗೊಂಡಿದ್ದಾರೆ. ಮುಂದಿನ ಬೆಳೆ ಬರುವವರೆಗೆ ಖಾಸಗಿ ಹಾಗೂ ರಾಷ್ಟ್ರೀಯ ಬ್ಯಾಂಕಗಳು ಸಾಲ ಮರು ಪಾವತಿಗೆ ನೋಟಿಸ್ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ರೈತಸಂಘದ ಅಧ್ಯಕ್ಷ ಚಿರಂಜೀವಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ರಾಜನಹಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಗೌಡಗೊಂಡನಹಳ್ಳಿ ಸಹದೇವರೆಡ್ಡಿ, ತಿಪ್ಪೇಸ್ವಾಮಿ, ಪರುಶಪ್ಪ, ಪಾಪಣ್ಣ, ಹೊನ್ನೂರು ಅಲಿ, ಬಸಣ್ಣ, ರಂಗಪ್ಪ, ಹನುಮಂತಪ್ಪ, ಮೇಘಾನಾಥ್, ತಿಪ್ಪೇಸ್ವಾಮಿ, ಏಕಾಂತಪ್ಪ, ಅಂಜಿನಪ್ಪ ಬೆನ್ನಪ್ಪ ಸೇರಿ ಇತರರು ಪಾಲ್ಗೊಂಡಿದ್ದರು.