ಶಿಥಿಲವಾಗಿರುವ ವಿದ್ಯುತ್‌ ಕಂಬಗಳನ್ನು ಬದಲಾಯಿಸಲು ರೈತಸಂಘದ ಆಗ್ರಹ

| Published : Feb 02 2025, 01:03 AM IST

ಶಿಥಿಲವಾಗಿರುವ ವಿದ್ಯುತ್‌ ಕಂಬಗಳನ್ನು ಬದಲಾಯಿಸಲು ರೈತಸಂಘದ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಹಾಕಿ, ಹಲವಾರು ವರ್ಷಗಳೇ ಕಳೆದಿದ್ದು, ಹಾಗಾಗಿ ಆ ತಂತಿಗಳು ತುಂಡಾಗಿ ಬಿದ್ದು, ಜೀವ ಹಾನಿಯಾಗುತ್ತಿದ್ದು, ಅದನ್ನು ತಕ್ಷಣ ಸರಿಪಡಿಸಬೇಕು ಹಾಗೂ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾಯಿಸಿ ಕೊಡಬೇಕು.

ಕನ್ನಡಪ್ರಭ ವಾರ್ತೆ ಪಿರಿಯಪಟ್ಟಣ

ತಾಲೂಕಿನ ಅತ್ಯಂತ ಶಿಥಿಲವಾಗಿರುವ ಕಂಬಗಳನ್ನು ಬದಲಾಯಿಸಿ ಕೊಡಬೇಕು ಹಾಗೂ ಜೋತು ಬಿದ್ದಿರುವ ವಿದ್ಯುತ್ ವೈರ್ ಗಳನ್ನು ಹಾಗೂ ಅಕ್ರಮ ಸಕ್ರಮವನ್ನು ತಕ್ಷಣ ಜಾರಿ ಮಾಡಿಕೊಡಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಸುಂದರೇಗೌಡ ಆಗ್ರಹಿಸಿದರು.

ತಾಲೂಕಿನ ಸೆಸ್ಕ್‌ ಕಚೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗುರು ಬಸವರಾಜಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಹಾಕಿ, ಹಲವಾರು ವರ್ಷಗಳೇ ಕಳೆದಿದ್ದು, ಹಾಗಾಗಿ ಆ ತಂತಿಗಳು ತುಂಡಾಗಿ ಬಿದ್ದು, ಜೀವ ಹಾನಿಯಾಗುತ್ತಿದ್ದು, ಅದನ್ನು ತಕ್ಷಣ ಸರಿಪಡಿಸಬೇಕು ಹಾಗೂ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾಯಿಸಿ ಕೊಡಬೇಕು, ಇದರಿಂದ ರೈತರಿಗೆ ಹಾಗೂ ಹಳ್ಳಿಯ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಸಹಾಯಕ ಕಾರ್ಯಾಪಾಲಕ ಎಂಜಿನಿಯರ್‌ ಗುರು, ಬಸವರಾಜಸ್ವಾಮಿ ಮನವಿ ಪತ್ರ ಸ್ವೀಕರಿಸಿ, ರೈತರಿಗೆ ಒಳ್ಳೆಯದನ್ನು ಮಾಡಲು ಎಲ್ಲ

ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜಿ. ಲೋಕೇಶ್, ಸಂಚಾಲಕ ಅರುಣ್ ಕುಮಾರ್. ಅಭಿಲಾಶ್. ಹರೀಶ್. ಮಹದೇವ್, ಎಚ್.ಎನ್. ಮಹದೇವ್, ಬಸವರಾಜು, ಮುತ್ತುರಾಜು, ಅನಿಲು, ರಘು ಇದ್ದರು.