ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಉರುಳಿ ಫಸಲುಗಳನ್ನು ಬೆಳೆದಿದ್ದು., ಕಟ್ಟಾವಿಗೆ ಬಂದಿರುವ ಉರುಳಿ ಫಸಲುಗಳನ್ನು ಜಿಂಕೆಗಳ ಹಾವಳಿಯಿಂದ ನಾಶವಾಗುತ್ತಿವೆ,

ಕನ್ನಡಪ್ರಭ ವಾರ್ತೆ ಮಲ್ಕುಂಡಿಕಾಡಾಂಚಿನ ಗ್ರಾಮಗಳಾದ ದೇವರಾಯಶೆಟ್ಟಿಪುರ, ಇಂದಿರಾನಗರ, ನಾಗಣಾಪುರ, ಬಳ್ಳೂರಹುಂಡಿ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ರೈತರು ಒತ್ತಾಯಿದರು.ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಉರುಳಿ ಫಸಲುಗಳನ್ನು ಬೆಳೆದಿದ್ದು., ಕಟ್ಟಾವಿಗೆ ಬಂದಿರುವ ಉರುಳಿ ಫಸಲುಗಳನ್ನು ಜಿಂಕೆಗಳ ಹಾವಳಿಯಿಂದ ನಾಶವಾಗುತ್ತಿವೆ, ಇದ್ದರಿಂದ ರೈತರು ಕಂಗಲಾಗಿದ್ದಾರೆ ಎಂದು ರೈತ ಕೆಂಪಣ್ಣ ಆರೋಪಿಸಿದರು.ಈ ಭಾಗದ ರೈತರು ಬೆಳೆದ ಫಸಲುಗಳನ್ನು ಒಂದಡೇ ಕಾಡಾನೆಗಳು ನಾಶ ಪಡಿಸಿದರೆ, ಮತ್ತೊಂದಡೇ ಉರುಳಿ ಫಸಲುಗಳನ್ನು ಜಿಂಕೆಗಳು ನಾಶ ಪಡಿಸುತ್ತಿವೆ. ಜಿಂಕೆ ನಾಶ ಮಾಡಿರುವ ಫಸಲುಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಈಗಿರುವಾಗ ರೈತರು ಬದಕುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.ಹಾನಿಯಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಮಂಜುನಾಥ್, ಮಹೇಶ್, ನಂಜಯ್ಯ, ರಾಚಯ್ಯ, ದೀಪು, ಪಾಪಣ್ಣ, ಗ್ರಾಪಂ ಮಾಜಿ ಸದಸ್ಯ ವೀರಭದ್ರಸ್ವಾಮಿ, ಮಹದೇವಸ್ವಾಮಿ, ಮಹದೇವು, ನಂದೀಶ್, ಸಿದ್ದರಾಜು ಇದ್ದರು.------------ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದೆ, ದೇವರಾಯಶೆಟ್ಟಿಪುರ ಇಂದಿರಾನಗರ ಗ್ರಾಮದ ರೈತರ ಬೆಳೆದ ಉರುಳಿ ಫಸಲುಗಳನ್ನು ಜಿಂಕೆಗಳು ನಾಶ ಪಡಿಸಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡುವುದಾರ ಬಗ್ಗೆ ಮಾಹಿತಿ ನೀಡಲಾಗುವುದು, ಕೆಲವೇ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.- ಹನುಮಂತಪ್ಪ ಪಾಟೀಲ್, ಓಂಕಾರ್ ವಲಯದ ಅರಣ್ಯಾಧಿಕಾರಿ.

ಫೋಟೋ- 5ಎಂವೈಎಸ್‌ 62-----------------