ಸಾರಾಂಶ
ಸೋಮವಾರ ಬೆಳಗ್ಗೆ ಗೋಪೂಜೆ ಮಾಡಿ ನಂತರ ಹೋಮ ಹವನ ನಡೆಸುವ ಮೂಲಕ ರೈತರ ಹೋರಾಟಕ್ಕೆ ದೈವದ ಮೊರೆ ಹೋಗಲಾಯಿತು. ಸೋಮವಾರ ಬೆಳಗ್ಗೆ ಮುಕ್ತಿಮಂದಿರದ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರ: ಗೋವಿನಜೋಳವನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ರೈತಪರ ಹೋರಟಗಾರರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿತು.
ಗೋವಿನಜೋಳವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ₹೨೪೦೦ ದರದಲ್ಲಿ ಖರೀದಿ ಮಾಡಲು ಆಗ್ರಹಿಸಿ ತಾಲೂಕಿನ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿರುವ ಹೋರಾಟವು ಸೋಮವಾರ ಬೆಳಗ್ಗೆ ಹೋಮ ಹವನಗಳಿಂದ ಆರಂಭಗೊಂಡಿದ್ದು ವಿಶೇಷವಾಗಿತ್ತು. ಸೋಮವಾರ ಬೆಳಗ್ಗೆ ಗೋಪೂಜೆ ಮಾಡಿ ನಂತರ ಹೋಮ ಹವನ ನಡೆಸುವ ಮೂಲಕ ರೈತರ ಹೋರಾಟಕ್ಕೆ ದೈವದ ಮೊರೆ ಹೋಗಲಾಯಿತು. ಸೋಮವಾರ ಬೆಳಗ್ಗೆ ಮುಕ್ತಿಮಂದಿರದ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ರೈತರು ಹೋರಾಟ ನಡೆಸುತಿರುವ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ರೈತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಭಾನುವಾರ ರಾತ್ರಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗಳು ಭೇಟಿ ನೀಡಿ ಮಾತನಾಡಿ, ರೈತರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ರೈತರು ಬೆಳೆದ ಗೋವಿನಜೋಳವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಗೋವಿನಜೋಳದ ಬೆಲೆ ₹೧೮೦೦ ಇದೆ. ನಮ್ಮ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿದ್ದು. ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಈ ವೇಳೆ ರಾಜ್ಯ ಸರ್ಕಾರ ಗೋವಿನ ಜೋಳವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವುದು ರೈತರ ಕೂಗಾಗಿದೆ.
ಸರ್ಕಾರ ಕೂಡಲೆ ರೈತರ ನ್ಯಾಯುತ ಬೇಡಿಕೆ ಈಡೇರಿಸುವಲ್ಲಿ ಹಿಂದೆ ಮುಂದೆ ನೋಡದೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಖರೀದಿ ಕೇಂದ್ರ ಅರಂಭಿಸದ ಹೊರತು ರೈತರು ಹೋರಾಟದಿಂದ ಹಿಂದೆ ಸರಿಯದಿರುವ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಭಾನುವಾರ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ಮಧ್ಯಾಹ್ನ ಕಾಂಗ್ರೆಸ್ ಯುವ ಮುಖಂಡ ಆನಂದ ಗಡ್ಡದೇವರಮಠ ಅವರು ಭೇಟಿಟಿ ನೀಡಿ ಮಾತನಾಡಿ, ಸರ್ಕಾರವು ಶೀಘ್ರದಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಕರವೇ ಸಂಘಟನೆಯ ವಿವಿಧ ಬಣಗಳು ಭಾಗವಹಿಸಿದ್ದವು. ಆದ್ರಹಳ್ಳಿಯ ಕುಮಾರ ಮಹಾರಾಜ ಸ್ವಾಮಿಗಳು, ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಹಾಗೂ ಟಿ. ಈಶ್ವರ, ಬಸಣ್ಣ ಬೆಂಡಿಗೇರಿ, ಎಂ.ಎಸ್. ದೊಡ್ಡಗೌಡರ, ಪೂರ್ಣಾಜಿ ಕರಾಟೆ, ಎಂ.ಆರ್. ಪಾಟೀಲ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ, ಸಣ್ಣೀರಪ್ಪ ಹಳ್ಳೆಪ್ಪನವರ, ಶಿವನಗೌಡ ಪಾಟೀಲ, ಟಾಕಪ್ಪ ಸಾತಪೂತೆ. ಚನ್ನಪ್ಪ ಷಣ್ಮುಖಿ, ಮುತ್ತಪ್ಪ ತಾರಿಕೊಪ್ಪ, ಶರಣು ಗೋಡಿ, ನಾಗೇಶ ಅಮರಾಪೂರ, ನಿಂಬಣ್ಣ ಮಡಿವಾಳರ ಇತರರು ಇದ್ದರು.;Resize=(128,128))
;Resize=(128,128))
;Resize=(128,128))