ಹುಬ್ಬಳ್ಳಿ ವಿಮಾನ ನಿಲ್ದಾಣ ಪಾರ್ಕಿಂಗ್‌ ಖಾಸಗೀಕರಣ

| Published : Nov 18 2025, 01:00 AM IST

ಸಾರಾಂಶ

ಹುಬ್ಬಳ್ಳಿ ವಿಮಾನ ನಿಲ್ದಾಣದ ಪಾರ್ಕಿಂಗ್‌ ವ್ಯವಸ್ಥೆಯನ್ನು ಇಷ್ಟು ದಿನ ತಾನೇ ನಿರ್ವಹಿಸುತ್ತಿದ್ದ ಎರ್ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ, ಇದೀಗ ಟೆಂಡರ್‌ ಮೂಲಕ ಖಾಸಗಿ ಸಂಸ್ಥೆಗೆ ವಹಿಸಿದೆ.

ಹುಬ್ಬಳ್ಳಿ:

ಇಲ್ಲಿನ ವಿಮಾನ ನಿಲ್ದಾಣದ ಪಾರ್ಕಿಂಗ್‌ ವ್ಯವಸ್ಥೆಯನ್ನು ಇಷ್ಟು ದಿನ ತಾನೇ ನಿರ್ವಹಿಸುತ್ತಿದ್ದ ಎರ್ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ, ಇದೀಗ ಟೆಂಡರ್‌ ಮೂಲಕ ಖಾಸಗಿ ಸಂಸ್ಥೆಗೆ ವಹಿಸಿದೆ. ಓಂ ಸಾಹಿತಿ ಸಿದ್ಧಿ ಎಂಬ ಸಂಸ್ಥೆಯೂ ಇನ್ಮೇಲೆ ನಿರ್ವಹಿಸಲಿದೆ. ಇದರಿಂದಾಗಿ ಇದೀಗ ಪಾರ್ಕಿಂಗ್‌ಗೆ ಸಂಬಂಧಪಟ್ಟಂತೆ ಹೊಸ ಚಾರ್ಜ್‌ಗಳನ್ನು ವಿಧಿಸಲಾಗುತ್ತಿದೆ.

ವಾಹನ ನಿಲುಗಡೆಗೆ 30 ನಿಮಿಷ ಮತ್ತು 30ರಿಂದ 120 ನಿಮಿಷದ ವರೆಗೆ ಎಂಬ ಎರಡು ಪ್ರಾಥಮಿಕ ವಿಭಾಗಗಳಲ್ಲಿ ದರ ನಿಶ್ಚಿಯಿಸಲಾಗಿದೆ. ನಂತರ ಗಂಟೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಖಾಸಗಿ ಕಾರು:

30 ನಿಮಿಷ ₹ 30, 30–120 ನಿಮಿಷ ₹40, ಬೈಕ್‌ 30 ನಿಮಿಷಕ್ಕೆ ₹ 10, 30 ನಿಮಿಷದಿಂದ 120 ನಿಮಿಷದವರೆಗೆ ₹15, ಕಮರ್ಷಿಯಲ್‌ ವಾಹನಗಳು (ವಿಮಾನ ನಿಲ್ದಾಣ ಅಥಾರಿಟಿ ಲೈಸೆನ್ಸ್‌ ಪಡೆಯದವರು) 30 ನಿಮಿಷ ₹42, 30ರಿಂದ 120 ನಿಮಿಷಕ್ಕೆ ₹ 92, ಕರ್ಮಿಷಿಯಲ್‌ ವಾಹನಗಳು (ಎಎಐ ಲೈಸೆನ್ಸ್‌ ಹೊಂದಿದವರು): 30 ನಿಮಿಷ ₹ 20, 30-120 ನಿಮಿಷಕ್ಕೆ ₹35, ಟೆಂಪೋ/ಎಸ್‌ಯುವಿ/ಮಿನಿ ಬಸ್ ₹60 ಮತ್ತು ₹ 80, ಬಸ್, ಕೊಚ್, ಟ್ರಕ್‌ಗೆ ₹ 170 ಮತ್ತು ₹250, 120 ನಿಮಿಷಗಳ ನಂತರ 7ರ ವರೆಗೆ ಬೈಕ್‌ ಪ್ರತಿ ಗಂಟೆ ₹ 5 ಮತ್ತು ನಾಲ್ಕು ಚಕ್ರ ವಾಹನಕ್ಕೆ ಪ್ರತಿ ಗಂಟೆ ₹ 10 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. 7ರಿಂದ 24 ಗಂಟೆ ವರೆಗೆ ಪಾರ್ಕಿಂಗ್ ಮಾಡಿದಲ್ಲಿ 120 ನಿಮಿಷದ ದರದ ಮೂರು ಪಟ್ಟು ಶುಲ್ಕ ಅನ್ವಯಿಸುತ್ತದೆ.

ಉಚಿತ ಪಾರ್ಕಿಂಗ್‌:

ವಿಮಾನ ನಿಲ್ದಾಣ ಪ್ರವೇಶ ಮಾರ್ಗದಲ್ಲಿನ ಪಿಕ್-ಅಪ್, ಡ್ರಾಪ್ ಲೇನ್ 8 ನಿಮಿಷ, ಪಾರ್ಕಿಂಗ್ ಪ್ರದೇಶದ ಒಳಗೆ ಪಿಕ್-ಅಪ್, ಡ್ರಾಪ್‌ಗೆ 2 ನಿಮಿಷ. ಉಚಿತ ಸಮಯ ಮೀರಿದಲ್ಲಿ ವಾಹನ ಪ್ರಕಾರಕ್ಕೆ ಅನುಸಾರವಾಗಿ ₹10 ರಿಂದ ₹213ರ ವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಎಂಟ್ರಿ ಟೋಕನ್ ಕಡ್ಡಾಯ:

ಪ್ರತಿಯೊಂದು ವಾಹನಕ್ಕೂ ಪಾರ್ಕಿಂಗ್ ಪ್ರವೇಶದ ಬಳಿ ಎಂಟ್ರಿ ಟೋಕನ್ ಕಡ್ಡಾಯ ಮಾಡಲಾಗಿದೆ. ಟೋಕನ್ ಕಳೆದುಕೊಂಡಲ್ಲಿ ₹300 ದಂಡ ವಿಧಿಸಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಹೊಸ ಗುತ್ತಿಗೆ ಸಂಸ್ಥೆಯ ಮೂಲಕ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಪಾರ್ಕಿಂಗ್ ಸೇವೆ ಇನ್ನಷ್ಟು ಸುವ್ಯವಸ್ಥಿತ, ಪಾರದರ್ಶಕ ಮತ್ತು ಸುಗಮವಾಗಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.