ಸಾರಾಂಶ
ವಿದ್ಯುತ್ ತಂತಿ ತಗುಲಿ ಮೃತಪಟ್ಟ ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ರೈತರಾದ ನಾಗೇಂದ್ರ, ಮಲ್ಲೇಶ್ ಅವರ ಮನೆಗೆ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೆಸ್ಕ್ ಎಂಜಿನಿಯರ್‌ಗಳೊಂದಿಗೆ ಮೃತರ ಮನೆಗೆ ತೆರಳಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ವಿತರಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಮಲ್ಲೇದೇವನಹಳ್ಳಿ ಬಳಿ ಬುಧವಾರ ಮಧ್ಯರಾತ್ರಿ ಜಮೀನಿನಿಂದ ಸ್ವಗ್ರಾಮ ಅಯ್ಯನಪುರ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ರೈತರಾದ ನಾಗೇಂದ್ರ, ಮಲ್ಲೇಶ್ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅಯ್ಯನಪುರ ಗ್ರಾಮಕ್ಕೆ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೆಸ್ಕ್ ಎಂಜಿನಿಯರ್ ಗಳೊಂದಿಗೆ ಮೃತರ ಮನೆಗೆ ತೆರಳಿ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ವಿತರಿಸಿದರು.ಇದೇ ವೇಳೆ ಮೃತರ ಕುಟುಂಬದವರು ಶಾಸಕರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಮೃತ ನಾಗೇಂದ್ರ ಅವರ ಪುತ್ರ ಡಿಪ್ಲೋಮಾ ಪದವೀಧರರಾಗಿದ್ದು, ಸೆಸ್ಕ್ ನಲ್ಲಿ ಸೂಕ್ತ ಉದ್ಯೋಗ ಒದಗಿಸಬೇಕು ಎಂದು ನಾಗೇಂದ್ರ ಕುಟುಂಬದವರು ಮನವಿ ಮಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರತಿಕ್ರಿಯಿಸಿ ಸೆಸ್ಕ್ ಮೇಲಧಿಕಾರಿಗಳ ಜತೆ ಚರ್ಚಿಸಿ, ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಮಲ್ಲೇಶ್ ಅವರಿಗೆ ಚಿಕ್ಕಮಕ್ಕಳಿದ್ದು, ಅವರ ಕುಟುಂಬಕ್ಕೆ ಸೆಸ್ಕ್ ನಿಂದ ಹೆಚ್ಚಿನ ನೆರವು ಕೊಡಿಸಬೇಕು ಎಂದು ಮೃತ ಮಲ್ಲೇಶ್ ಕುಟುಂಬದವರು ಶಾಸಕರಿಗೆ ಮನವಿ ಮಾಡಿದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಪ್ರತಿಕ್ರಿಯಿಸಿ ಗುರುವಾರ ಸೆಸ್ಕ್ ವತಿಯಿಂದ ಮೃತರ ಕುಟುಂಬಗಳಿಗೆ ತಲಾ ೫ ಲಕ್ಷ ರು.ಗಳ ಚೆಕ್ ವಿತರಿಸಲಾಗಿದೆ. ಸೆಸ್ಕ್ ಮೇಲಧಿಕಾರಿಗಳ ಜತೆ ಚರ್ಚಿಸಿ, ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಮೃತರ ಕುಟುಂಬದವರು ಯಾವುದೇ ಸಮಯದಲ್ಲೂ ಧೈರ್ಯ ಕಳೆದುಕೊಳ್ಳಬಾರದು ಎಂದು ಸಾಂತ್ವನ ಹೇಳಿದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗಿರಿಜಾ ಮೃತರ ಪತ್ನಿಯರಿಗೆ ವಿಧವಾ ವೇತನ ಮಂಜೂರಾತಿ ಪತ್ರ ವಿತರಿಸಿದರು. ಸೆಸ್ಕ್ ಇಇ ಪ್ರದೀಪ್, ಸೆಸ್ಕ್ ಎಇಇ ಮುತ್ತುರಾಜ್, ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಚಿಕ್ಕಮಹದೇವು, ಕಾಗಲವಾಡಿ ಚಂದ್ರು, ಹೆಬ್ಬಸೂರು ಮರಿಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಲಿಂಗಯ್ಯ, ವಿಜಯೇಂದ್ರ, ನಾಗವಳ್ಳಿ ನಾಗಯ್ಯ ಸೇರಿದಂತೆ ಸ್ಥಳೀಯರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))