ಸಾರಾಂಶ
ಸರ್ಕಾರಿ ಭೂಮಿ ಮಂಜೂರು ಮಾಡುವಂತಹ ಬಗರ್‌ಹುಕುಂ ಕಮಿಟಿಯು ನೈಜ ಪಲಾನುಭವಿ ರೈತರನ್ನು ಗುರುತಿಸಿ ಅವರಿಗೆ ಭೂಮಿ ಮಂಜೂರು ಮಾಡಲು ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ರೈತರ ಜಮೀನಿನಲ್ಲೇ ಅವರಿಗೆ ಮಂಜೂರಿ ಹಾಗೂ ಸ್ಥಿರೀಕರಣ ನೀಡಿದ ವಿಶೇಷ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಸರ್ಕಾರಿ ಭೂಮಿ ಮಂಜೂರು ಮಾಡುವಂತಹ ಬಗರ್‌ಹುಕುಂ ಕಮಿಟಿಯು ನೈಜ ಪಲಾನುಭವಿ ರೈತರನ್ನು ಗುರುತಿಸಿ ಅವರಿಗೆ ಭೂಮಿ ಮಂಜೂರು ಮಾಡಲು ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ರೈತರ ಜಮೀನಿನಲ್ಲೇ ಅವರಿಗೆ ಮಂಜೂರಿ ಹಾಗೂ ಸ್ಥಿರೀಕರಣ ನೀಡಿದ ವಿಶೇಷ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಸರ್ಕಾರಿ ಭೂಮಿ ಮಂಜೂರಾತಿಗಾಗಿ ನಮೂನೆ ೫೩, ೫೭ ಸೇರಿದಂತೆ ಅರ್ಜಿಗಳನ್ನು ಸಲ್ಲಿಸಿರುವಂತ ರೈತರು ನೈಜವಾಗಿ ಅವರೇ ಭೂಮಿಯನ್ನು ಉಳುಮೆಮಾಡುತ್ತಿದ್ದಾರೋ ಇಲ್ಲವೇ ಬೇರೆಯವರು ಸ್ಥಳದಲ್ಲಿದ್ದಾರಾ. ಭೂಮಿಯ ಅನುಭವದಲ್ಲಿ ಯಾರು ಇದ್ದಾರೆ ಎಂಬ ಮಾಹಿತಿ ಪಡೆದು ರೈತರಿಗೆ ಅನ್ಯಾಯವಾಗಬಾರದು ಎಂಬ ದೃಷ್ಠಿಯಿಂದ ಆಯಾ ಅರ್ಜಿದಾರರ ಜಮೀನುಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರಿಗೆ ಭೂ ಮಂಜೂರಾತಿಗೆ ಯಾವುದೇ ಮಧ್ಯವರ್ತಿಗಳ, ಅಧಿಕಾರಿಗಳ ಆಮಿಷಗಳಿಗೆ ಒಳಗಾಗದಂತೆ ನೇರವಾಗಿ ರೈತರಿಗೆ ಭೂ ಮಂಜೂರಾತಿ ನೀಡಲು ನಾವು ಹೊಲಗಳಿಗ ಭೇಟಿ ನೀಡುತ್ತಿದ್ದೇವೆ ಎಂದರು.ಮೇಲನಹಳ್ಳಿಯ ೭೨ ಸರ್ವೆ ನಂಬರ್‌ನಲ್ಲಿ ೧೯ಜನಕ್ಕೆ ೭೧ ಸರ್ವೆನಂಬರ್‌ನಲ್ಲಿ ೫ಜನಕ್ಕೆ, ೬೯ರಲ್ಲಿ ೩ಜನಕ್ಕೆ, ದಬ್ಬಗುಂಟೆ ಸರ್ವೆನಂಬರನಲ್ಲಿ ೧೨೩ರಲ್ಲಿ ೪ ಜನಕ್ಕೆ ಮೈಲುಕಬ್ಬೆಯ ೩೧ಜನಕ್ಕೆ ಸ್ಥಿರಿಕರಣ ನೀಡಿದ್ದು ಇನ್ನು ಉಳಿದ ೩೪ ಅರ್ಜಿದಾರರ ಕಮಿಟಿಯ ಮುಂದೆ ತರಲು ಕ್ರಮಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಪುರಂದರ ಕೆ ಮಾತನಾಡಿ ಈ ರೀತಿಯಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಸ್ಥಳಕ್ಕೆ ಹೋಗಿ ಭೇಟಿ ಮಾಡಿದ ಶಾಸಕರು ಆ ರೈತನಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದಾರೆ. ಈ ಭೂ ಮಂಜೂರಿ ಪಡೆದ ರೈತರಿಗೆ ಮುಂದಿನ ಕನಿಷ್ಠ ಒಂದು ತಿಂಗಳಲ್ಲಿ ಮುಂದಿನ ಖಾತೆ , ಪಹಣಿ ಮಾಡುವ ಕ್ರಮ ನಡೆಯುತ್ತದೆ ಇದಕ್ಕಾಗಿ ರೈತರು ಸಹಕಾರ ನೀಡಬೇಕು ಎಂದರು. ಈ ಸಂಧರ್ಬದಲ್ಲಿ ಬಗರ್‌ಹುಕುಂ ಕಮಿಟಿಯ ಸದಸ್ಯರುಗಳಾದ ಬೇವಿನಹಳ್ಳಿ ಚನ್ನಬಸವಯ್ಯ, ವನಜಾಕ್ಷಮ್ಮ, ಮಂಜುನಾಥ್ ಸೇರಿದಂತೆ ಆಯಾ ಹೋಬಳಿಗಳ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮಾಡಳಿತಾಧಿಕಾರಿಗಳು, ಗ್ರಾಮಸಹಾಯಕರುಗಳು ಹಾಜರಿದ್ದರು.