ಹಿರೇಕೆರೂರು: ಸರ್ವಜ್ಞ ಏತ ನೀರಾವರಿ ಯೋಜನೆಯಲ್ಲಿ ಅಬಲೂರು ಗ್ರಾಮದ ದೊಡ್ಡ ಕೆರೆಗೆ ನೀರು ಹರಿಯುತ್ತಿರುವುದನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ವೀಕ್ಷಣೆ ಮಾಡಿ, ಗಂಗಾಮಾತೆಗೆ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ, ಕೆರೆ-ಕಟ್ಟೆಗಳು ರೈತರ ಜೀವನಾಡಿಯಾಗಿದ್ದು, ಕೆರೆಗಳು ಭರ್ತಿ ತುಂಬಿದಾಗ ರೈತರ ಮೊಗದಲ್ಲಿ ಮಂದಹಾಸ ಮೂಡಿ, ಕೃಷಿ ಚಟುವಟಿಕೆಗೆ ಹೆಚ್ಚು ಅನುಕೂಲವಾಗುತ್ತದೆ. ಈ ಕಾರಣಕ್ಕೆ ಮೂರು ನೀರಾವರಿ ಯೋಜನೆಗಳ ಮೂಲಕ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಹಲವು ಗ್ರಾಮಗಳ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಗತವಾಗಿತ್ತು. ಇನ್ನುಳಿದ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿ, ತುಂಗಭದ್ರಾ ನದಿಯಿಂದ ಅವಳಿ ತಾಲೂಕಿನ 88 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಕೆರೆಗಳು ತುಂಬಿದಾಗ ರೈತರು ಆರ್ಥಿಕವಾಗಿ ಸಬಲರಾಗಲು ಅನಕೂಲವಾಗುತ್ತದೆ ಎಂದರು.ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಪುಟ್ಟನಗೌಡ ಪಾಟೀಲ, ಜಿಲಾನಿ ಬಳಿಗಾರ, ಬಸವರಾಜ ಮಳವಳ್ಳಿ, ಮಹಾಲಿಂಗಪ್ಪ ಗುಳಲಕಾಯಿ, ಶಂಕ್ರಪ್ಪ ಗೌಡ್ರ, ಬಸವಣ್ಣೆಪ್ಪ ಮಳವಳ್ಳಿ, ಹಾಲಪ್ಪ ಮಳವಳ್ಳಿ, ಸೋಮನಗೌಡ ಕಡೂರ, ಉಳಿವೆಯ್ಯ ಈರಮ್ಮನವರ, ನಿಂಗಪ್ಪ ಪಾಟೀಲ, ಶಿದ್ದಪ್ಪ ಕಚವೇರ, ಜಗದೀಶ ಮಳವಳ್ಳಿ, ಅಶೋಕ ಆಡೂರ, ಶಾಂತಯ್ಯ ಈರಮ್ಮನವರ, ಈರಪ್ಪ ಗುಳಲಕಾಯಿ, ಯಲ್ಲಪ್ಪ ಸೆಣಬಿನ್, ವೆಂಕಟೇಶ ಶೀತಿಕೊಂಡ, ಸಿದ್ದು ಮಳವಳ್ಳಿ, ಚಂದ್ರು ಮುದಗೋಳ, ರವಿ ಮುದಗೋಳ, ಷಣ್ಮುಖ ಆರಾಧ್ಯಮಠ, ಲೋಕೇಶ ಮಳವಳ್ಳಿ, ಸುರೇಶ ಮಡಿವಾಳರ, ಕರಬಸಪ್ಪ ಇಂಗಳಗೊಂದಿ, ಶಿವಲಿಂಗಪ್ಪ ಕುರುವತ್ತೇರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.