ನೀರಾವರಿ ಕಾಲುವೆ ಕಾಮಗಾರಿಗಾಗಿ ಉಪವಾಸ ಧರಣಿ

| Published : Jun 09 2024, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡರೈತರ ಜಮೀನಿಗೆ ನೀರು ಬಿಡುವವರೆಗೂ ಹೋರಾಟ ನಿರಂತರವಾಗಿರಲಿದೆ. ನನ್ನ ಹೋರಾಟವನ್ನು ಬಗ್ಗು ಬಡಿಯಲು ಕುತಂತ್ರ ಮಾಡುತ್ತಿದ್ದು, ತಡೆಯಲು ಸಾಧ್ಯವಿಲ್ಲ ಎಂದು ಯುವ ಜನ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡರೈತರ ಜಮೀನಿಗೆ ನೀರು ಬಿಡುವವರೆಗೂ ಹೋರಾಟ ನಿರಂತರವಾಗಿರಲಿದೆ. ನನ್ನ ಹೋರಾಟವನ್ನು ಬಗ್ಗು ಬಡಿಯಲು ಕುತಂತ್ರ ಮಾಡುತ್ತಿದ್ದು, ತಡೆಯಲು ಸಾಧ್ಯವಿಲ್ಲ ಎಂದು ಯುವ ಜನ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಹೇಳಿದರು.

ಪಟ್ಟಣದ ವೀರೇಶ್ವರ ವೃತ್ತದಲ್ಲಿ ಚಿಮ್ಮಲಗಿ ಹಾಗೂ ನಾಗರಬೆಟ್ಟ ಏತ ನೀರಾವರಿ ಕಾಲುವೆ ಕಾಮಗಾರಿ ಶೀಘ್ರದಲ್ಲೆ ಪ್ರಾರಂಭಿಸಬೇಕು ಎಂದು ಆಮರಣ ಉಪವಾಸ ಧರಣಿಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಚಿಮ್ಮಲಗಿ ಹಾಗೂ ನಾಗರಬೆಟ್ಟ ಏತ ನೀರಾವರಿ ಕಾಲುವೆ ಪೂರ್ಣಗೊಳಿಸಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಕೂಡಲೇ ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವ ತನಕ ಆಮರಣ ಉಪವಾಸ ಧರಣಿ ಕೈಬಿಡಲ್ಲ ಎಂದು ಸ್ಪಷ್ಟಪಡಿಸಿದರು.

ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ ಮಾತನಾಡಿ, ಶಿವಾನಂದ ವಾಲಿ ಹೋರಾಟ ಪಕ್ಷಾತೀತವಾಗಿದ್ದು, ಅನ್ಯಾಯ ಆದಾಗ ಬೆಂಬಲ ನೀಡುವುದು ನಮ್ಮ ಹಕ್ಕು. ನಾವು ಬೆಂಬಲ ನೀಡುತ್ತಿದ್ದೇವೆ ಎಂದರು.

ಮುಖಂಡರಾದ ಮುತ್ತು ಅಂಗಡಿ, ಕೆಂಚಪ್ಪಣ್ಣ ಬಿರಾದಾರ, ಗಿರೀಶಗೌಡ ಪಾಟೀಲ, ಸಂಗಣ್ಣ ಮೇಟಿ, ಮಹಾಂತಯ್ಯ ವಿರಕ್ತಮಠ, ಮೌನೇಶ ಮಾದರ, ಮಲ್ಲು ಗಂಗನಗೌಡರ ಹಾಗೂ ರೈತ ಮುಖಂಡರು ಮಾತನಾಡಿದರು. ನಂತರ ವೀರೇಶ್ವರ ವೃತ್ತದಿಂದ 3 ಕಿ.ಮೀವರಗೆ ಪಾದಯಾತ್ರೆ ಮೂಲಕ ಅಮರೇಶ್ವರ ದೇವಸ್ಥಾನದ ಹತ್ತಿರ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.

ವಿವಿಧ ಸಂಘಟಕರ ಬೆಂಬಲ: ಹೋರಾಟಕ್ಕೆ ನಾಲತವಾಡ ಹಾಗೂ ಸುತ್ತಮುತ್ತಲಿನ ರೈತರು, ಕನ್ನಡ ಪರ, ದಲಿತ, ರೈತ ಪರ ಸಂಘಟಕರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಧರಣಿ ಸ್ಥಳದಲ್ಲಿ ನೂರಾರು ರೈತರು ಇದ್ದರು. ಈ ವೇಳೆ ಅಪ್ಪುಧಣಿ ನಾಡಗೌಡ, ಮುದಕಪ್ಪ ಗಂಗನಗೌಡರ, ಅಕ್ಷಯ ನಾಡಗೌಡ, ಬಾಬು ಹಾದಿಮನಿ, ಸಂಗಣ್ಣ ಕುಳಗೇರಿ, ಜಿ.ಮಹಾಂತೇಶ ಗಂಗನಗೌಡರ, ಶರಣಪ್ಪ ಗಂಗನಗೌಡರ, ವೀರೇಶ ಅವೋಜಿ, ಸುನಿಲ ಕ್ಷತ್ರಿ, ಅಂಬ್ರೇಶ ಹಟ್ಟಿ, ಚನ್ನಪ್ಪಗೌಡ ಹಂಪನಗೌಡರ, ರಫೀಕ ತೆಗ್ಗಿನಮನಿ, ಗುಂಡಪ್ಪ ಚಲವಾದಿ, ಯಲ್ಲಪ್ಪ ಚಲವಾದಿ, ವೀರೇಶ ಕಂದಗಲ್ಲ ಇದ್ದರು.----------------------ಬಾಕ್ಸ್‌

ಹೋರಾಟ ಕೈ ಬಿಡಲು ಮನವಿ

ನಾಲತವಾಡ: ಹೋರಾಟಗಾರ ಶಿವಾಂದ ವಾಲಿ ಉಪವಾಸ ಸತ್ಯಾಗ್ರಹದ ಬದಲು ನೀಡಿದ್ದ ಗುಡುವು ಮುಗಿಯುವವರೆಗೆ ಕಾದು ನೋಡುವಂತೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪೃಥ್ವಿರಾಜ ನಾಡಗೌಡ ಹೇಳಿದ್ದಾರೆ. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಬಿಜೆಎನ್‌ಎಲ್ ಅಧಿಕಾರಿಗಳು ಅಮರೇಶ್ವರ ದೇವಸ್ಥಾನದ ಹತ್ತಿರ ನೆನೆಗುದಿಗೆ ಬಿದ್ದ ಕಾಮಗಾರಿ ವೀಕ್ಷಣೆ ಮಾಡಿದ್ದೇವೆ. ಮೊದಲು ಸಿಂಗಲ್ ಟೆಂಡರ್ ಆಗಿತ್ತು. ಅದು ಕ್ಯಾನ್ಸಲ್ ಆಗಿದೆ, ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ. ಈ ವಿಷಯವನ್ನು ಶಿವಾನಂದ ವಾಲಿ ಅವರಿಗೂ ತಿಳಿಸಿದ್ದಾರೆ, ಹೋರಾಟವನ್ನು ಮುಂದುವರೆಸಿದ್ದಾರೆ. ಕೆಲವು ದಿನ ಕಾಲಾವಕಾಶ ನೀಡಬೇಕು, ಅಧಿಕಾರಿಗಳು ನೀಡಿದ ಕಾಲಾವಕಾಶದ ಒಳಗೆ ಕೆಲಸ ಮಾಡದಿದ್ದರೆ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂಬ ಎಂದರು.

13 ವರ್ಷಗಳು ಗತಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ ಅಂತ ಹೋರಾಟ ಹಮ್ಮಿಕೊಂಡಿದ್ದಾರೆ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಅಧಿಕಾರಕ್ಕೆ ಬಂದ ನಂತರ ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿದ್ದರು. ಟೆಂಡರ್ ಕೂಡ ಆಗಿತ್ತು ಇಲಾಖೆಯ ನಿಯಮದ ಪ್ರಕಾರ ಅದು ರದ್ದಾಗಿದೆ. ಕೂಡಲೆ ಮರು ಟೆಂಡರ್ ಮಾಡಿ ಕಾಮಗಾರಿ ಪ್ರಾರಂಭಿಸಿ ಎಂದಿದ್ದಾರೆ. ಹೀಗಾಗಿ, ಅವರು ಹೋರಾಟವನ್ನು ಕೈಬಿಡಬೇಕು, ಅಧಿಕಾರಿಗಳು ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದರು.

ಈ ವೇಳೆ ಮುಖಂಡರಾದ ಹಣಮಂತ ಕುರಿ, ಮಲ್ಲು ತಳವಾರ, ರಸೂಲ ಮಕಾಂದಾರ, ಸಂಗು ಗಂಗನಗೌಡರ, ಗನಿ ಅವಟಿ, ಮಂಜುನಾಥ ಕಟ್ಟಿಮನಿ, ಮೌನೇಶ ಮಾದರ, ಅಲ್ಲಾಭಕ್ಷ ಮೂಲಿಮನಿ ಇತರರು ಇದ್ದರು.