ಸಾರಾಂಶ
ಹಾಸನಾಂಬೆ ದರ್ಶನ ಮುಗಿಸಿಕೊಂಡು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಹಿಂದಿನಿಂದ ಬೊಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಆಸ್ಪತ್ರೆ ಸಮೀಪ ಗುರುವಾರ ನಡುರಾತ್ರಿ ನಡೆದಿದೆ. ಆಲೂರು ತಾಲೂಕಿನ ಪಾಳ್ಯ ಸಮೀಪದ ಎಂ.ಎಚ್.ಪುರದ ನಿವಾಸಿ ಕುಮಾರ್(40) ಹಾಗೂ ಕಾವ್ಯ(12) ಸ್ಥಳದಲ್ಲೇ ಮೃತಪಟ್ಟಿದ್ದು, ಕುಮಾರ್ ಅವರ ತಾಯಿ ಪುಟ್ಟಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ ಹಾಸನಾಂಬೆ ದರ್ಶನ ಮುಗಿಸಿಕೊಂಡು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಹಿಂದಿನಿಂದ ಬೊಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಆಸ್ಪತ್ರೆ ಸಮೀಪ ಗುರುವಾರ ನಡುರಾತ್ರಿ ನಡೆದಿದೆ.
ಆಲೂರು ತಾಲೂಕಿನ ಪಾಳ್ಯ ಸಮೀಪದ ಎಂ.ಎಚ್.ಪುರದ ನಿವಾಸಿ ಕುಮಾರ್(40) ಹಾಗೂ ಕಾವ್ಯ(12) ಸ್ಥಳದಲ್ಲೇ ಮೃತಪಟ್ಟಿದ್ದು, ಕುಮಾರ್ ಅವರ ತಾಯಿ ಪುಟ್ಟಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೀ ಹಾಸನಾಂಬ ದೇವಿ ದರ್ಶನ ಪಡೆಯಲು ಗುರುವಾರ ಸಂಜೆ ೫ ಗಂಟೆ ಸುಮಾರಿನಲ್ಲಿ ಸರದಿ ಸಾಲಿನಲ್ಲಿ ಸಾಗಿ ರಾತ್ರಿ ೧೨ ಗಂಟೆ ಸುಮಾರಿನಲ್ಲಿ ಶ್ರೀದೇವಿಯ ದರ್ಶನ ಪಡೆದಿದ್ದಾರೆ. ನಂತರ ವಿಜಯನಗರ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಗೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕುಮಾರ್ ಹಾಗೂ ಅವರ ಪುತ್ರಿ ಕಾವ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಾರ್ ತಾಯಿ ಪುಟ್ಟಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಫೋಟೋ: ಕುಮಾರ್
ಫೋಟೋ: ಕಾವ್ಯ