ಸಾರಾಂಶ
-ಎದುರಾಳಿಗಳು ಮಗಳ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆಂದು ಬಿಂಬಿಸಲು ಯತ್ನ। ತನಿಖೆಯಲ್ಲಿ ಕೃತ್ಯ ಬಯಲು
-----ಕನ್ನಡಪ್ರಭ ವಾರ್ತೆ ಕಲಬುರಗಿ
ಜಮೀನು ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಮಗಳನ್ನು ತಾನೇ ಕೊಲೆ ಮಾಡಿ ಎದುರಾಳಿಗಳು ಆಕೆಯನ್ನ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆಂದು ತಂದೆಯೇ ಬಿಂಬಿಸಲು ಯತ್ನಿಸಿದ ಹೇಯ ಕೃತ್ಯವೊಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.ವಿಕಲಚೇತನಳಾದ ಮಂಜುಳಾ ನಿಲೂರ (17) ಈಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಬಾಲಕಿಯ ತಾಯಿ ವಿಮಲಾಬಾಯಿ ನೀಲೂರ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ವಿಕಲಚೇತನಳಾದ ತಮ್ಮ ಮಗಳನ್ನು ದುರುದ್ದೇಶದಿಂದ ಕೊಲೆ ಮಾಡಿ, ನೇಣು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಅಲ್ಲದೆ ಹೊಲದ ಹಾದಿಯ ವಿಷಯಕ್ಕೆ ಕೊಲೆ ಮಾಡಿರಬಹುದು ಎಂದು ಗ್ರಾಮದ ಕಲ್ಯಾಣಿ ತಂದೆ ಜಗದೀಶ, ಗುಂಡಪ್ಪ ತಂದೆ ಜಗದೀಶ ಮತ್ತು ಮಲ್ಲಿಕಾರ್ಜುನ ತಂದೆ ಜಗದೀಶ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.ಮಗಳನ್ನು ತಂದೆಯೇ ಕೊಲೆ ಮಾಡಿ ನೇಣು ಹಾಕಿರುವ ಘಟನೆ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿ ತಂದೆ ಗುಂಡೆರಾವ ನೀಲೂರ್ ಎಂಬಾತನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕಲ್ಲಹಂಗರಗಾ ಗ್ರಾಮ ದಲ್ಲಿ ವಿಕಲಚೇತನಳಾದ ಮಂಜುಳಾಳನ್ನು ಕೊಲೆ ಮಾಡಿ ನೇಣು ಹಾಕಲಾಗಿತ್ತು. ಇದಕ್ಕೆ ಅಪ್ಪನೇ ಕಲೆಗಾರ ಎಂಬ ಭಯಾನಕ ಸಂಗತಿ ಪತ್ತೆಹಚ್ಚಿ 24 ಗಂಟೆಗಳಲ್ಲೇ ಆತನನ್ನು ಪೊಲೀಸರು ಸಂಬಧಿಸಿದ್ದಾರೆಂದು ಹೇಳಿದರು.ಜಮೀನು ದಾರಿಗಾಗಿ ಪಕ್ಕದ ಜಮೀನಿನ ಮಾಲೀಕರೊಂದಿಗೆ ಜಗಳ ಸಾಗಿತ್ತು. ಪಕ್ಕದ ಜಮೀನಿನವರನ್ನು ಜೈಲಿಗೆ ಅಟ್ಟಲು ಗುಂಡೇರಾವ ಖರ್‌ನಾಕ್ ಸಂಚು ರೂಪಿಸಿದ್ದ. ತನ್ನ ಮಗಳಿಗೆ ಆತ್ಮಹತ್ಯೆಗೆ ಪ್ರಚೋದಿಸಿದ ಬಳಿಕ ಗುಂಡೇರಾವ್ ಸ್ಥಳದಿಂದ ಹೊರಹೋಗಿದ್ದ. ಕುಟುಂಬದವರು ಈ ಬಗ್ಗೆ ಕೇಳಿದರೆ ತನಗೆ ಏನೂ ಗೊತ್ತಿಲ್ಲದವರಂತೆ ನಟಿಸಿದ್ದ. ಇವೆಲ್ಲ ಸಂಗತಿಗಳನ್ನು ಖುದ್ದು ಗುಂಡೇರಾವ ವಿಚಾರಣೆಯಲ್ಲಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆಂದು ಕಮೀಶ್ನರ್ ಶರಣಪ್ಪ ಹೇಳಿದ್ದಾರೆ.
ಪ್ರಕರಣದ ತನಿಖೆ ಮತ್ತು ಆರೋಪಿಗಳ ಪತ್ತೆಗೆ ಡಿಸಿಪಿ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿಐ ಭೋಜರಾಜ ರಾಠೋಡ್, ಪಿಎಸ್‌ಐ ಬಸವರಾಜು, ಎಎಸ್‌ಐ ನಾಗರಾಜ, ಸಿಬ್ಬಂದಿ ಮಂಜುನಾಥ, ಅಶೋಕ, ಫಿರೋಜ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.ಮೃತಳ ತಂದೆ ಗುಂಡೇರಾಯ ನೀಲೂರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿಐ ಭೋಜರಾಜ ರಾಠೋಡ್, ಪಿಎಸ್‌ಐ ಬಸವರಾಜು ಇದ್ದರು.ಫೋಟೋ- ಗುಂಡೇರಾವ್ ಫಾದರ್
ಫೋಟೋ- ಡಾಟರ್ ಮರ್ಡರಮಂಜುಳಾ, ಮೃತ ದರ್ದೈವವಿ
;Resize=(128,128))
;Resize=(128,128))
;Resize=(128,128))
;Resize=(128,128))