ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್ಸ್‌ (ಎಫ್‌ಎಂಸಿಐ)ನ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಏ.16ರಿಂದ 18ರವರೆಗೆ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದ್ದು, 856 ಪದವೀಧರರು ಪದವಿ ಸ್ವೀಕರಿಸಲಿದ್ದಾರೆ ಎಂದು ಎಫ್‌ಎಂಸಿಐ ನಿರ್ದೇಶಕ ಫಾ. ಫೌಸ್ಟೀನ್ ಲ್ಯೂಕಸ್ ಲೋಬೊ ತಿಳಿಸಿದ್ದಾರೆ.

ಮಂಗಳೂರು: ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್ಸ್‌ (ಎಫ್‌ಎಂಸಿಐ)ನ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಏ.16ರಿಂದ 18ರವರೆಗೆ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದ್ದು, 856 ಪದವೀಧರರು ಪದವಿ ಸ್ವೀಕರಿಸಲಿದ್ದಾರೆ ಎಂದು ಎಫ್‌ಎಂಸಿಐ ನಿರ್ದೇಶಕ ಫಾ. ಫೌಸ್ಟೀನ್ ಲ್ಯೂಕಸ್ ಲೋಬೊ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಪದವಿ ಪ್ರದಾನ ಸಮಾರಂಭದಲ್ಲಿ ಹಳೆಯ ಡ್ರೆಸ್‌ ಕೋಡ್‌ ಬದಲಾಗಿ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ, ಸಂಸ್ಥೆಯ ಹೆಸರಿರುವ ಶಾಲನ್ನು ವಿದ್ಯಾರ್ಥಿಗಳು ಧರಿಸಲಿದ್ದಾರೆ. ಅವರಿಗೆ ಫ್ರೇಮ್‌ ಮಾಡಿದ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.ಮೂರು ದಿನ ಪದವಿ ಪ್ರದಾನ: ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ 36ನೇ ಪದವಿ ಪ್ರದಾನ ಸಮಾರಂಭ ಏಪ್ರಿಲ್ 16ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ದೆಹಲಿಯ ನ್ಯಾಷನಲ್ ಕಮಿಷನ್ ಫಾರ್ ಹೋಮಿಯೋಪತಿಯ ಚೇರ್ಮನ್‌ ಡಾ. ತಾರಕೇಶ್ವರ್ ಜೈನ್ ಮತ್ತು ಯೆನೆಪೋಯ ಡೀಮ್ಡ್‌ ಟು ಬಿ ಯೂನಿವರ್ಸಿಟಿ ವೈಸ್‌ ಚಾನ್ಸಲರ್‌ ಡಾ. ಕೆ.ಎಸ್. ಗಂಗಾಧರ್ ಸೋಮಯಾಜಿ ಭಾಗವಹಿಸಲಿದ್ದಾರೆ. 19 ಮಂದಿ ಸ್ನಾತಕೋತ್ತರ ಪದವೀಧರರು ಸೇರಿ ಒಟ್ಟು 111 ಮಂದಿ ಪದವಿ ಸ್ವೀಕರಿಸಲಿದ್ದಾರೆ. ಪ್ರೆಸಿಡೆಂಟ್ಸ್‌ ಗೋಲ್ಡ್ ಮೆಡಲ್, ಉತ್ತಮ ವಿದ್ಯಾರ್ಥಿ ಸಂಶೋಧಕ ಪ್ರಶಸ್ತಿ, ಆರ್‌ಜಿಯುಎಚ್‌ಎಸ್ ಗೋಲ್ಡ್ ಮೆಡಲ್‌ ಪ್ರದಾನ ಮಾಡಲಾಗುವುದು ಎಂದರು.

ಫಾದರ್ ಮುಲ್ಲರ್ ಮೆಡಿಕಲ್, ಅಲೈಡ್ ಹೆಲ್ತ್ ಆಂಡ್‌ ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ಏಪ್ರಿಲ್ 17ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಆರ್. ಪಾಟೀಲ್, ಮತ್ತು ಧಾರವಾಡ ಕರ್ನಾಟಕ ವಿವಿ ಉಪಕುಲಪತಿ ಪ್ರೊ.ಡಾ. ಐರಾನಿ ಮೊಹಮ್ಮದ್ ಖಾನ್ ಭಾಗವಹಿಸಲಿದ್ದಾರೆ. ಒಟ್ಟು 518 ಮಂದಿ ಪದವಿ ಸ್ವೀಕರಿಸಲಿದ್ದಾರೆ. ಪ್ರೆಸಿಡೆಂಟ್ಸ್‌ ಗೋಲ್ಡ್ ಮೆಡಲ್ (ಎಂಬಿಬಿಎಸ್‌ ಕೋರ್ಸ್‌ಗೆ) ಮತ್ತು ವಿವಿಧ ಸಾಂಸ್ಥಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.ಫಾದರ್ ಮುಲ್ಲರ್ ಕಾಲೇಜ್ ಆಂಡ್‌ ಸ್ಕೂಲ್‌ ಆಫ್‌ ನರ್ಸಿಂಗ್‌ ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಸ್ಪೀಚ್ ಆಂಡ್‌ ಹಿಯರಿಂಗ್‌ನ ಪದವಿ ಪ್ರದಾನ ಏಪ್ರಿಲ್ 18ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆಯ ಎಸೋಸಿಯೇಟ್‌ ಡೀನ್‌ ಡಾ. ವೆಂಕಟರಾಯ ಐತಾಳ್ ಮತ್ತು ಭವನೇಶ್ವರ ಎಐಐಎಂಎಸ್‌ ಕಾಲೇಜ್‌ ಆಫ್‌ ನರ್ಸಿಂಗ್‌ನ ಪ್ರಾಂಶುಪಾಲೆ ಡಾ. ಆಶಾ ಪಿ. ಶೆಟ್ಟಿ ಭಾಗವಹಿಸಲಿದ್ದಾರೆ. ಬಿಎಸ್ಸಿ ನರ್ಸಿಂಗ್, ಪಿಬಿ ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್, ಜಿಎನ್‌ಎಂ ಸೇರಿದಂತೆ ಒಟ್ಟು 177 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಸ್ಪೀಚ್ ಆಂಡ್‌ ಹಿಯರಿಂಗ್‌ನ 30 ವಿದ್ಯಾರ್ಥಿಗಳು, ಎಂಎಸ್ಸಿ ಆಡಿಯಾಲಜಿ- 9, ಎಂಎಸ್ಸಿ ಸ್ಪೀಚ್- ಲ್ಯಾಂಗ್ವೇಜ್ ಪ್ಯಾಥಾಲಜಿಯ 11 ವಿದ್ಯಾರ್ಥಿಗಳು ಕೂಡ ಇದೇ ಸಂದರ್ಭ ಪದವಿ ಸ್ವೀಕರಿಸುತ್ತಾರೆ ಎಂದು ಫಾ. ಫೌಸ್ಟೀನ್ ಲ್ಯೂಕಸ್ ಲೋಬೊ ತಿಳಿಸಿದರು.ಎಫ್‌ಎಂಎಂಸಿ, ಎಫ್‌ಎಂಸಿಒಎಎಚ್‌ಎಸ್‌, ಎಫ್‌ಎಂಸಿಒಪಿ ಆಡಳಿತಾಧಿಕಾರಿ ಡಾ. ಮೈಕೆಲ್ ಸಾಂತುಮೇಯರ್, ಎಫ್‌ಎಂಎಚ್‌ಟಿ, ಎಫ್‌ಎಂಎನ್‌ಸಿ, ಎಫ್‌ಎಂಎಎಚ್‌ಎಸ್‌ಸಿ ಆಡಳಿತಾಧಿಕಾರಿ ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ದೇರಳಕಟ್ಟೆಯ ಎಫ್‌ಎಂಎಚ್‌ಪಿಡಿ ಆಡಳಿತಾಧಿಕಾರಿ ಫಾ. ನೆಲ್ಸನ್ ಧೀರಜ್ ಪೈಸ್‌, ಎಫ್‌ಎಂಎಚ್‌ಎಂಸಿ ಆಂಡ್‌ ಎಚ್‌ ಆಡಳಿತಾಧಿಕಾರಿ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಎಫ್‌ಎಂಎಂಸಿ ಡೀನ್ ಡಾ. ಆಂಟನಿ ಸಿಲ್ವಾನ್ ಡಿಸೋಜ, ಎಫ್‌ಎಂಸಿಒಎಎಚ್‌ಎಸ್‌ ಪ್ರಾಂಶುಪಾಲ ಡಾ. ಶಿವಶಂಕರ ಎ.ಆರ್., ಎಫ್‌ಎಂಸಿಒಪಿ ಪ್ರಾಂಶುಪಾಲೆ ಪ್ರೊ. ಚೆರಿಷ್ಮಾ ಡಿಸಿಲ್ವ, ಎಫ್‌ಎಂಸಿಒಎನ್‌ ಆಂಡ್‌ ಎಫ್‌ಎಂಎಸ್‌ಒಎನ್‌ ಪ್ರಿನ್ಸಿಪಾಲ್‌ ಧನ್ಯಾ ದೇವಾಸಿಯಾ, ಎಫ್‌ಎಂಸಿ ಪ್ರಾಂಶುಪಾಲ ಪ್ರೊ. ಸಿಂಥಿಯಾ ಸಾಂತುಮಾಯರ್, ಎಫ್‌ಎಂಎಚ್‌ಎಂಸಿ ಪ್ರಾಂಶುಪಾಲ ಡಾ.ಇ.ಎಸ್.ಜೆ ಪ್ರಭು ಕಿರಣ್, ಎಫ್‌ಎಂಸಿಒಪಿಎಸ್‌ ಪ್ರಾಂಶುಪಾಲ ಡಾ. ಸತೀಶ್ ಎಸ್., ಎಫ್‌ಎಂಎಎಚ್‌ಎಸ್‌ಸಿ ಪ್ರಾಂಶುಪಾಲ ಡಾ. ಪೌಲಿನ್ ಆನಂದ್, ಫೋರ್‌ವಿಂಡ್ಸ್ ಕಮ್ಯುನಿಕೇಶನ್ಸ್‌ನ ಎಲಿಯಾಸ್ ಫರ್ನಾಂಡಿಸ್ ಇದ್ದರು.

-----------

ಫೋಟೊ

13ಮುಲ್ಲರ್‌