ಸಾರಾಂಶ
ನವದೆಹಲಿ : ವಿದೇಶೀ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಯಲ್ಲಿ ಕರ್ನಾಟಕವು ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರ ಮೊದಲ ಹಾಗೂ ತೆಲಂಗಾಣ 3ನೇ ಸ್ಥಾನ ಪಡೆದಿವೆ.ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ 13.55 ಶತಕೋಟಿ ಡಾಲರ್ (1.13 ಲಕ್ಷ ಕೋಟಿ ರು.) ಎಫ್‌ಡಿಐ ಆಕರ್ಷಿಸಿದೆ. 2ನೇ ಸ್ಥಾನದಲ್ಲಿರುವ ಕರ್ನಾಟಕವು 3.54 ಶತಕೋಟಿ ಡಾಲರ್ (29734 ಕೋಟಿ ರು.), 3ನೇ ಸ್ಥಾನದಲ್ಲಿರುವ ತೆಲಂಗಾಣ 1.54 ಶತಕೋಟಿ ಡಾಲರ್ (9576 ಕೋಟಿ ರು.) ಎಫ್‌ಡಿಐ ಆಕರ್ಷಿಸುವಲ್ಲಿ ಯಶ ಕಂಡಿವೆ ಎಂದು ಕೇಂದ್ರ ಉದ್ದಿಮೆ ಹಾಗೂ ಆಂತರಿಕ ವ್ಯಾಪಾರಗಳ ಇಲಾಖೆ ಭಾನುವಾರ ಹೇಳಿದೆ.
ಇದೇ ವೇಳೆ, ಭಾರತಕ್ಕೆ ಹರಿದು ಬರುವ ವಿದೇಶಿ ನೇರ ಬಂಡವಾಳವು ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 29.79 ಶತಕೋಟಿ ಡಾಲರ್‌ಗೆ ಏರಿದ್ದು, ಇದು ಒಂದು ವರ್ಷದಲ್ಲಿ ಶೇ.45ರಷ್ಟು ಅಧಿಕವಾಗಿದೆ. ಇನ್ನು ಜುಲೈ-ಸೆಪ್ಟೆಂಬರ್ ಅವಧಿಯೊಂದರಲ್ಲೇ ಶೇ.43ರಷ್ಟು ಎಫ್‌ಡಿಐ ಏರಿಕೆ ಆಗಿದ್ದು, ಇದರ ಮೊತ್ತ ಒಟ್ಟಾರೆ 13.6 ಶತಕೋಟಿ ಡಾಲರ್ ಆಗಿದೆ. ಕಳೆದ ವರ್ಷ ಇದೇ ಸಾಲಿನಲ್ಲಿ ಇದು 9.52 ಶತಕೋಟಿ ಡಾಲರ್ ಆಗಿತ್ತು ಎಂದು ಅದು ಹೇಳಿದೆ.
ಸೇವಾ ಕ್ಷೇತ್ರ, ಕಂಪ್ಯೂಟರ್, ಹಾರ್ಡ್‌ವೇರ್, ಸಾಫ್ಟ್‌ವೇರ್, ಟ್ರೇಡಿಂಗ್, ಟೆಲಿಕಾಂ, ಆಟೋಮೊಬೈಲ್, ಫಾರ್ಮಾ ಹಾಗೂ ಕೆಮಿಕಲ್ ಕ್ಷೇತ್ರಗಳಿಗೆ ಎಫ್‌ಡಿಐ ಹೆಚ್ಚು ಹರಿದುಬಂದಿದೆ.-