ಅಶುದ್ಧ ನೀರಿನಿಂದ ಗ್ರಾಮಗಳಲ್ಲಿ ರೋಗದ ಭೀತಿ

| Published : May 27 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಾಯಬಾಗ:ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನಿರ್ಮಿಸಿ ೫ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಶುದ್ದೀಕರಣ ಘಟಕದಿಂದ ಪೂರೈಸುವ ನೀರನ್ನು ಶುದ್ದಗೊಳಿಸದೇ ಗ್ರಾಮಗಳಿಗೆ ಅಶುದ್ಧ ನೀರು ಸರಬರಾಜು ಮಾಡುತ್ತಿರುವುದರಿಂದ 5 ಗ್ರಾಮಗಳಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ರಾಯಬಾಗ:ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನಿರ್ಮಿಸಿ ೫ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಶುದ್ದೀಕರಣ ಘಟಕದಿಂದ ಪೂರೈಸುವ ನೀರನ್ನು ಶುದ್ದಗೊಳಿಸದೇ ಗ್ರಾಮಗಳಿಗೆ ಅಶುದ್ಧ ನೀರು ಸರಬರಾಜು ಮಾಡುತ್ತಿರುವುದರಿಂದ 5 ಗ್ರಾಮಗಳಲ್ಲಿ ರೋಗ ಹರಡುವ ಭೀತಿ ಎದುರಾಗಿದೆ. ದಿಗ್ಗೇವಾಡಿ ಮತ್ತು ಜಲಾಲಪೂರ ಗ್ರಾಮದ ಪಂಚಾಯತಿ ಸದಸ್ಯರು ಶನಿವಾರ ಜಲಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನೀರಿನ ವ್ಯವಸ್ಥೆ ಕಂಡು ಹೌಹಾರಿದರು. ಇಲ್ಲಿನ ಜಲಶುದ್ದೀಕರಣ ಘಟಕದಿಂದ ನೀರನ್ನು ಶುದ್ದೀಕರಿಸದೇ ಹಾಗೇ ನೀರು ಪೂರೈಕೆ ಮಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ರೋಗರುಜಿನಗಳು ಹರಡುವ ಭೀತಿ ಶುರುವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನೀರು ಶುದ್ಧಗೊಳಿಸುವ ನೀರಿನ ಟ್ಯಾಂಕ್‌ಗಳಲ್ಲಿ ಬಟ್ಟೆ, ಟೂತ್‌ಪೆಸ್ಟ್ ಕಂಡು ಗಾಬರಿಯಾದರು. ಈ ಅವ್ಯವಸ್ಥೆಗೆ ಕಾರಣವಾಗಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಕಂಚಕರವಾಡಿ ಗ್ರಾಮದಲ್ಲಿ ೨೫ ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕಂಚಕರವಾಡಿ, ದಿಗ್ಗೇವಾಡಿ, ಭಿರಡಿ, ಜಲಾಲಪೂರ, ಯಡ್ರಾಂವಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ನೀರು ಕಂಚಕರವಾಡಿಯಲ್ಲಿ ಜಲಶುದ್ದೀಕರಣ ಘಟಕ ನಿರ್ಮಿಸಲಾಗಿದೆ ಎಂದು ತಿಳಿಸಿದರು.ಘಟಕ ಸಂಪೂರ್ಣ ಅವ್ಯವಸ್ಥೆ:

ಕಳೆದ 7-8 ವರ್ಷಗಳಿಂದ ಈ ಘಟಕ ಸಂಪೂರ್ಣವಾಗಿ ಅವ್ಯವಸ್ಥೆ ಆಗರವಾಗಿದ್ದು, ಈ ಘಟಕದಲ್ಲಿರುವ ನೀರಿನ ಟ್ಯಾಂಕ್, ನೀರು ಶುದ್ದೀಕರಣಗೊಂಡ ನಂತರ ಸಂಗ್ರಹಿಸುವ ಟ್ಯಾಂಕ್, ತೊಟ್ಟಿಗಳು ಮಲಿನಗೊಂಡಿವೆ. ಟ್ಯಾಂಕ್ ಮೇಲೆ ಮುಚ್ಚಳಕೆಯಿಲದೇ ಇರುವುದರಿಂದ ಅವುಗಳಲ್ಲಿ ಹುಳಹುಪ್ಪಡಿಗಳು ಉತ್ಪತ್ತಿಯಾಗಿವೆ. ತೊಟ್ಟಿಗಳಲ್ಲಿ ಹಸಿರು ಪಾಚಿ ಕಟ್ಟಿಕೊಂಡಿದೆ. ನೀರು ಶುದ್ದಗೊಳಿಸುವ ಮೋಟರ್ ಪಂಪ್‌ಗಳು ಸ್ಥಗಿತಗೊಂಡಿವೆ. ನದಿಯಿಂದ ಬರುವ ನೀರನ್ನು ಶುದ್ಧೀಕರಣ ಮಾಡದೇ, ನೇರವಾಗಿ ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಇದರಿಂದ ಈ ೫ ಗ್ರಾಮಗಳ ಜನರು ಅಶುದ್ಧ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಗ್ರಾಮಸ್ಥರು ದೂರಿದರು.

ಜಲಶುದ್ಧಿಕರಣ ಘಟಕದ ಆವರಣದಲ್ಲಿ ದನಕರುಗಳನ್ನು ಕಟ್ಟುತ್ತಿರುವುದರಿಂದ ಇಲ್ಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಎಲ್ಲೆಂದರಲ್ಲಿ ನಾಯಿಗಳು ಓಡಾಡಿ ಗಲಿಜು ಮಾಡುತ್ತಿದ್ದರೂ ಇತ್ತ ಕಡೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರ ಇತ್ತ ಕಡೆಗೆ ತಿರುಗಿ ಕೂಡ ನೋಡದಿರುವುದು ಬೇಸರದ ಸಂಗತಿ ಎಂದು > ಈ ಸಂದರ್ಭದಲ್ಲಿ ಜಲಾಲಪೂರ ಗ್ರಾ.ಪಂ.ಉಪಾಧ್ಯಕ್ಷ ಮೌಲಾನಾ ನದಾಫ, ಸದಸ್ಯ ನಾಮದೇವ ಕಾಂಬಳೆ, ಶ್ರವಣಕುಮಾರ ಕಾಂಬಳೆ, ಸದಾಶಿವ ಜಗದಾಳೆ, ಅಪ್ಪಾಸಾಬ ಕಾಂಬಳೆ ಇದ್ದರು.>

ಕೋಟ್‌-------------ಕಂಚಕರವಾಡಿ ಜಲಶುದ್ದೀಕರಣ ಘಟಕದ ನಿರ್ವಹಣೆ ಪಡೆದಿರುವ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗುವುದು. ಘಟಕದಿಂದ ಗ್ರಾಮಗಳಿಗೆ 2 ದಿನ ನೀರು ಪೂರೈಕೆಯನ್ನು ಬಂದ ಮಾಡಿ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು. ಈ ಜಲಶುದ್ಧೀಕರಣ ಘಟಕ ಪುನಶ್ಚೇತನಕ್ಕೆ ₹೩.೫೦ ಕೋಟಿ ಅನುದಾನ ಮಂಜೂರಾಗಿದ್ದು, ಚುನಾವಣೆ ನೀತಿಸಹಿಂತೆ ನಂತರ ಕಾಮಗಾರಿ ಪ್ರಾರಂಭಿಸಲಾವುದು.ರವೀಂದ್ರ ಮೂರಗಾಲಿ, ಎಇಇ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ------------

ಕೋಟ್‌

ಇಲ್ಲಿನ ಜಲಶುದ್ದೀಕರಣ ಘಟಕದಿಂದ ನೀರನ್ನು ಶುದ್ದೀಕರಿಸದೇ ಹಾಗೇ ನೀರು ಪೂರೈಕೆ ಮಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ರೋಗರುಜಿನಗಳು ಹರಡುವ ಭೀತಿ ಶುರುವಾಗಿದೆ. ನೀರು ಶುದ್ಧಗೊಳಿಸುವ ನೀರಿನ ಟ್ಯಾಂಕ್‌ಗಳಲ್ಲಿ ಬಟ್ಟೆ, ಟೂತ್‌ಪೆಸ್ಟ್ ಕಂಡು ಗಾಬರಿಯಾಗಿದ್ದೇವೆ. ಈ ಅವ್ಯವಸ್ಥೆಗೆ ಕಾರಣವಾಗಿರುವ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.ಗ್ರಾಮಸ್ಥರು, ಕಂಚಕರವಾಡಿ