ರಸ್ತೆ ಕುಸಿತ ಭೀತಿ: ತಾತ್ಕಾಲಿಕ ಮುಂಜಾಗ್ರತಾ ಕ್ರಮ

| Published : Aug 08 2024, 01:31 AM IST

ಸಾರಾಂಶ

ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯ ಸಂಪರ್ಕ ಕಲ್ಪಿಸುವ ರಸ್ತೆ ಕುಸಿಯುವ ಭೀತಿಯ ಬಗ್ಗೆ ಮಂಗಳವಾರ ನಿವಾಸಿಗಳು ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತಪಡಿಸಿದ ವರದಿ ಪ್ರಕಟಗೊಂಡ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬುಧವಾರ ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್, ಪಿ.ಎ. ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾಗದ ಮಾಲೀಕರಿಗೆ ಎಚ್ಚರಿಕೆ ನೀಡಿ ತಾವೇ ಪರಿಹಾರ ಒದಗಿಸುವಂತೆ ಸೂಚಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಅಧಿಕಾರಿಗಳ ಸೂಚನೆಯಂತೆ ಮಾಲೀಕರು ಒಪ್ಪಿಗೆ ನೀಡಿ ತಾತ್ಕಾಲಿಕವಾಗಿ ಮಣ್ಣಿನ ಚೀಲ ಇಡುವ ಮೂಲಕ ಕುಸಿಯದಂತೆ ಜಾಗ್ರತೆ ವಹಿಸಲಾಗುವುದು. ಮಳೆಗಾಲದ ನಂತರ ತನ್ನ ಖರ್ಚಿನಲ್ಲಿ ತಡೆಗೋಡೆ ನಿರ್ಮಿಸಿ ಕೊಡುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರು.

ಈ ಭಾಗದಲ್ಲಿ ಅಂದಾಜು 200ಕ್ಕೂ ಮಿಕ್ಕಿ ವಾಸದ ಮನೆಗಳಿದ್ದು, ಖಾಸಗಿ ವ್ಯಕ್ತಿಯೊಬ್ಬರು ನಿವೇಶನ ಹೊಂದಿದ್ದು ಅವರು ಅವೈಜ್ಞಾನಿಕವಾಗಿ ಮಣ್ಣು ತೆಗೆದು ಸಮತಟ್ಟುಗೊಳಿಸಿದ್ದರಿಂದ ಬರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಮುನ್ಸೂಚನೆ ಸಿಕ್ಕಿತ್ತು. ಇದರಿಂದ ಪಂಪ್ ಹೌಸ್ ಬಡಾವಣೆಯ ನಿವಾಸಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಂಗಳವಾರ ಒತ್ತಡ ಹಾಕಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಿ.ಎಂ.ಸುರೇಶ್, ವಸಂತಿ, ರಫೀಕ್ ಖಾನ್, ಜಿನಾಸುದ್ದೀನ್, ಪ್ರಸಾದ್ ಕುಟ್ಟಪ್ಪ, ಸ್ಥಳೀಯ ನಿವಾಸಿಗಳಾದ ಬಿ.ಕೆ.ಮೋಹನ್, ರಾಜು, ರಘು, ಸಂದೀಪ್, ಹಮೀದ್ ಮತ್ತಿತರರು ಇದ್ದರು.ಸಮಸ್ಯೆ ಕುರಿತು ಬುಧವಾರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು.