ಫೆ. 15ಕ್ಕೆ ಸಂತ ಸೇವಾಲಾಲರ ಜಯಂತಿ

| Published : Feb 09 2024, 01:46 AM IST

ಸಾರಾಂಶ

ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಾಲೂಕು ಪಂಚಾಯತಿ ವತಿಯಿಂದ ಸಂತ ಸೇವಾಲಾಲರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬಂಜಾರಾ ಜಗದ್ಗುರು ಸೇವಾಲಾಲರ ಜಯಂತಿ ಫೆ.15 ರಂದು ವಿಜೃಂಭಣೆಯಿಂದ ಆಚರಣೆ ಮಾಡಲು ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.ಅಂದು ಬೆಳಗ್ಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಾಲೂಕು ಪಂಚಾಯತಿ ವತಿಯಿಂದ ಸಂತ ಸೇವಾಲಾಲರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣೆಗೆಯಲ್ಲಿ ತಾಲೂಕು ಪಂಚಾಯತಿಯಿಂದ ಹುತಾತ್ಮ ವೃತ್ತ, ಹಳೆಪೊಲೀಸ್ ಠಾಣೆ, ಜುನಿಪೇಠ, ಡಾ. ಬಿ. ಆರ್‌. ಅಂಬೇಡ್ಕರ ಮಾರ್ಗದ ಮೂಲಕ ಎಪಿಎಂಸಿ ನಂತರ ಸಾಯಿನಗರದಲ್ಲಿರುವ ಪುರಸಭೆಯ ಸಾಂಸ್ಕೃತೀಕ ಭವನದ ವರೆಗೆ ಮೆರವಣಿಗೆ ತೆರಳಿ ನಂತರ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲ ಸರ್ಕಾರಿ ಅಧಿಕಾರಿಗಳು ಭಾಗವಹಿಸಬೇಕೆಂದು ಸಭೆ ನಿರ್ಧರಿಸಿತು.

ಮುಖ್ಯಕಾರ್ಯಕ್ರಮಕ್ಕೆ ಶಾಸಕ ಅಶೋಕ ಪಟ್ಟಣ ಸೇರಿದಂತೆ ಜನಪ್ರತಿನಿಧಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನುಆಮಂತ್ರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ತಾಪಂ ಇಒ ಐನಾಪೂರ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗಿರೀಶ ಪಾಟೀಲ, ಪ್ರಭಾರ ಬಿಇಒ ಪ್ರಭಾಕರ, ಪಿಎಸೈ ಸುನೀಲಕುಮಾರ ನಾಯಕ, ಮಧ್ಯಾಹ್ನ ಬಿಸಿಯೂಟದ ಸಹಾಯಕ ನಿರ್ದೇಶಕ ಮುನವಳ್ಳಿ, ಬಂಜಾರ ಅಧ್ಯಕ್ಷ ವಿಜಯಕುಮಾರ ರಾಠೋಡ, ಜಿಪಂ ಮಾಜಿ ಸದಸ್ಯ ಶಂಕರ ಲಮಾಣಿ, ಚಂದು ಲಮಾಣಿ, ಆನಂದ ಲಮಾಣಿ, ಶಿವಾನಂದ ಲಮಾಣಿ ಸೇರಿದಂತೆ ಹಲವರಿದ್ದರು.

ನಂತರ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ಫೆ.10 ರಂದು ಕಾಯಕ ಶರಣರ ಜಯಂತಿ ಫೆ.16 ರಂದು ಸವಿತಾ ಮಹರ್ಷಿ ಜಯಂತಿಯನ್ನು ತಹಸೀಲ್ದಾರ ಕಚೇರಿಯಲ್ಲಿ ಪೂಜೆ ನೇರವೇರಿಸಿ ಕಾರ್ಯಕ್ರಮ ಮಾಡುವ ಮೂಲಕ ಆಚರಿಸಲು ಸಭೆ ನಿರ್ಧರಿಸಿತು.