ಮೈಸೂರಿನ ಮೂವರು ವನ್ಯಜೀವಿ ಛಾಯಾಗ್ರಾಹಕರಿಗೆ ಎಎಫ್.ಐಪಿ ಡಿಸ್ಟಿಂಕ್ಷನ್

| Published : Aug 08 2024, 01:30 AM IST

ಮೈಸೂರಿನ ಮೂವರು ವನ್ಯಜೀವಿ ಛಾಯಾಗ್ರಾಹಕರಿಗೆ ಎಎಫ್.ಐಪಿ ಡಿಸ್ಟಿಂಕ್ಷನ್
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯಜೀವ ಛಾಯಾಗ್ರಾಹಕರಾದ ಬಿ. ಶಿವಕುಮಾರ್ (ಸ್ನೇಕ್ ಶಿವು), ಕೆ.ಜಿ. ಸಿದ್ದಲಿಂಗಪ್ರಸಾದ್, ಇಗ್ನೇಶಿಯಸ್ ಸುನಿಲ್ ಪದವಿ ಪಡೆದವರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮೂವರು ವನ್ಯಜೀವಿ ಛಾಯಾಗ್ರಾಹಕರು ಭಾರತದ ಪ್ರತಿಷ್ಠಿತ ಪೋಟೋಗ್ರಫಿ ಸಂಸ್ಥೆಯಾದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಯವರು ಪ್ರತಿ ವರ್ಷವೂ ನಡೆಸುವಂತಹ ಉನ್ನತ ಸಾಧನೆಯಾದ ಎಎಫ್.ಐಪಿ ಡಿಸ್ಟಿಂಕ್ಷನ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ,

ವನ್ಯಜೀವ ಛಾಯಾಗ್ರಾಹಕರಾದ ಬಿ. ಶಿವಕುಮಾರ್ (ಸ್ನೇಕ್ ಶಿವು), ಕೆ.ಜಿ. ಸಿದ್ದಲಿಂಗಪ್ರಸಾದ್, ಇಗ್ನೇಶಿಯಸ್ ಸುನಿಲ್ ಪದವಿ ಪಡೆದವರು.

ಈ ಪದವಿಯನ್ನು ಪಡೆಯಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದಿರಬೇಕು, ಹಾಗೂ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯ ಸದಸ್ಯತ್ವವನ್ನು ಪಡೆದಿರಬೇಕಾಗಿರುತ್ತದೆ.

ಎಎಫ್ಐಪಿ ಡಿಸ್ಟಿಂಕ್ಷನ್ ಅನ್ನು ಪಡೆಯಲು ಈವರೆಗೆ ಪಡೆದಿರುವಂತಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಬಹುಮಾನಗಳ ಮಾನದಂಡವನ್ನು ಆಧರಿಸಿ ಡಿಸ್ಟಿಂಕ್ಷನ್ ಅನ್ನು ನೀಡಲಾಗುತ್ತದೆ.