ಕೋಟದಲ್ಲಿ ನೂತನವಾಗಿ ರಚನೆಯಾದ ವರುಣತೀರ್ಥ ಕೆರೆಯ ದಡದಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ವಿವಿಧ ಈಜು ಸ್ಪರ್ಧೆಯಲ್ಲಿ ಪದಕ ಪಡೆದ ಈಜುಪಟುಗಳನ್ನು ಸನ್ಮಾನಿಸಲಾಯಿತು.
ಕೋಟ: ಕೋಟದಲ್ಲಿ ನೂತನವಾಗಿ ರಚನೆಯಾದ ವರುಣತೀರ್ಥ ಕೆರೆಯ ದಡದಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ವಿವಿಧ ಈಜು ಸ್ಪರ್ಧೆಯಲ್ಲಿ ಪದಕ ಪಡೆದ ಈಜುಪಟುಗಳನ್ನು ಸನ್ಮಾನಿಸಲಾಯಿತು.
ಪದಕ ವಿಜೇತ ಮಕ್ಕಳು ಮತ್ತು ಹೆತ್ತವರನ್ನು ಅಭಿನಂದಿಸಿ ಮಾತನಾಡಿದ ಸಂಸದ ಕೋಟ, ಗ್ರಾಮೀಣ ಪ್ರದೇಶದ ಅದರಲ್ಲೂ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಪಡೆದಿರುವುದು ನಿಜಕ್ಕೂ ಪ್ರಶಂಸನೀಯ. ಈ ವಿದ್ಯಾರ್ಥಿ ಪಟುಗಳಿಂದ ರಾಷ್ಟ್ರಕ್ಕೆ ಗೌರವ ಬರಲಿ ಎಂದು ಶುಭ ಹಾರೈಸಿದರು.ಸುಮಾರು 36 ಮಂದಿ ಪದಕ ವಿಜೇತ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಮಾತನಾಡಿ, ವರುಣತೀರ್ಥಕೆರೆ ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿದ್ದು, ಇದರಲ್ಲಿ ಈಜು ಕಲಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ನಮ್ಮೂರಿನ ವಿದ್ಯಾರ್ಥಿಗಳಿಂದ ಈಜು ಸ್ಪರ್ಧೆಯಲ್ಲಿ ಮತ್ತಷ್ಟು ಸಾಧನೆಯಾಗಲಿ ಎಂದು ಶುಭ ಹಾರೈಸಿದರು.ದಿನನಿತ್ಯ ವಿದ್ಯಾರ್ಥಿಗಳಿಗೆ ಈಜು ಕಲಿಸಿದ ಶಿಕ್ಷಕ ಶ್ರೀಧರ್ ಉಳಿತ್ತಾಯ ಅವರನ್ನು ಸನ್ಮಾನಿಸಲಾಯಿತು. ವರುಣತೀರ್ಥದ ಮೆಟ್ಟಿಲುಗಳ ಮೇಲೆ ನಡೆದ ಸರಳ ಸಮಾರಂಭದಲ್ಲಿ ಪ್ರಮೋದ್ ಹಂದೆ, ವಿಜಯ ಕಾಂಚನ್, ರವಿ ಬಾರಿಕೆರೆ, ನಾಗರಾಜ ಪ್ರಭು, ಶೇವದಿ ಸುರೇಶ್, ಅಮೃತೇಶ್ವರಿ ಅಳತ ಮಂಡಳಿ ಸದಸ್ಯ ಚಂದ್ರ ಆಚಾರ್ಯ, ಗ್ರಾಪಂ ಮಾಜಿ ಸದಸ್ಯರಾದ ಗೋಪಾಲ್ ಪೈ, ಚಂದ್ರ ಪೂಜಾರಿ, ಕುಶ ಆಚಾರ್ಯ, ಮಹಾಲಕ್ಷ್ಮಿ ಮುಂತಾದವರಿದ್ದರು. ಹರೀಶ್ ಸ್ವಾಗತಿಸಿ, ವಂದಿಸಿದರು.