ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಗ್ರೇಡ್-1 ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಡಾ.ಅಮೋಘಸಿದ್ಧ ಹಂಜಗಿ ಅವರಿಗೆ ಕಾಲೇಜಿನ ನಿರ್ವಹಣಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ನ ಸುವರ್ಣ ಕನ್ನಡಿಗ-2026 ಪ್ರಶಸ್ತಿ ಪುರಸ್ಕ್ರತ ಡಾ.ಅಮಿತ ಮಿರ್ಜಿಯವರು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಗ್ರೇಡ್-1 ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಡಾ.ಅಮೋಘಸಿದ್ಧ ಹಂಜಗಿ ಅವರಿಗೆ ಕಾಲೇಜಿನ ನಿರ್ವಹಣಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ನ ಸುವರ್ಣ ಕನ್ನಡಿಗ-2026 ಪ್ರಶಸ್ತಿ ಪುರಸ್ಕ್ರತ ಡಾ.ಅಮಿತ ಮಿರ್ಜಿಯವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಪ್ರಕಾಶ ಹಾವೇರಿಪೇಠ, ಸರ್ವಶ್ರೀ ಚಟ್ಟೇರ, ಉಸ್ಮಾನಸಾಬ್ ಮುಜಾವರ, ಮಲ್ಲಪ್ಪ ಗೋಠೆ, ಸಂಗೊಂಡ ಕುರಪಿ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ನೂತನ ಪ್ರಾಚಾರ್ಯರಿಗೆ ಅಭಿನಂದಿಸಿದರು.ಪ್ರಾಂಶುಪಾಲ ಡಾ.ಅಮೋಘಸಿದ್ಧ ಹಂಜಗಿಯವರು ಕಳೆದೆರಡು ದಶಕಗಳಿಂದ ವಿಜಯಪುರ, ಇಂಡಿ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾವು ಕರ್ತವ್ಯ ನಿರ್ವಹಿಸಿದಲ್ಲೆಲ್ಲ ಶ್ಲಾಘನೀಯವಾದಂತಹ ಶೈಕ್ಷಣಿಕ ಹಾಗೂ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದಾರೆ. ಅತ್ಯಂತ ಸರಳ, ಸಜ್ಜನಿಕೆಯ ಸ್ವಭಾವವುಳ್ಳ ಹಂಜಗಿಯವರು ನಮ್ಮ ಕಾಲೇಜಿನ ಪ್ರಾಂಶುಪಾಲರಾಗಿದ್ದು, ನಮಗೆಲ್ಲ ಸಂತಸವಾಗಿದೆ. ಇಲ್ಲಿಯೂ ಸಹ ಇವರ ದಕ್ಷತೆ ಹಾಗೂ ಪ್ರಾಮಾಣಿಕತೆಯ ಸೇವೆ ಸಿಗಲಿ, ಶೈಕ್ಷಣಿಕ ಮಾರ್ಗದರ್ಶನ ನಮ್ಮೆಲ್ಲರಿಗೆ ಲಭಿಸಲೆಂದು ಶುಭ ಹಾರೈಸುತ್ತೇನೆ.
-ಡಾ.ಅಮಿತ ಮಿರ್ಜಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ನ ಸುವರ್ಣ ಕನ್ನಡಿಗ-2026 ಪ್ರಶಸ್ತಿ ಪುರಸ್ಕ್ರತರು.ಕಾಲೇಜಿನ ಶೈಕ್ಷಣಿಕ ಪ್ರಗತಿ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ.-ಡಾ.ಅಮೋಘಸಿದ್ಧ ಹಂಜಗಿ,
ನೂತನ ಪ್ರಾಚಾರ್ಯರು.