ಸಾರಾಂಶ
ಮದ್ದೂರು ವಲಯದ ಬಿದಿರು ತಾಳಕಟ್ಟೆ ಬೀಟ್‌ನಲ್ಲಿ ಸುಮಾರು 30 ರಿಂದ 35 ವರ್ಷದ ಸತ್ತಿರುವ ಹೆಣ್ಣು ಕಾಡಾನೆ ದೇಹ ಗಸ್ತಿನಲ್ಲಿದ್ದ ಸಿಬ್ಬಂದಿ ನೋಡಿದ್ದಾರೆ.
ಗುಂಡ್ಲುಪೇಟೆ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲ ಹೆಣ್ಣು ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ಮದ್ದೂರು ವಲಯದ ಬಿದಿರು ತಾಳಕಟ್ಟೆ ಬೀಟ್‌ನಲ್ಲಿ ಸುಮಾರು 30 ರಿಂದ 35 ವರ್ಷದ ಸತ್ತಿರುವ ಹೆಣ್ಣು ಕಾಡಾನೆ ದೇಹ ಗಸ್ತಿನಲ್ಲಿದ್ದ ಸಿಬ್ಬಂದಿ ನೋಡಿದ್ದಾರೆ.ಬಳಿಕ ವಲಯ ಅರಣ್ಯಾಧಿಕಾರಿ ಪುನೀತ್ ಕುಮಾರ್, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಎಸಿಎಫ್ ಎನ್.ಪಿ.ನವೀನ್ ಕುಮಾರ್ ಸಮ್ಮುಖದಲ್ಲಿ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಶವ ಪರೀಕ್ಷೆ ನಡೆಸಿದರು.
ಶವ ಪರೀಕ್ಷೆ ಬಳಿಕ ಶವವನ್ನು ಕಾಡು ಪ್ರಾಣಿಗಳ ಆಹಾರಕ್ಕಾಗಿ ಅಲ್ಲೆ ಬಿಡಲಾಗಿದೆ. ಶವ ಪರೀಕ್ಷೆ ವರದಿ ಬಳಿಕ ಸತ್ತ ಕಾಡಾನೆ ವಿವರ ತಿಳಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ಪುನೀತ್ ಕುಮಾರ್ ತಿಳಿಸಿದ್ದಾರೆ.ಈ ಸಮಯದಲ್ಲಿ ಡಿಆರ್‌ಎಫ್‌ಒ ರವಿಕುಮಾರ್, ಎಸ್‌ಟಿಪಿಎಫ್ ಆರ್‌ಎಫ್‌ಒ ವೈರಮುಡಿ, ಬೀಟ್ ಗಾರ್ಡ್ ಶಿವಕುಮಾರ್, ಎನ್‌ಟಿಸಿಎ ಪ್ರತಿನಿಧಿ ರಘುರಾಂ ಇದ್ದರು.
19ಜಿಪಿಟಿ6ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಸಾವನ್ನಪ್ಪಿದ ಸ್ಥಳಕ್ಕೆ ಎಸಿಎಫ್ ನವೀನ್, ಆರ್‌ಎಫ್‌ಒ ಪುನೀತ್, ಡಾ.ವಾಸೀಂ ಮಿರ್ಜಾ ಭೇಟಿ ನೀಡಿದ್ದರು.