ಮಹದೇಶ್ವರ ವನ್ಯಧಾಮದಲ್ಲಿ ಹೆಣ್ಣಾನೆ ಸಾವು

| Published : Sep 13 2025, 02:04 AM IST

ಸಾರಾಂಶ

ಹನೂರು ತಾಲೂಕಿನಲ್ಲಿ ವಿಷ ಪ್ರಸಾಣದಿಂದ ಹುಲಿಗಳು ಸಾವನ್ನಪ್ಪಿದ್ದು ,ಜೊತೆಗೆ ಆನೆ ಸೇರಿದಂತೆ ಹಲವಾರು ಪ್ರಾಣಿಗಳು ಅರಣ್ಯ ಪ್ರದೇಶದಲ್ಲಿ ಜೀವ ಕಳೆದುಕೊಳ್ಳುತ್ತಿವೆ.

ಹನೂರು:

ಕುರಟ್ಟಿ ಹೊಸೂರು ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿದೆ.

ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ರಾಮಪುರ ವನ್ಯಜೀವಿ ವಲಯದ ಕೊರಟ್ಟಿ ಹೊಸೂರು ಸಮೀಪದ ದೊಡ್ಡಬಾಗಿ ಮರದ ಹಳ್ಳದ ಗಸ್ತಿನಲ್ಲಿ ಹೆಣ್ಣಾನೆಯೊಂದು ಸಾವನ್ನಪ್ಪಿರುವುದು ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಪತ್ತೆಯಾಗಿದೆ.

ಅರಣ್ಯಾಧಿಕಾರಿಗಳು ಭೇಟಿ:

ಈ ಬಗ್ಗೆ ವಲಯ ಅಧಿಕಾರಿ ಉಮಾಪತಿ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಹೆಣ್ಣಾನೆ ಮೃತಪಟ್ಟಿರುವ ಬಗ್ಗೆ ಪರಿಶೀಲಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ನಿಧನ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆನೆಯ ನಿಧನದ ನಿಖರ ಕಾರಣ ಮರಣೋತ್ತರ ಪರೀಕ್ಷೆ ನಂತರ ತಿಳಿದು ಬರಲಿದೆ.

ಕಾಡು ಪ್ರಾಣಿಗಳ ಸಾವು ಇನ್ನು ನಿಂತಿಲ್ಲ ಪ್ರಾಣಿ ಪ್ರಿಯರ ಆತಂಕ:

ಹನೂರು ತಾಲೂಕಿನಲ್ಲಿ ವಿಷ ಪ್ರಸಾಣದಿಂದ ಹುಲಿಗಳು ಸಾವನ್ನಪ್ಪಿದ್ದು ,ಜೊತೆಗೆ ಆನೆ ಸೇರಿದಂತೆ ಹಲವಾರು ಪ್ರಾಣಿಗಳು ಅರಣ್ಯ ಪ್ರದೇಶದಲ್ಲಿ ಜೀವ ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ತಾಲೂಕಿನಲ್ಲಿ ಪ್ರಾಣಿಗಳ ಸಾವು ನೋವು ಹೆಚ್ಚಾಗಿರುವುದರಿಂದ ಪ್ರಾಣಿ ಪ್ರಿಯರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಅರಣ್ಯ ಸಚಿವರು ಇತ್ತ ಗಮನಹರಿಸಿ ಕಾಡುಪ್ರಾಣಿಗಳ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.

12ಸಿಎಚ್ಎನ್15

ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ರಾಮಪುರ ವನ್ಯಜೀವಿ ವಲಯದ ಕೊರಟ್ಟಿ ಹೊಸೂರು ಸಮೀಪದ ದೊಡ್ಡಬಾಗಿ ಮರದ ಹಳ್ಳದ ಗಸ್ತಿನಲ್ಲಿ ಹೆಣ್ಣಾನೆಯೊಂದು ಸಾವನ್ನಪ್ಪಿರುವುದು.