ಆಹಾರ ಅರಸಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಸುಮಾರು 35 ವರ್ಷದ ಹೆಣ್ಣಾನೆಯು, ವಿದ್ಯುತ್ ಕಂಬದಲ್ಲಿ ಕೆಳಕ್ಕೆ ಜಗ್ಗಿದ ವಿದ್ಯುತ್ ತಂತಿಗೆ ಸೊಂಡಲು ಸ್ಪರ್ಶಸಿ ಸ್ಥಳದಲ್ಲೇ ಮೃತಪಟ್ಟಿದೆ. ಕೆಳಕ್ಕೆ ಜಗ್ಗಿದ ವಿದ್ಯುತ್ ತಂತಿಯನ್ನು ಬಿಟ್ಟು ಪಕ್ಕದಲ್ಲಿ ಹೋದ ಆನೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವೈದ್ಯಾಧಿಕಾರಿ ಡಾ.ವಿನಾಯಕ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ಆನೆಯನ್ನು ಮೃತಪಟ್ಟ ಸ್ಥಳದಲ್ಲೇ ಹೂಳಲಾಯಿತು.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಕೋಗಿಲಮನೆ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿದೆ.ಆಹಾರ ಅರಸಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಸುಮಾರು 35 ವರ್ಷದ ಹೆಣ್ಣಾನೆಯು, ವಿದ್ಯುತ್ ಕಂಬದಲ್ಲಿ ಕೆಳಕ್ಕೆ ಜಗ್ಗಿದ ವಿದ್ಯುತ್ ತಂತಿಗೆ ಸೊಂಡಲು ಸ್ಪರ್ಶಸಿ ಸ್ಥಳದಲ್ಲೇ ಮೃತಪಟ್ಟಿದೆ. ಕೆಳಕ್ಕೆ ಜಗ್ಗಿದ ವಿದ್ಯುತ್ ತಂತಿಯನ್ನು ಬಿಟ್ಟು ಪಕ್ಕದಲ್ಲಿ ಹೋದ ಆನೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವೈದ್ಯಾಧಿಕಾರಿ ಡಾ.ವಿನಾಯಕ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ಆನೆಯನ್ನು ಮೃತಪಟ್ಟ ಸ್ಥಳದಲ್ಲೇ ಹೂಳಲಾಯಿತು. ಎಸಿಎಪ್ ಮೋಹನ್, ಇಟಿಎಪ್ ಘಟಕದ ಎಸಿಎಪ್ ತ್ರಿಮೂರ್ತಿ, ಆರ್ ಎಪ್ ಒ ಬಿ.ಜೆ.ಯತೀಶ್ ಪಾಲ್ಗೊಂಡಿದ್ದರು.