ಸ್ತ್ರೀವಾದಿ ಎನ್ನುವುದು ಸಾಮಾಜಿಕ ಪ್ರಜ್ಞೆ: ಪ್ರೊ. ಕಿರಣ್ ಗಾಜನೂರ

| Published : Mar 18 2024, 01:54 AM IST

ಸ್ತ್ರೀವಾದಿ ಎನ್ನುವುದು ಸಾಮಾಜಿಕ ಪ್ರಜ್ಞೆ: ಪ್ರೊ. ಕಿರಣ್ ಗಾಜನೂರ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಡಾ.ಕಿರಣ ಎಂ ಗಾಜನೂರ ಮಾತನಾಡಿದರು. ಜಾನಪದ ಅಕಾಡೆಮಿ ನೂತನ ಸದಸ್ಯರಾಗಿ ಆಯ್ಕೆಯಾದ ಹಣಮಂತ ತನಿಕೆದಾರರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಸ್ತ್ರೀವಾದವೂ ಇಂದು ವ್ಯಾಪಕವಾಗಿ ದೃಷ್ಟಿಕೋನವು ಬೆಳೆಯುತ್ತಿರುವುದರಿಂದ, ಹೆಣ್ಣು ಪಾತ್ರಗಳ ವಿವೇಚನೆ ಮಾಡುವ ಮತ್ತು ಚರಿತ್ರೆಯನ್ನು ಪುನರ್ ಪರಿಶೀಲನೆಯಲ್ಲಿ ಕಾರ್ಯಗತದಲ್ಲಿದೆ. ಸ್ತ್ರೀವಾದಿ ಎನ್ನುವುದು ಸಾಮಾಜಿಕ ಪ್ರಜ್ಞೆ ಅಥವಾ ಅರಿವು ಎನ್ನುವುದಾಗಿದೆ ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕಿರಣ್ ಎಂ. ಗಾಜನೂರ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಎಂಬುದು ದೇಹವಲ್ಲ, ಹೆಣ್ಣು ಎಂಬುದು ಮನದಲ್ಲಿರಬೇಕು. ಕನ್ನಡ ಸಾಹಿತ್ಯವೇ ಸ್ತ್ರೀವಾದಿ ನೆಲೆಯ ಅಭಿಪ್ರಾಯವಿದೆಯೇ ಹೊರತು ಕನ್ನಡದೊಳಗಿಂದ ಸ್ತ್ರೀವಾದ ಜನಿಸಿಲ್ಲ. ಸ್ತ್ರೀವಾದದಲ್ಲಿ 3 ವಿಧಗಳಿವೆ. ಸ್ವಾಮ್ಯ ರೂಪ, ಅನಾವರಣ ಕಾಲಘಟ್ಟ, ಆತ್ಮಕತೆ ಹುಡುಕುವ ಕಾಲಘಟ್ಟಗಳಾಗಿವೆ. ಆರಂಭಿಕ ಕಾಲಘಟ್ಟದಲ್ಲಿ ರಾಜಕೀಯ ಚಳವಳಿಯಾಗಿ ಕಟ್ಟಬೇಕು. ಆ ಮೂಲಕ ಪುರಷರಲ್ಲಿ ಸಮಾನತೆ ಬೆಳೆಯಬೇಕು. ಇದಕ್ಕೆ ಹಲವಾರು ಮಹಿಳಾ ಸಾಹಿತಿಗಳು ತಮ್ಮ ಅಭಿಪ್ರಾಯವನ್ನು ಸಾಹಿತ್ಯದಲ್ಲಿ ಮುನ್ನಾಲೆಗೆ ತಂದಿದ್ದಾರೆ ಎಂದು ತಿಳಿಸಿದರು.

ಕಲಬುರಗಿ ವಿವಿಯ ಸಹಾಯಕ ಪ್ರಾಧ್ಯಾಪಕ ಮಹೇಂದ್ರ ಎಂ ನವೋದಯ ಕಾವ್ಯದ ಮೇಲೆ ವರ್ಡ್ಸ್‌ವರ್ತ್ ಪ್ರಭಾವ ಕುರಿತು ಉಪನ್ಯಾಸ ನೀಡಿದರು. ಕೊಡೇಕಲ್ ಕವಿ ವೈ.ಬಿ. ಹಾಲಭಾವಿ ಪ್ರತಿಕ್ರಿಯೆ ನೀಡಿದರು. ಕನ್ನಡ ಸಾಹಿತ್ಯ ಸಂಘಧ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ, ಕಸಾಸಂ ಉಪಾಧ್ಯಕ್ಷರಾದ ಜೆ. ಅಗಸ್ಟಿನ್, ಜಯಲಲಿತಾ ಪಾಟೀಲ್ ಮಾತನಾಡಿದರು. ದೇವು ಹೆಬ್ಬಾಳ ನಿರೂಪಿಸಿ ವಂದಿಸಿದರು.

ಸನ್ಮಾನ: ಜಾನಪದ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆ ಹಣಮಂತ ತನಿಕೆದಾರ ಅವರನ್ನು ಸನ್ಮಾನಿಸಲಾಯಿತು. ಸ್ತ್ರೀವಾದ ಮತ್ತು ನವೋದಯ ಸಾಹಿತ್ಯದಲ್ಲಿ ವರ್ಡ್ಸವರ್ತ್ ಪ್ರಭಾವದ ಕುರಿತು ಸಂವಾದ ನಡೆಯಿತು.

ನಬಿಲಾಲ ಮಕಾಂದರ, ಎಚ್. ರಾಠೋಡ್, ಕನಕಪ್ಪ ವಾಗಣಗೇರಿ, ಮಲ್ಲಯ್ಯ ಕಮತಗಿ, ವೆಂಕಟೇಶಗೌಡ, ಮಹಾಂತೇಶ ಗೋನಾಲ, ಶಕುಂತಲಾ ಜಾಲವಾದಿ, ಅರುಣ ಚಿನ್ನಾಕರ, ಪಾರ್ವತಿ ದೇಸಾಯಿ, ಚಂದ್ರು ಮಾರ್ಗೆಲ್, ಸಾಜನ್ ಶೆಟ್ಟಿ, ಪ್ರಕಾಶಚಂದ್ ಜೈನ್, ನಿರ್ಮಲಾ, ಶೇಖರಪ್ಪ, ಮಲ್ಲಪ್ಪ, ರಾಜಗುರು ಸೇರಿದಂತೆ ಇತರರಿದ್ದರು.