ಡಂಬಳ ಹೋಬಳಿಯ ಎಲ್ಲ ಜುಮ್ಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಸಂಭ್ರಮಿಸಿದರು.
ಡಂಬಳ: ಪವಿತ್ರ ರಂಜಾನ್ ಹಬ್ಬವನ್ನು ಡಂಬಳ ಹೋಬಳಿಯ ಮುಸ್ಲಿಮರು ಶನಿವಾರ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಡಂಬಳ ಗ್ರಾಮದ ಮುಸ್ಲಿಂ ಸಮಾಜದ ಧರ್ಮಗುರುಗಳಾದ ಖಾದರಸಾಬ ಮುಲ್ಲಾ ಅವರ ನೇತೃತ್ವದಲ್ಲಿ ಈದ್ ನಮಾಝ್ ಪ್ರಾರ್ಥನೆ ನಂತರ ಮಾತನಾಡಿ, ಎಲ್ಲರೂ ಪರಸ್ಪರ ಸಹೋದರರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸಬೇಕು. ಈ ವರ್ಷದಲ್ಲಿ ಉತ್ತಮ ಮಳೆ ಬೆಳೆ ಆಗಲಿ. ದೇಶದ ಆರ್ಥಿಕ ಶಕ್ತಿ ಹೆಚ್ಚಲಿ. ಎಲ್ಲರಿಗೂ ಉತ್ತಮ ಆರೋಗ್ಯ, ಸಂಪತ್ತು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.ಡಂಬಳ ಹೋಬಳಿಯ ಎಲ್ಲ ಜುಮ್ಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಸಂಭ್ರಮಿಸಿದರು.
ಡಂಬಳ ಹೋಬಳಿಯ ಡೋಣಿ, ಹಿರೇವಡ್ಡಟ್ಟಿ, ಮೇವುಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಹುತೇಕ ಎಲ್ಲ ಮಸೀದಿ- ಈದ್ಗಾಗಳಲ್ಲಿ ವಿಶೇಷ ನಮಾಜ್, ಪ್ರವಚನ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಈ ಸಂದರ್ಭದಲ್ಲಿ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಅಂಜುಮನ್ ಯುವ ಮುಖಂಡ ಖಾಜಾಹುಸೇನ ಹೊಸಪೇಟಿ, ಮಹಮ್ಮದರಫೀಕ ಮನಿಯಾರ, ರಜಾಕಸಾಬ ತಾಂಬೋಟಿ, ಮಹಮ್ಮದರಪೀಕ ಹೊಸಪೇಟಿ, ಹಿರಿಯರಾದ ಹುಸೇನಸಾಬ ಹೊಸಬಾವಿ, ಬಾಬುಸಾಬ ಮೂಲಿಮನಿ, ಚಾಂದಬಾಷಾ ಮಿರ್ಜಾನವರ, ಹುಸೇನಸಾಬ ದೊಡ್ಡಮನಿ, ಜಾಕೀರ ಮೂಲಿಮನಿ, ಬಾಬುಸಾಬ ಸರಕಾವಾಸ, ರಾಯಸಾಬ ಕಾಸ್ತಾರ, ಬುಡ್ನೆಸಾಬ ಅತ್ತಾರ, ಶಫೀಕ ಮೂಲಿಮನಿ, ಡಿ.ಡಿ. ಸೊರಟೂರ, ಅಲ್ಲಾವುದ್ದೀನ ಹೊಂಬಳ, ಚಾಂದಸಾಬ ಆಲೂರ, ನೂರಹಮ್ಮದ ಸರಕಾವಾಸ, ಮಹಮ್ಮದಗೌಸ ಅತ್ತಾರ, ದಾವಲಸಾಬ ಮಕಾಂದಾರ, ಎಂ.ಆರ್. ಆಲೂರ, ಅಸಗರಲಿ ಸರಕಾವಾಸ, ರಾಜೇಸಾಬ ಹಳ್ಳಿಕೇರಿ, ರಹಮಾನಸಾಬ ನದಾಫ, ಅಬ್ದುಲಸಾಬ ಮಕಾಂದಾರ, ರಿಯಾಜ ಚಾಂದಖಾನವರ, ಬುಡ್ನೆಸಾಬ ಮೂಲಿಮನಿ, ಮುರ್ತುಜಾ ಮನಿಯಾರ, ಮೋದಿನಸಾಬ ಆಲೂರ, ಶಬ್ಬಿರ್ ಅಣ್ಣಿಗೇರಿ, ಹಿರಿಯರು, ಯುವಕರು ಇದ್ದರು.ಮುಳಗುಂದ: ಸಂಭ್ರಮದ ರಂಜಾನ್ ಆಚರಣೆ
ಮುಳಗುಂದ: ಪಟ್ಟಣದಲ್ಲಿ ಶನಿವಾರ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮರು ಸ್ಥಳೀಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ಕೋರಿ, ಸಂಭ್ರಮಿಸಿದರು.ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯ ಕೋರಿದರು. ಪ್ರಮುಖರಾದ ತಾಜುದ್ದೀನ್ ಕಿಂಡ್ರಿ, ಮನ್ಸೂರ ಹಣಗಿ, ದಾವೂದ್ ಜಮಾಲ ಸೇರಿದಂತೆ ಹಿರಿಯರು, ಯುವಕರು ಇದ್ದರು.