ಹೊಳಲು ಗ್ರಾಮದಲ್ಲಿ ವಿವಿಧ ದೇವರುಗಳ ಉತ್ಸವ

| Published : Oct 16 2024, 12:45 AM IST

ಸಾರಾಂಶ

ಶ್ರೀದೊಡ್ಡಮ್ಮತಾಯಿ ದೇಗುಲದ ಆವರಣದಲ್ಲಿ ಮೆರವಣಿಗೆ ಮಾಡಿ ಗ್ರಾಮದ ರಂಗಮಂದಿರ ಆವರಣದಲ್ಲಿ ರಾತ್ರಿಪೂರ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಬೆಳಗ್ಗೆ ಶ್ರೀದೊಡ್ಡಯ್ಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಜಾತ್ರಾ ಮಹೋತ್ಸವ ಜರುಗಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದಲ್ಲಿ ನವರಾತ್ರಿ ಪ್ರಯುಕ್ತ ವಿವಿಧ ದೇವರುಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು. ಸೋಮವಾರ ರಾತ್ರಿ ಶ್ರೀಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಶ್ರೀದೊಡ್ಡಯ್ಯ ಸ್ವಾಮಿ, ಶ್ರೀಚಿಕ್ಕಯ್ಯ ಸ್ವಾಮಿ, ಎಚ್‌.ಮಲ್ಲಿಗೆರೆ ಗ್ರಾಮದ ಮಂತ್ರಿ, ಶ್ರೀಏಳೂರಮ್ಮ ದೇವಿ, ಶ್ರೀಹುಚ್ಚಮ್ಮ ದೇವಿ ಎಂಬ 5 ದೇವರುಗಳಿಗೆ ವಿವಿಧ ಹೂಗಳಿಂದ ಅಲಂಕರಿಸಿ, ಹೂವು-ಹೊಂಬಾಳೆ ಮಾಡಿ ನಂತರ ಪೂಜೆ ನೆರವೇರಿಸಲಾಯಿತು.

ಶ್ರೀದೊಡ್ಡಮ್ಮತಾಯಿ ದೇಗುಲದ ಆವರಣದಲ್ಲಿ ಮೆರವಣಿಗೆ ಮಾಡಿ ಗ್ರಾಮದ ರಂಗಮಂದಿರ ಆವರಣದಲ್ಲಿ ರಾತ್ರಿಪೂರ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಬೆಳಗ್ಗೆ ಶ್ರೀದೊಡ್ಡಯ್ಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಜಾತ್ರಾ ಮಹೋತ್ಸವ ಜರುಗಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.

ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ದೇವರಿಗೆ ಆರತಿ ಬೆಳಗಿಸಿ ವಿಶೇಷ ಪೂಜೆ ನೆರವೇರಿಸಿದರು.

ಮಾಜಿ ಶಾಸಕರಾದ ಎಚ್.ಬಿ.ರಾಮು, ರಾಜ್ಯ ಒಕ್ಕಲಿಗರ ಮಾಜಿ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ, ಶ್ರೀದೊಡ್ಡಯ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳಾದ ಶಂಕರ್ ಪೂಜಾರಿ, ತಮ್ಮಣ್ಣ, ಸದಾನಂದ ಹಾಗೂ ಗ್ರಾಮದ ಮುಖಂಡರಾದ ಹರಿಪ್ರಸಾದ್, ವಿಜಯಕುಮಾರ್, ಯೋಗೇಶ್ ಕುಮಾರ್, ಜಟ್ಟಿ ಕುಮಾರ್, ಎಚ್.ಡಿ .ರವಿ, ನವೀನ್, ಚಂದನ್, ನಾಗೇಶ್, ಸಚ್ಚಿದಾನಂದ, ನಿಂಗೇಗೌಡ, ಶ್ಯಾಮ್, ಚೇತನ್ ಹಾಗೂ ಅರ್ಚಕರಾದ ಪ್ರಕಾಶ್, ದೊಡ್ಡಯ್ಯ, ಜೈ ಶಂಕರ್, ಲೋಕೇಶ್ ಹಾಗೂ ಹೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು.ಅ.23 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಡ್ಯ:ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅ.23ರಂದು ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಎನ್ ಎಸ್ ಎಸ್ ವತಿಯಿಂದ ನಡೆಯುವ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜನಪದ ನೃತ್ಯ, ಜನಪದ ಗೀತೆ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ ಮುಂತಾದ ಸ್ಪರ್ಧೆಗಳನನು ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಆಸಕ್ತ ಯುವಕ/ಯುವತಿಯರು, ಯುವಕ ಯುವತಿ ಮಂಡಳಿಗಳು, ಸಂಘ ಸಂಸ್ಥೆಗಳು ಅ.23 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಕಡ್ಡಾಯವಾಗಿ ವಾಸಸ್ಥಳ ಮತ್ತು ವಯಸ್ಸಿನ ಧೃಡೀಕರಣ ಪತ್ರದೊಂದಿಗೆ ಆಗಮಿಸಿ ಹೆಸರು ನೋಂದಾಯಿಸಿಕೊಂಡು ಶಿಸ್ತು, ಬದ್ಧತೆಗಳಿಂದ ಭಾಗವಹಿಸುವುದು.ಸ್ಪರ್ಧೆಗಳಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಜಿಲ್ಲಾ ಸ್ಫರ್ಧೆಗಳಲ್ಲಿ ವಿಜೇತರಾದವರು ರಾಜ್ಯ ಹಾಗೂ ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ವಿಜೇತ ಸ್ಪರ್ಧಿಗಳು ನಗದು ಬಹುಮಾನಕ್ಕಾಗಿ ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿಯನ್ನು ನೀಡುವುದು ಕಡ್ಡಾಯವಾಗಿದೆ ಎಂದು ಮಂಡ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.