ನಾಗರಿಕತೆ ಹೆಸರಿನಲ್ಲಿ ಹಬ್ಬಗಳು ಸಾಂಸ್ಕೃತಿಕ ಚಿಂತನೆಯಿಂದ ದೂರ-ಆನವಟ್ಟಿ

| Published : Mar 30 2024, 12:50 AM IST

ನಾಗರಿಕತೆ ಹೆಸರಿನಲ್ಲಿ ಹಬ್ಬಗಳು ಸಾಂಸ್ಕೃತಿಕ ಚಿಂತನೆಯಿಂದ ದೂರ-ಆನವಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದವನ್ನು ಸಮರ್ಥವಾಗಿ ಬಳಸಿ ಉಳಿಸಿದ ಹಬ್ಬಗಳು ಈಗ ನಾಗರಿಕತೆಯ ಹೆಸರಿನಲ್ಲಿ ಸಾಂಸ್ಕೃತಿಕ, ಸಾಮಾಜಿಕ ಚಿಂತನೆಯಿಂದ ದೂರವಾಗುತ್ತಿರುವುದು ವಿಷಾದದ ಸಂಗತಿ ಎಂದು ಜನಪದ ಕಲಾವಿದ ಬಡವಪ್ಪ ಆನವಟ್ಟಿ ಖೇದ ವ್ಯಕ್ತಪಡಿಸಿದರು.

ಹಾನಗಲ್ಲ: ಜನಪದವನ್ನು ಸಮರ್ಥವಾಗಿ ಬಳಸಿ ಉಳಿಸಿದ ಹಬ್ಬಗಳು ಈಗ ನಾಗರಿಕತೆಯ ಹೆಸರಿನಲ್ಲಿ ಸಾಂಸ್ಕೃತಿಕ, ಸಾಮಾಜಿಕ ಚಿಂತನೆಯಿಂದ ದೂರವಾಗುತ್ತಿರುವುದು ವಿಷಾದದ ಸಂಗತಿ ಎಂದು ಜನಪದ ಕಲಾವಿದ ಬಡವಪ್ಪ ಆನವಟ್ಟಿ ಖೇದ ವ್ಯಕ್ತಪಡಿಸಿದರು.

ಹಾನಗಲ್ಲ ತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಕಾಮನ ಹಬ್ಬದ ಅಂಗವಾಗಿ ರಂಗಿನ ಕಾರ್ಯಕ್ರಮವನ್ನು ಕಾಮನನ್ನು ಕುರಿತು ವಿವರಿಸುವ ಹಾಡುಗಳೊಂದಿಗೆ ಚಾಲನೆ ನೀಡಿದ ಅವರು, ನಾಗರಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯೇ ದೂರವಾಗುತ್ತಿರುವುದು ಸರಿಯಲ್ಲ. ಜನಪದ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ, ಜನಪದ ಹಾಡು ಕುಣಿತ, ದೊಡ್ಡಾಟ, ಸಣ್ಣಾಟ ಸೇರಿದಂತೆ ನಮ್ಮ ಸಾಂಸ್ಕೃತಿಕ ವೈಭವದ ಪುನರುತ್ಥಾನವಾಗಬೇಕು. ಯುವ ಪೀಳಿಗೆ ನಮ್ಮ ಪುರಾತನ ಕಾಲದಿಂದ ಬಂದ ಹಬ್ಬಗಳಲ್ಲಿನ ಸಂಸ್ಕೃತಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ನಾಳೆಗೆ ನಮ್ಮ ಸಂಸ್ಕೃತಿ ಉಳಿಸಲು ಇಂದೇ ನಾವು ಸನ್ನದ್ಧರಾಗಬೇಕು ಎಂದರು.ಏಳು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಕಾಮನ ಹಬ್ಬಕ್ಕೆ ಮೆರುಗು ತರಲಾಗಿದ್ದು, ಓಕಳಿ ಅತ್ಯಂತ ಶಾಂತವಾಗಿ ಸಾಂಸ್ಕೃತಿಕವಾಗಿ ನೆರವೇರಿತು.ಸುರೇಶ ಮಡಿವಾಳರ, ಪ್ರಕಾಶ ಹಿತ್ತಲದವರ, ಧನರಾಜ ಅಗಸನಹಳ್ಳಿ, ರಾಜು ಹುಲಿ, ಮಹಾದೇವಪ್ಪ ಸೋಮಸಾಗರ, ಚನ್ನಬಸವನಗೌಡ ಬನ್ನಳ್ಳಿ, ರುದ್ರಪ್ಪ ಹರ್ಣಣಿ, ಪುಟ್ಟು ಹಿರೇಮಠ, ಫಕ್ಕೀರಪ್ಪ ಬಂಗೇರ, ಶಿವಪ್ಪ ಗುಡ್ಡೆ, ಶಿವಪುತ್ರಪ್ಪ ಹುಲಿ, ಬಸವರಾಜ ಸೋಮಸಾಗರ, ಸಿದ್ದಪ್ಪ ಕಲಕೇರಿ, ರಾಮಪ್ಪ ಬಡಮ್ಮನವರ ಸೇರಿದಂತೆ ಊರ ನಾಗರಿಕರು ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.