ಇಲ್ಲಿನ ಉಣಕಲ್ಲಿನ ಶ್ರೀ ಸಿದ್ದಪ್ಪಜ್ಜನವರ ಮೂಲ ಮಠದಲ್ಲಿ ಶ್ರೀ ಸದ್ಗರು ಸಿದ್ದಪ್ಪಜ್ಜನವರ 105ನೇ ಪುಣ್ಯಾರಾಧನೆ ನಿಮಿತ್ತ ಭಾನುವಾರ ಸಂಜೆ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಸಂಭ್ರಮದ ರಥೋತ್ಸವ ನಡೆಯಿತು.
ಹುಬ್ಬಳ್ಳಿ: ಇಲ್ಲಿನ ಉಣಕಲ್ಲಿನ ಶ್ರೀ ಸಿದ್ದಪ್ಪಜ್ಜನವರ ಮೂಲ ಮಠದಲ್ಲಿ ಶ್ರೀ ಸದ್ಗರು ಸಿದ್ದಪ್ಪಜ್ಜನವರ 105ನೇ ಪುಣ್ಯಾರಾಧನೆ ನಿಮಿತ್ತ ಭಾನುವಾರ ಸಂಜೆ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಸಂಭ್ರಮದ ರಥೋತ್ಸವ ನಡೆಯಿತು.
ಶ್ರೀ ಸಿದ್ದಪ್ಪಜ್ಜನವರ ಜಾತ್ರೆ ನಿಮಿತ್ತ ಸಿದ್ದಪ್ಪಜ್ಜನವರ ಕತೃು ಗದ್ದುಗೆಗೆ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕರಡಿ ಮಜಲು, ಡೊಕುಣಿತದೊಂದಿಗೆ ಪಾಲಕಿ ಉತ್ಸವ ನಡೆಯಿತು. ಸಂಜೆ 6ರ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ''''ಶ್ರೀ ಸಿದ್ದಪ್ಪಜ್ಜನವರ ಮಹಾರಾಜ್ ಕೀ ಜೈ'''' ಎಂದು ಜಯಘೋಷ ಕೂಗುತ್ತ, ಉತ್ತತ್ತಿ, ಬಾಳೆಹಣ್ಣು ಅರ್ಪಿಸಿದರು. ಉಣಕಲ್, ಭೈರಿದೇವರಕೊಪ್ಪ, ನವನಗರ, ಅಮರಗೋಳ ಸೇರಿದಂತೆ ಜಿಲ್ಲೆ, ರಾಜ್ಯ, ನೆರೆ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಸಿದ್ದಪ್ಪಜ್ಜನವರ ದರ್ಶನ ಪಡೆದರು.ಈ ವೇಳೆ ಶ್ರೀ ಸದ್ಗರು ಸಿದ್ದಪ್ಪಜ್ಜನವರ ಮೂಲ ಗದ್ದುಗೆ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ಉಣಕಲ್ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.